
ಕಳೆದ 3 ತಿಂಗಳ ಹಿಂದೆ ಮುಳುಬಾಗಿಲು ಪಂಚಾಯತ್ ಭೀಮನಕಟ್ಟೆ ಗೌರಮ್ಮ ಎನ್ನುವವರು ವಿದ್ಯುತ್ ಅವಗಡದಿಂದ ಮರಣ ಹೊಂದಿದರು, ಕಳೆದ ಕೆಲ ದಿನಗಳ ಹಿಂದೆ ಅವರ ಮನೆಗೆ ಬೇಟಿ ಕೊಟ್ಟಿದ್ದ ಸಚಿವರು ಪರಿಹಾರದ ಭರವಸೆ ಕೊಟ್ಟು ಬಂದಿದ್ದರು, ಇಂದು ಬೆಳಿಗ್ಗೆ ಗೌರಮ್ಮನ ಮನೆಗೆ ಬೇಟಿ ಕೊಟ್ಟ ಸಚಿವರು 5 ಲಕ್ಷ ರೂಪಾಯಿ ಪರಿಹಾರದ ಚೆಕ್ಕನ್ನು ಗೌರಮ್ಮನ ಮಗನಿಗೆ ನೀಡಿದರು…
ಇದರ ಜೊತೆಯಲ್ಲಿ ಅದೇ ಪಂಚಾಯತ್ ನಲ್ಲಿ ವಿದ್ಯುತ್ ಅವಗಡದಿಂದ ಹಸುಗಳು ಮರಣ ಹೊಂದಿದ ಆ ಕುಟುಂಬದವರಿಗೂ 75 ಸಾವಿರ ಒಬ್ಬರಿಗೆ,25 ಸಾವಿರ ಒಬ್ಬರಿಗೆ 2 ಚೆಕ್ ವಿತರಿಸಿದರು…