Wednesday, May 14, 2025
Google search engine
Homeರಾಜ್ಯTHIRTHALLI BREAKING::ಅಕ್ರಮ ಮಧ್ಯದ ಅಡ್ಡೆಯಲ್ಲಿ ಗಲಾಟೆ ಗೃಹಸಚಿವರ ಮನೆ ಹತ್ತಿರ ಇರುವ ರಮೇಶ್ ಬಿನ್ ಕೃಷ್ಣಪ್ಪಗೌಡ...

THIRTHALLI BREAKING::ಅಕ್ರಮ ಮಧ್ಯದ ಅಡ್ಡೆಯಲ್ಲಿ ಗಲಾಟೆ ಗೃಹಸಚಿವರ ಮನೆ ಹತ್ತಿರ ಇರುವ ರಮೇಶ್ ಬಿನ್ ಕೃಷ್ಣಪ್ಪಗೌಡ ಸಾವು..!! ಗ್ರಾಮಸ್ಥರ ಪ್ರತಿಭಟನೆ..!! ಪ್ರಾಮಾಣಿಕ ತನಿಖೆ ನಡೆಸುವ ಭರವಸೆ ನೀಡಿದ ಇನ್ಸ್ಪೆಕ್ಟರ್ ಅಶ್ವತ್ಥ್ ಗೌಡ..!!! ಅಕ್ರಮ ಮಧ್ಯಕ್ಕೆ ಬೀಳುವುದೇ ಬ್ರೇಕ್..?!! ಗೃಹ ಸಚಿವರ ಮಾನ ಉಳಿಸಿ ಅಬಕಾರಿ ಅಧಿಕಾರಿಗಳೇ..!!

ತೀರ್ಥಹಳ್ಳಿ :: ಗೃಹ ಸಚಿವ ಆರಗ ಜ್ಞಾನೇಂದ್ರರವರ ಮನೆ ಸಮೀಪ ಬಾಳುಗೋಡು ರಮೇಶ ಬಿನ್ ಕೃಷ್ಣಪ್ಪಗೌಡ ಸಾವು . ಅಕ್ರಮ ಮದ್ಯ ಮಾರಾಟದ ಅಡ್ಡೆಯಲ್ಲಿ 2ದಿನಗಳ ಹಿಂದೆ ನಡೆದ ಗಲಾಟೆಯಲ್ಲಿ ರಮೇಶ ಮೆಗಾನ್ ಆಸ್ಪತ್ರೆಗೆ ದಾಖಲಾಗಿದ್ದನಂತೆ ಎಂದು ಗ್ರಾಮಸ್ಥರು ಪೊಲೀಸ್ ಅಧಿಕಾರಿಗಳ ಎದುರು ಹೇಳಿಕೆ ನೀಡಿದ್ದಾರೆ.

ತೀರ್ಥಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಅಶ್ವಥ್ ಗೌಡ ಸ್ಥಳಕ್ಕೆ ಧಾವಿಸಿ ಬಂದು ಪರಿಶೀಲನೆ ಮತ್ತು ಪ್ರಾಮಾಣಿಕ ಕ್ರಮದ ಭರವಸೆ . ಇನ್ಸ್ ಪೆಕ್ಟರ್ ಅಶ್ವತ್ಥ್ ಗೌಡ ಅವರ ಪ್ರಾಮಾಣಿಕ ತನಿಖೆಯ ಭರವಸೆಯಲಿ ಗ್ರಾಮಸ್ಥರ ಪ್ರತಿಭಟನೆ ತಾತ್ಕಾಲಿಕ ತಡೆ ….…

