
ಶಿವಮೊಗ್ಗ: ನಗರದಲ್ಲಿ ಇದೇ ಮೊದಲ ಬಾರಿಗೆ ಸಕ್ಕರೆ ಕಾಯಿಲೆ ನಿವಾರಣೆ ಮತ್ತು ನಿಯಂತ್ರಣಕ್ಕೆ ಆಲೋಪತಿ, ಆಯುರ್ವೇದ ಮತ್ತು ಯೋಗ ಸೇರಿದಂತೆ ಎಲ್ಲಾ ವೈದ್ಯಕೀಯ ಪದ್ಧತಿಗಳ ಸಮಾಗಮ ಹಾಗೂ ಮುಕ್ತ ಚರ್ಚೆಯನ್ನು 16 ಅಕ್ಟೋಬರ್ 2022 ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಈ ಸಮಾವೇಶದಲ್ಲಿ ಸಕ್ಕರೆ ಕಾಯಿಲೆಗೆ ಸಂಬಂಧ ಪಟ್ಟಂತೆ ಆಧುನಿಕ ಆವಿಷ್ಕಾರಗಳು, ಬೃಹತ್ ವಸ್ತು ಪ್ರದರ್ಶನ, ಪ್ರಾತ್ಯಕ್ಷಿಕೆ, ಸಂವಾದ, ರಸಪ್ರಶ್ನೆ ಹಾಗೂ ಉಪನ್ಯಾಸವನ್ನು ಏರ್ಪಡಿಸಲಾಗಿದೆ.
ಎಲ್ಲರೂ ಈ ಸಮಾವೇಶದಲ್ಲಿ ಭಾಗವಹಿಸಿ ಸಕ್ಕರೆ ಕಾಯಿಲೆ ಕುರಿತಾಗಿ ಹೆಚ್ಚಿನ ಅರಿವು ಪಡೆದುಕೊಳ್ಳಬೇಕಾಗಿ ವಿನಂತಿ.
ಈ ಪತ್ರಿಕಾಗೋಷ್ಠಿಯಲ್ಲಿ ವಿನ್ ಲೈಫ್ ಮ್ಯಾನೇಜಿಂಗ್ ಟ್ರಸ್ಟಿಗಳಾದ ಡಾII ಪೃಥ್ವಿ .ಬಿ. ಸಿ ಮತ್ತು ನಿರ್ದೇಶಕರುಗಳಾದ ಡಾII ಶಂಕರ್, ಡಾII ವಿಜಯ ಕುಮಾರ್, ಶ್ರೀ ರೆಹಮತ್ ಹಾಗೂ ಶ್ರೀ ಬದ್ರಿನಾಥ್ ಉಪಸ್ಥಿತರಿದ್ದರು.
ರಘುರಾಜ್ ಹೆಚ್.ಕೆ…9449553305…