
ತೀರ್ಥಹಳ್ಳಿ : ಮೇಲಿನಕುರುವಳ್ಳಿ ಕಲ್ಲು ಸಾಗಾಟಕ್ಕೆ ನಕಲಿ ಬಿಲ್ ಗಳ ಬಳಕೆಯಿಂದ ಕೋಟ್ಯಂತರ ರೂಪಾಯಿಗಳ ಸರ್ಕಾರದ ಖಜಾನೆಗೆ ವಂಚನೆ …. ಗೃಹ ಸಚಿವರೇ ,ಜಿಲ್ಲಾಧಿಕಾರಿಗಳೇ , ಈ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಲಿ ….
ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲಿನಕುರುವಳ್ಳಿ ಗ್ರಾಮದ ಸರ್ವೆ ನಂಬರ್ 75ರಲ್ಲಿ ಸುಮಾರು ಹತ್ತು ಎಕರೆ ಪ್ರದೇಶ ,38ರಲ್ಲಿ ಸುಮಾರು 20 ಎಕರೆ ಪ್ರದೇಶ ಹಾಗೂ ಬುಕ್ಲಾಪುರ ಗ್ರಾಮದ ಸರ್ವೆ ನಂಬರ್ 64ರಲ್ಲಿ ಸುಮಾರು 15 ಎಕರೆ ಈ 3ಪ್ರದೇಶಗಳ ಸೇರಿ ಸುಮಾರು 45 ಎಕರೆಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ .
ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕೇವಲ 6ಎಕರೆಗೆ ಮಾತ್ರ ಅನುಮತಿ ಇದ್ದು ಅದರಲ್ಲಿ 3ಎಕರೆ ಪ್ರದೇಶಲ್ಲಿ ಭಾರೀ ಪ್ರಮಾಣದ ನೀರು ನಿಂತಿರುವುದರಿಂದ ಕಲ್ಲು ತೆಗೆಯಲು ಆಗುತ್ತಿಲ್ಲ .ಒಟ್ಟಾರೆ ಹೀಗೆ 3ಎಕರೆಯಲ್ಲಿ ಮಾತ್ರ ಕಲ್ಲು ತೆಗೆಯಲು ಗುತ್ತಿಗೆ ಅನುಮತಿ ಇರುತ್ತದೆ .ಉಳಿದ ಅಂದಾಜು 40 ಎಕರೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು .ಈ ಸಮಯದಲ್ಲಿ ದಿನವೊಂದಕ್ಕೆ 40 ರಿಂದ 50 ಲಾರಿ ಕಲ್ಲು ಸಾಗಾಟವಾಗುತ್ತಿದೆ .
ಬೇಸಿಗೆಯಲ್ಲಿ ಪ್ರತಿದಿನ ಕನಿಷ್ಠ 150 ಲಾರಿಗಳಷ್ಟು ಕಲ್ಲು ಸಾಗಾಟವಾಗುತ್ತದೆ .ಈ ಕಲ್ಲಿಗೆ ಗುತ್ತಿಗೆದಾರರು 1500-2000ರೂಪಾಯಿಗಳಿಗೆ ಅಕ್ರಮ ಕಲ್ಲು ಸಾಗಾಟಕ್ಕೆ ರಾಯಲ್ಟಿ ಬಿಲ್ಲನ್ನು ಕೊಡುತ್ತಾರೆ .ತೀರ್ಥಹಳ್ಳಿ 3ಕಡೆಯಲ್ಲಿ ಗುತ್ತಿಗೆ ದಾರರು ರಾಯಲ್ಟಿ ಬಿಲ್ ತೆಗೆಯುವ ಕೇಂದ್ರಗಳಿವೆ .ಮೇಲಿನಕುರುವಳ್ಳಿ, ಕುರುವಳ್ಳಿ ಹಾಗೂ ತೀರ್ಥಹಳ್ಳಿ ಪಟ್ಟಣದಲ್ಲಿ ರಾಯಲ್ಟಿ ನಕಲಿ ಬಿಲ್ಲನ್ನು ತೆಗೆದುಕೊಳ್ಳುತ್ತಿದ್ದು ಲಾರಿಗಳಲ್ಲಿ ಕಲ್ಲು ಖಾಲಿ ಮಾಡಿ ವಾಪಾಸ್ ಬಂದ ತಕ್ಷಣ ರಾಯಲ್ಟಿ ಬಿಲ್ ಗಳನ್ನು ಹರಿದು ಹಾಕುತ್ತಾರೆ .ಒರಿಜಿನಲ್ ಬಿಲ್ಲುಗಳನ್ನು ಮಾತ್ರ ಇಟ್ಟುಕೊಳ್ಳುತ್ತಾರೆ .ಈ ರೀತಿ ದಿನಕ್ಕೆ ಹತ್ತಾರು ನಕಲಿ ಬಿಲ್ ಗಳು ಬಳಕೆಯಾಗುತ್ತಿವೆ .