ತೀರ್ಥಹಳ್ಳಿನಮ್ಮ ಪತ್ರಿಕೆ ಕಳೆದ ಅನೇಕ ವರ್ಷಗಳಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕೋಟ್ಯಂತರ ರೂ ವಹಿವಾಟಿನ ಅಕ್ರಮ ಮದ್ಯ ಮಾರಾಟದ ಬಗ್ಗೆ ಸಾರ್ವಜನಿಕರ ಮತ್ತು ಸರ್ಕಾರದ ಗಮನಕ್ಕೆ ಜಾಗೃತರಾಗಲು ಸುದ್ದಿಗಳನ್ನು ಮಾಡುತ್ತಲೇ ಇದ್ದೆವು .4 -5 ದಿನಗಳ ಹಿಂದೆ ತಾಲ್ಲೂಕಿನ ಅಕ್ರಮ ಮದ್ಯದ ಮಾರಾಟದ ಬಗ್ಗೆ ಮತ್ತು ಅಬಕಾರಿ ಅಧಿಕಾರಿಗಳ ಭ್ರಷ್ಟಾಚಾರ ಲಂಚದ ಬಗ್ಗೆ ವಿಸ್ತಾರವಾದ ವರದಿಯನ್ನು ಮಾಡಲಾಗಿತ್ತು .ಅಂದು ವರದಿಯಲ್ಲಿ ಗೃಹ ಸಚಿವರ ಮನೆ ಸಮೀಪದಲ್ಲಿ ಅಕ್ರಮ ಮದ್ಯ ಮಾರಾಟದ ಅಡ್ಡೆಯಲ್ಲಿ ಕುಡಿದವರು 4–5ಜನ ಈಗಾಗಲೇ ಮರಣ ಹೊಂದಿದ್ದಾರೆ .ಸದ್ಯದಲ್ಲೇ ಮತ್ತೊಂದು ವ್ಯಕ್ತಿ ಯಮಲೋಕಕ್ಕೆ ಪ್ರಯಾಣಿಸುವ ಸ್ಥಿತಿಯಲ್ಲಿದೆ ಎಂದು ಮುನ್ಸೂಚನೆ ನೀಡಲಾಗಿತ್ತು .2ದಿನಗಳ ಹಿಂದೆ ಹೊದಲ ಬಾಳುಗೋಡು ವಿಶ್ವಾಸ್ ಕೋಳಿ ಅಂಗಡಿಯಲ್ಲಿ ಮದ್ಯ ಮಾರಾಟ ವಿಚಾರದಲ್ಲಿ ಗಲಾಟೆಯೊಂದು ನಡೆದಿದ್ದು ಎಂದು ಗ್ರಾಮಸ್ಥರು ಇಂದು ಪೊಲೀಸ್ ಇನ್ಸ್ ಪೆಕ್ಟರ್ ಅವರ ಎದುರು ಹೇಳಿದ್ದಾರೆ .

.ಅದರಲ್ಲಿ ರಮೇಶ್ ಎಂಬುವನಿಗೆ ಪೆಟ್ಟುಬಿದ್ದಿತ್ತು ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ .ರಮೇಶ್ ರಾತ್ರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾನೆ .ಸಾವು ಅಕ್ರಮ ಮದ್ಯ ಕುಡಿದೊ..??? ಅಥವಾ ಗಲಾಟೆಯಲ್ಲಿ ಪೆಟ್ಟು ಬಿದ್ದು ಮರಣ ಹೊಂದಿದ್ದನೋ…????ಎಂಬುವ ತನಿಖೆಯನ್ನು ಜವಾಬ್ದಾರಿಯಾಗಿ ಪಾರದರ್ಶಕವಾಗಿ ನಡೆಸುವುದಾಗಿ ತೀರ್ಥಹಳ್ಳಿಯ ಪೊಲೀಸ್ ಇನ್ಸ್ ಪೆಕ್ಟರ್ ಅಶ್ವತ್ಥ್ ಗೌಡ ರವರು ಭರವಸೆ ನೀಡಿದ್ದು ನೂರಾರು ಗ್ರಾಮಸ್ಥರು ನಡೆಸಬೇಕಾದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ .ರಮೇಶನ ಸಾವಿನ ಸುದ್ದಿ ತಿಳಿದ ತಕ್ಷಣ ಗೃಹ ಸಚಿವರು ತಕ್ಷಣ ಪೋಲಿಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದಾರೆ .

ತನಿಖೆಯನ್ನು ನಿಷ್ಪಕ್ಷಪಾತವಾಗಿ ಯಾವುದೇ ಒತ್ತಡ ಪ್ರಭಾವಕ್ಕೆ ಮಣಿಯದೆ ನಡೆಸಲು ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ ವಿಶ್ವಾಸ್ ಕೋಳಿ ಫಾರಂನ ವಸಂತ್ ಎಂಬುವನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ .ತೀರ್ಥಹಳ್ಳಿ ತಾಲ್ಲೂಕು ಮದ್ಯ ಮಾರಾಟಗಾರರ ಸಂಘದವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕಿನಲ್ಲಿ ನಮ್ಮ ಅಂಗಡಿಯಿಂದ– ವ್ಯವಹಾರದಿಂದ ಗ್ರಾಮೀಣ ಪ್ರದೇಶಕ್ಕೆ ಮದ್ಯ ಸರಬರಾಜು ಆಗುತ್ತಿಲ್ಲ ಎಂದಿದ್ದಾರೆ .ಹಾಗಾದರೆ ಪ್ರತಿನಿತ್ಯ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸುವ ಈ ಮದ್ಯವು ಅಕ್ರಮವೂ ತಯಾರಿಕೆಯ ದೋನಂಬರ್ ಅಥವಾ ಹೊರರಾಜ್ಯದ ಮದ್ಯವೊ ಎಂದು ನಮ್ಮ ಮಾಧ್ಯಮದಲ್ಲಿ ಪ್ರಶ್ನಿಸಲಾಗಿತ್ತು .ಈ ಬಗ್ಗೆ ಇಂದಿಗೂ ಅಬಕಾರಿ ಅಧಿಕಾರಿಗಳು ಮೌನ ವಹಿಸಿದ್ದರು .ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಬಕಾರಿ ಅಧಿಕಾರಿಗಳು ಯಾವಾಗಲು ಮೌನವಾಗಿರುತ್ತಾರೆ .ಅಕ್ರಮ ಮದ್ಯದ ಮಾರಾಟ ದಾಳಿಯನ್ನು ಪೊಲೀಸ್ ಇಲಾಖೆ ಮಾಡಬೇಕಾದಂತಹ ಸ್ಥಿತಿ ಇಲ್ಲಿದೆ .ಅಕ್ರಮ ಮದ್ಯ ಮಾರಾಟದಿಂದ ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಗಲಾಟೆ ಶಾಂತಿ ಭಂಗವಾಗುತ್ತಿದೆ .ಈ ಬಗ್ಗೆ ಗೃಹ ಸಚಿವರು ಅನೇಕ ಬಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ .ಕೆಲವು ತಿಂಗಳ ಹಿಂದೆ ಆರಗದಲ್ಲಿ ಮದ್ಯದ ಅಂಗಡಿಯಲ್ಲಿ ತಡರಾತ್ರಿಯಲ್ಲಿ ಆದಂಥ ಗಲಾಟೆಯಲ್ಲಿ ಸಾಮೂಹಿಕ ಅತ್ಯಾಚಾರದ ಹೆಸರಿನಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಮಾನ ಮರ್ಯದೆ ರಾಜ್ಯಮಟ್ಟದಲ್ಲಿ ಹರಾಜಾಗಿತ್ತು .ಹಾಗೆ ಗೃಹ ಸಚಿವರ ತವರು ಮತ್ತು ಮನೆಯ ಹತ್ತಿರ ಎಂಬ ಸುದ್ದಿಯನ್ನು ಮಾಧ್ಯಮಗಳು ಬಿತ್ತರಿಸಿದ್ದವು .ಆದರೂ ಅಬಕಾರಿ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ .

ತೀರ್ಥಹಳ್ಳಿ ತಾಲ್ಲೂಕಿನ ಅನೇಕ ಮದ್ಯದ ಅಂಗಡಿಗಳ ಹಿಂಭಾಗದಲ್ಲಿ ಬಾರ್ ಗಳಂತೆ ಮದ್ಯವನ್ನು ಚಿಲ್ಲರೆಯಾಗಿ ಕುಡಿಯಲು ಕೊಡುತ್ತಾರೆ .ತಡರಾತ್ರಿ ವ್ಯಾಪಾರ ಮಾಡುತ್ತಾರೆ .ಇದೇ ವಿಚಾರಗಳಲ್ಲಿ ತಾಲ್ಲೂಕಿನಲ್ಲಿ ನಡೆದ ಅನೇಕ ಘಟನೆಗಳು ಸಾಕ್ಷಿಯಾಗಿವೆ .ಇದು ಹೊದಲ ಬಾಳುಗೋಡಿನಲ್ಲಿ ರಮೇಶನ ಸಾವಿನ ಪ್ರಕರಣದಲ್ಲಿ ಅಬಕಾರಿ ಇಲಾಖೆಯ ಭ್ರಷ್ಟ ಲಂಚಾವತಾರ ಬೇಜವಾಬ್ದಾರಿಯಿಂದ ಗೃಹ ಸಚಿವ ಆರಗ ಜ್ಞಾನೇಂದ್ರರವರು ತಲೆತಗ್ಗಿಸುವಂತ ಸ್ಥಿತಿ ಮಾಡಿಟ್ಟಿದ್ದಾರೆ .ಏನೇ ಇರಲಿ ರಮೇಶನ ಸಾವಿನ ಪ್ರಕರಣವನ್ನು ತೀರ್ಥಹಳ್ಳಿ ಪೋಲಿಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಅಶ್ವತ್ ಗೌಡ ರವರು ತಕ್ಷಣ ಸ್ಥಳಕ್ಕೆ ಧಾವಿಸಿ ಓರ್ವ ವ್ಯಕ್ತಿಯನ್ನು ವಶಕ್ಕೆ ಬಳಸಿಕೊಂಡು ತನಿಖೆಗೆ ಮುಂದಾಗಿ ರಮೇಶನ ಸಾವಿನ ವಿಷಯದಲ್ಲಿ ಗಲಾಟೆಯಾಗಿದೆ ಎಂಬ ಸ್ಥಳದ ಮಳಿಗೆಯನ್ನು ಪಂಚಾಯಿತಿ ವತಿಯಿಂದ ಸೀಜ್ ಮಾಡಿಸಿ ಬೀಗ ಹಾಕಿಸಿದ್ದಾರೆ .

