

ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ,ಸರ್ವಸ್ವವನ್ನೂ ತ್ಯಾಗ ಮಾಡಿದ ,ಅಪಾರ ಕಷ್ಟ ನಷ್ಟಗಳಿಗೆ ಎದೆಯೊಡ್ಡಿದ ನಮ್ಮ ಹೆಮ್ಮೆಯ ಸ್ವಾತಂತ್ರ್ಯ ಸೇನಾನಿಗಳಿಗೆ ರಕ್ತದಾನದ ಮೂಲಕ ಕೃತಜ್ಞತೆ ಸಲ್ಲಿಸುವುದು ನಿಜಕ್ಕೂ ಉತ್ತಮವಾದ ಕಾರ್ಯ. ರಕ್ತದಾನ ನಿಜಕ್ಕೂ ಅತ್ಯಂತ ಸಾರ್ಥಕತೆ ನೀಡುವ ಕಾರ್ಯ.ನಾನು ಕೂಡ ಇದುವರೆಗೆ ಹನ್ನೆರಡು ಬಾರಿ ರಕ್ತದಾನ ಮಾಡಿದ್ದೇನೆ. ಇಂತಹ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ಸಂಘಟಿಸುತ್ತಿರುವ ಸಂಘದ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಆಗುಂಬೆ ವಲಯ ಅರಣ್ಯಾಧಿಕಾರಿ ಮಧುಕರ ಎಸ್ ವಿ ನುಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನದಲ್ಲಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು..
ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮಾತನಾಡಿ, ಅಗತ್ಯವಿದ್ದವರಿಗೆ ಜೀವ ಉಳಿಸುವ ರಕ್ತದಾನದಂತಹ ಮಹತ್ತರವಾದ ಕಾರ್ಯವನ್ನು ತಾಲ್ಲೂಕು ಸರ್ಕಾರಿ ನೌಕರರ ಸಂಘಟನೆ ಕೆಲ ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತಿದ್ದು ಇದು ಸಮಾಜಕ್ಕೆ ಒಳ್ಳೆಯ ಪ್ರೇರಣೆಯನ್ನು ನೀಡುತ್ತಿದೆ. ಸಂಘದ ಈ ಸಮಾಜಮುಖಿ ಕಾರ್ಯಕ್ಕೆ ನಮ್ಮ ಪತ್ತಿನ ಸಹಕಾರ ಸಂಸ್ಥೆ ಹಾಗೂ ಟಿ ಎಸ್ ಟಿ ಸಂಸ್ಥೆಯ ನೌಕರರೂ ರಕ್ತದಾನ ಮಾಡುವ ಮೂಲಕ ಸಹಕರಿಸುತಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ,ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣ ರಾಜ್ಯೋತ್ಸವದ ಸಂದರ್ಭಗಳಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ,ಬಲಿದಾನ ಮಾಡಿದ ವೀರ ಸೇನಾನಿಗಳಿಗೆ ನಮ್ಮ ಪುಟ್ಟ ಕೃತಜ್ಞತೆಯನ್ನು ರಕ್ತ ದಾನದ ಮೂಲಕ ಸಲ್ಲಿಸುವ ನಮ್ಮ ಪ್ರಯತ್ನಗಳು ವಿವಿಧ ಇಲಾಖೆಗಳ ಸಹೃದಯಿ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸಮಾಜದ ವಿವಿಧ ವರ್ಗಗಳ ಸಹೃದಯಿ ಬಂಧುಗಳ ಸಹಕಾರದಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ.ಅಗತ್ಯವಿದ್ದವರ ಜೀವ ರಕ್ಷಣೆಗಾಗಿ ನಡೆಸುತ್ತಿರುವ ನಮ್ಮ ಇಂತಹ ಸಣ್ಣ ಪುಟ್ಟ ಪ್ರಯತ್ನಗಳು ಬದುಕಿನಲ್ಲಿ ಪುಟ್ಟ ಸಾರ್ಥಕತೆಯ ಭಾವವನ್ನು ಮೂಡಿಸಿದೆ.ಇದಕ್ಕೆ ಸಹಕರಿಸುತ್ತಿರುವ,ಬೆಂಬಲಿಸುತ್ತಿರುವ ಸರ್ವರನ್ನೂ ಅತ್ಯಂತ ಕೃತಜ್ಞತೆಯಿಂದ ಸ್ಮರಿಸುವುದರ ಜೊತೆಗೆ ಸರ್ವರಿಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು ಸಲ್ಲಿಸುವುದಾಗಿ ತಿಳಿಸಿದರು.