ವಿಶೇಷವಾಗಿ 30ರಿಂದ 35ಟನ್ ಕಲ್ಲು ಸಾಗಾಟಕ್ಕೆ 5ಟನ್ ರಾಯಲ್ಟಿ ಬಿಲ್ಲು .8ಟನ್ .10ಟನ್ ಬಿಲ್ಲುಗಳನ್ನು ನಮೂದಿಸಿ ಕಲ್ಲನ್ನು ಸಾಗಿಸುತ್ತಿದ್ದಾರೆ .ಈ ರೀತಿ ವಂಚನೆಗಳಿಂದ ಸರ್ಕಾರಕ್ಕೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳ ರಾಯಲ್ಟಿ ನಷ್ಟವಾಗುತ್ತಿದೆ.ಇದೊಂದು ಬಹುದೊಡ್ಡ ಆರ್ಥಿಕ ಅಪರಾಧವಾಗಿದ್ದು ಮಾನ್ಯ ಗೃಹ ಸಚಿವರು ಜಿಲ್ಲಾಧಿಕಾರಿಗಳು ಮತ್ತು ಗಣಿ ಅಧಿಕಾರಿಗಳಲ್ಲಿ ಚರ್ಚಿಸಿ ಈ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಲಿ ಎಂದು ತೀರ್ಥಹಳ್ಳಿ ತಾಲ್ಲೂಕಿನ ಜನತೆಯ ಒತ್ತಾಯವಾಗಿದೆ .
ಹಾಲಿ 40 ಎಕರೆ ಇದೇ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು .ಗ್ರಾಮದ ಸರ್ವೆ ನಂಬರ್ 38ರಲ್ಲಿ ಕೇವಲ 3 ಎಕರೆ ಅಂದರೆ 1).ರಾಮಸ್ವಾಮಿಶೆಟ್ಟಿ 20ಗುಂಟೆ ,2).ನಿತೀಶ್ ಶೆಟ್ಟಿ 20ಗುಂಟೆ ,3).ಕೆ ಸಿ ಸುಬ್ರಹ್ಮಣ್ಯ 20ಗುಂಟೆ ,4).ಬಾಲ ಮೂರ್ತಿ 20ಗುಂಟೆ 5).ತ್ರಿವೇಣಿ .ಟಿ .ಎಲ್ .ಸುರೇಶ್ ಅವರುಗಳಿಗೆ ಮಾತ್ರ ಕೆಲಸ ಮಾಡಲು ಅವಕಾಶವಿದ್ದು .ರಾಯಲ್ಟಿ ಬಿಲ್ ತೆಗೆಯಲು ಅವಕಾಶವಿರುತ್ತದೆ .ಆದರೆ 40 ಎಕರೆ ಪ್ರದೇಶದಲ್ಲಿ ನಡೆಯುವ ಅಕ್ರಮ ಕಲ್ಲು ಗಣಿಗಾರಿಕೆಗೆ ಆ ಕಲ್ಲುಗಳನ್ನು ಜಿಲ್ಲೆಯ ವಿವಿಧ ಊರುಗಳಿಗೆ ಸಾಗಿಸಲು ಈ ಗುತ್ತಿಗೆ ದಾರರು ರಾಯಲ್ಟಿ ಬಿಲ್ಲುಗಳು ಬಳಕೆಯಾಗುತ್ತಿವೆ .ಕಲರ್ ಪ್ರಿಂಟ್ ರಾಯಲ್ಟಿ ಬಿಲ್ಲುಗಳು ಮತ್ತು ಕಡಿಮೆ ಟನ್ ನಮೂದಿಸಿ ಕಲ್ಲನ್ನು ಅಕ್ರಮ ವಾಗಿ ಸಾಗಿಸಲಾಗುತ್ತಿದೆ .
ಇದು ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿರುವ ಬಹುದೊಡ್ಡ ಆರ್ಥಿಕ ಅಪರಾಧವಾಗಿರುತ್ತದೆ . ಗಣಿ ಅಧಿಕಾರಿಗಳೇ 2ವರ್ಷದ ಹಿಂದೆ ಸರ್ವೆ ನಡೆಸಿದಾಗ ಸುಮಾರು 200ರಿಂದ 250 ಕೋಟಿ ರೂಪಾಯಿಗಳ ಕಲ್ಲು ಅಕ್ರಮವಾಗಿ ಸಾಗಾಟವಾಗಿದೆ ಎಂದು ಗುತ್ತಿಗೆದಾರರಿಗೆ ಲಕ್ಷಾಂತರ₹ದಂಡ ವಿಧಿಸಿ ನೋಟಿಸ್ ನೀಡಿರುತ್ತಾರೆ .ಆದರೆ ಈವರೆಗೆ ಈ ಗುತ್ತಿಗೆಗಳಿಗೆ ಗುರುತು ಮಾಡಿ ಗಡಿ ನಿಗದಿ ಮಾಡಿ ಇರುವುದಿಲ್ಲ .ಈ ಗುತ್ತಿಗೆದಾರರು ಈ ಅಕ್ರಮ ಕಲ್ಲುಗಣಿಗಾರಿಕೆಗೆ ನೇರವಾಗಿ ಶಾಮೀಲಾಗಿದ್ದಾರೆ. ಇದು ಸರ್ಕಾರದ ಖಜಾನೆಗೆ ಕೋಟ್ಯಾಂತರ ರೂಪಾಯಿಗಳ ವಂಚನೆ ಆಗುತ್ತಿರುವ ಪ್ರಕರಣವಾಗಿರುತ್ತದೆ .
ಇಲ್ಲಿ ಯಾರು ಬಡವರಿಲ್ಲ ಬಡ ಕಾರ್ಮಿಕರ ಹೆಸರು ಹೇಳಿಕೊಂಡು ಕೋಟ್ಯಾಂತರ ರೂಪಾಯಿ ಲೂಟಿಯಾಗುತ್ತಿದೆ.ಇದೊಂದು ಗಂಭೀರ ಪ್ರಕರಣವಾಗಿದ್ದು ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿ ಕಾಣುತ್ತದೆ. ಆದರೆ ಒಳಹೊಕ್ಕು ನೋಡಿದಾಗ ದಾಖಲೆಗಳು ಪ್ರತಿಯೊಂದನ್ನು ಹೇಳುತ್ತವೆ… ಬಡ ಕೂಲಿ ಕಾರ್ಮಿಕರು ಧರಣಿಗೆ ಉಪವಾಸ ಸತ್ಯಾಗ್ರಹಕ್ಕೆ ಮಾತ್ರ ಮೀಸಲಾಗಿರುತ್ತಾರೆ. ನಿಜವಾದ ಫಲಾನುಭವಿಗಳು ಬೇರೆಯವರೇ ಇದ್ದಾರೆ… ಇದನ್ನು ಅರಿತುಕೊಂಡು ಸರ್ಕಾರಕ್ಕೆ, ಹಾಗೂ ಜನಸಾಮಾನ್ಯರಿಗೆ ಆಗುತ್ತಿರುವ ನಷ್ಟ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕು… ಇಲ್ಲಿ ಸ್ಪೋಟಕ ನಡೆಸಿ ಬಂಡೆ ಕಲ್ಲು ಹೊಡೆಯುವುದರಿಂದ ಸ್ಥಳೀಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಜೀವಿಸುವ ಕಾಲ ಬಂದಿದೆ… ಅವರಿಗೆ ಹೇಳಲು ಧೈರ್ಯ ಸಾಕಾಗುತ್ತಿಲ್ಲ… ಇದನ್ನು ಅರ್ಥ ಮಾಡಿಕೊಳ್ಳಬೇಕು… ಇದು ಪಟಾಕಿ ಶಬ್ದವಲ್ಲ… ಬಂಡೆ ಬ್ಲಾಸ್ಟ್ ಮಾಡುವ ಶಬ್ದ… ಇದರ ತೀವ್ರತೆಗೆ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ಅನಾಹುತ ವಾಗುವ ಸಾಧ್ಯತೆ ಇರುತ್ತದೆ… ಅಧಿಕಾರಿಗಳ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಇಲ್ಲಿ ಸ್ಪೋಟಕ ನಡೆಸಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಟ್ರಂಚ್ ಮಾಡಿಸಿದ್ದರು ಕೂಡ ವಾಮ ಮಾರ್ಗದಿಂದ ಕಲ್ಲು ಸಾಗಾಣಿಕೆ ಆಗುತ್ತಿದೆ ಇದನ್ನು ತಡೆಗಟ್ಟಬೇಕು…
ಪತ್ರಿಕೆ ಹಿಂದೆ ನಿರಂತರವಾಗಿ ಇದರ ಬಗ್ಗೆ ಬರೆದಾಗ ಅಧಿಕಾರಿಗಳು ಹೆಚ್ಚು ಗಮನ ಹರಿಸಿರಲಿಲ್ಲ ಆದರೆ ಈಗ ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ಇಲ್ಲಿ ಇನ್ನೊಂದು ಪ್ರಪಂಚ ಇರುವುದು ಅವರಿಗೆ ಸಾಕ್ಷಿ ಸಮೇತ ಗೊತ್ತಾಗಿದೆ.ಇದು ಇಲ್ಲಿಗೆ ನಿಲ್ಲಬಾರದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕು.ಪ್ರಕರಣವನ್ನು ಸಿಒಡಿ ಗೆ ಒಪ್ಪಿಸಬೇಕು… ಎನ್ನುವುದು ಸ್ಥಳೀಯರ ನೋಂದವರ ಮನವಿ….
ರಘುರಾಜ್ ಹೆಚ್.ಕೆ…9449553305….