ಸಂಘದ ಕಾರ್ಯದರ್ಶಿ ರಾಮು ಬಿ,ಖಜಾಂಚಿ ಪವಿತ್ರ ಹೆಚ್ ಸಿ,ಉಪಾಧ್ಯಕ್ಷರುಗಳಾದ ಸುಷ್ಮ ಎಸ್ ಪಿ, ರಾಘವೇಂದ್ರ ಎಸ್,ಎಲ್ಲಪ್ಪ ವಡ್ಡರ್,ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್, ಸಂಘಟನಾ ಕಾರ್ಯದರ್ಶಿ ಮಂಜುನಾಥ ಕೆ ಅರ್ ,ಸಂಘದ ಮಾಜಿ ಗೌರವಾಧ್ಯಕ್ಷ ಆರ್ ಎಂ ಧರ್ಮಕುಮಾರ್, ಮ್ಯಾನೇಜರ್ ಕಾಡಪ್ಪ ಗೌಡ, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಆಗುಂಬೆ ವಲಯ ಅರಣ್ಯಾಧಿಕಾರಿ ಮಧುಕರ ಎಸ್ ವಿ, ಉಪ ವಲಯ ಅರಣ್ಯಾಧಿಕಾರಿ ಎಲ್ಲಪ್ಪ ವಡ್ಡರ್ ನೇತೃತ್ವದ ಅರಣ್ಯ ಇಲಾಖಾ ತಂಡ, ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಕಟ್ಟೆ ಮಂಜುನಾಥ್ ಮತ್ತು ಜಯಪ್ರಕಾಶ್ ನೇತೃತ್ವದ ಕಂದಾಯ ಇಲಾಖಾ ತಂಡ, ರಾಘವೇಂದ್ರ ಎಸ್ ನೇತೃತ್ವದ ಆರ್ ಡಿ ಪಿ ಆರ್ ತಂಡ, ಪ್ರಾ.ಆ.ಕೇಂದ್ರ ಆಗುಂಬೆ ವೈದ್ಯಾಧಿಕಾರಿ ಡಾ.ಅನಿಕೇತನ್ ಮತ್ತು ಹೊದಲ ಜಿ ಎ ಡಿ ವೈದ್ಯಾಧಿಕಾರಿ ಡಾ.ಗಣೇಶ್ ಕಾಮತ್ ನೇತೃತ್ವದ ಆರೋಗ್ಯ ಇಲಾಖಾ ತಂಡ, ಸಹಾಯಕ ಕೃಷಿ ನಿರ್ದೇಶಕ ಪ್ರವೀಣ್ ಮತ್ತು ಕೃಷಿ ಅಧಿಕಾರಿ ಅಜಿತ್ ನೇತೃತ್ವದ ಕೃಷಿ ಇಲಾಖಾ ತಂಡ, ಪ್ರಾ.ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘ ಮತ್ತು ಟಿ ಎಸ್ ಟಿ ತಂಡ,ಕವಿರಾಜ್ ನೇತೃತ್ವದ ಮಾರಿಕಾಂಬ ಡ್ರೈವಿಂಗ್ ಸ್ಕೂಲ್ ತಂಡಗಳ ಜೊತೆಗೆ ಭೂಮಾಪನಾ ಇಲಾಖೆ, ಪ್ರೌಢಶಾಲಾ, ಪ್ರಾಥಮಿಕ ಶಾಲಾ ವಿಭಾಗದ ಸದಸ್ಯರು ರಕ್ತದಾನ ಮಾಡಿದರು.
ಎಪ್ಪತ್ತೊಂಬತ್ತನೇ ಬಾರಿಗೆ ರಕ್ತದಾನ ಮಾಡಿದ ಆರಕ್ಷಕ ಉಪ ನಿರೀಕ್ಷಕ ಅಶ್ವಥ್ ಗೌಡ, ಮಹಿಳಾ ವಿಭಾಗದಿಂದ ರಕ್ತದಾನ ಮಾಡಿದ ಜೆ ಸಿ ಆಸ್ಪತ್ರೆಯ ತನುಜಾ ನಾಯ್ಕ್,,ಶೈಲಜಾ ಶೆಟ್ಟಿ. ಇದೇ ಪ್ರಥಮ ಬಾರಿಗೆ ರಕ್ತದಾನ ಮಾಡಿದ ಹದಿನೆಂಟರ ಹರೆಯದ ವಿದ್ಯಾರ್ಥಿ ಪ್ರಣಮ್ ಗಮನ ಸೆಳೆದರು.
ರಘುರಾಜ್ ಹೆಚ್.ಕೆ…9449553305…