ರಮೇಶನ ಮೃತದೇಹವು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಯುತ್ತಿದ್ದು .ವೈದ್ಯಕೀಯ ಪರೀಕ್ಷೆಯ ನಂತರ ಸತ್ಯಾಸತ್ಯತೆ ಹೊರಬರಲಿದೆ .ಹಿಂದಿನಿಂದ ತೀರ್ಥಹಳ್ಳಿ ತಾಲ್ಲೂಕಿನ ಮಾರಾಟವಾಗುತ್ತಿರುವ ಅಕ್ರಮ ಮದ್ಯ (ಮದ್ಯದಂಗಡಿಯಿಂದ ತೆಗೆದುಕೊಂಡು ಹೋಗಿ ಮಾರಿದ್ದೊ? ಅಥವಾ ನಕಲಿ ಮದ್ಯ ಅಥವಾ ಹೊರ ರಾಜ್ಯದ ಮಧ್ಯಮ ತನಿಖೆಯನ್ನು ನಡೆಸಿ ಅಬಕಾರಿ ಇಲಾಖೆಯವರು ಉತ್ತರಿಸಬೇಕಾಗಿದೆ ) ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಬೇಕಿದೆ .ರಾಜ್ಯ ಗೃಹ ಸಚಿವರು ತಮ್ಮ ಕ್ಷೇತ್ರದ ಸರ್ಕಾರಿ ಅಧಿಕಾರಿಗಳಿಗೆ ಹತ್ತಾರು ಬಾರಿ ಎಚ್ಚರಿಕೆಯನ್ನು ಮಾರ್ಗದರ್ಶನವನ್ನು ಆದೇಶವನ್ನು ನೀಡಿ ಅಕ್ರಮ ಮದ್ಯವನ್ನು ನಿಲ್ಲಿಸಲು ಕಟ್ಟುನಿಟ್ಟಾಗಿ ತಿಳಿಸಿದ್ದರುಾ ಈ ರೀತಿ ನಿರಂತರವಾಗಿ ಪ್ರತಿನಿತ್ಯ ಲಕ್ಷಾಂತರವರೂಪಾಯಿಗಳ ಮದ್ಯ ಮಾರಾಟವಾಗುತ್ತಿದೆ .ತಡರಾತ್ರಿ ಮದ್ಯದಂಗಡಿಗಳು ಮುಕ್ತವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ .ಮದ್ಯದಂಗಡಿಗಳ ಹಿಂಭಾಗದಲ್ಲಿ ಮದ್ಯವನ್ನು ಕುಡಿಯಲುವ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ .ಇದನ್ನು ನಿಲ್ಲಿಸಬೇಕಾದ ಅತಿ ಅನಿವಾರ್ಯ ರಮೇಶನ ಸಾವಿನ ಪ್ರಕರಣ ಹಾಗೂ ಕೆಲವು ತಿಂಗಳ ಹಿಂದೆ ಆರಗ ಮದ್ಯದಂಗಡಿ ಹತ್ತಿರ ನಡೆದ ಗಲಾಟೆ ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ ಗಮನಿಸಬೇಕಿದೆ .

ತೀರ್ಥಹಳ್ಳಿ ಅಬಕಾರಿ ಅಧಿಕಾರಿಗಳು ತಮಗೆ ಬರುತ್ತಿರುವ ಬಹುದೊಡ್ಡ ಲಾಭದಾಯಕ ವ್ಯವಸ್ಥೆಯನ್ನು ವಂಚನೆ ಮಾಡಿಕೊಳ್ಳಲು ಸಿದ್ಧರಿಲ್ಲ .ಅಬಕಾರಿ ಇಲಾಖೆಮತ್ತು ಇಲ್ಲಿರುವ ಅಬಕಾರಿ ಅಧಿಕಾರಿಗಳು ತಾಲ್ಲೂಕಿಗೆ ಬೇಕೆ ಎಂಬ ಪ್ರಶ್ನೆಗೆ ಆರಗ ಜ್ಞಾನೇಂದ್ರರವರು ಉತ್ತರಿಸಬೇಕಾಗಿದೆ .ಪೊಲೀಸ್ ಇಲಾಖೆಯಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡು ಇಲಾಖೆಯಲ್ಲೂ ಒಳ್ಳೆಯ ಸೇವೆ ಸಲ್ಲಿಸುತ್ತಿರುವ ಡಿವೈಎಸ್ ಪಿ ಶಾಂತವೀರ ರವರು,ಗ್ರಾಮೀಣ ಸರ್ಕಲ್ ಇನ್ಸ್ ಪೆಕ್ಟರ್ ಪ್ರವೀಣ್ ನೀಲಮ್ಮನವರು ,ತೀರ್ಥಹಳ್ಳಿ ಪೊಲೀಸ್ ಠಾಣೆ ಯುವ ಅಧಿಕಾರಿ ಅಶ್ವತ್ಥ್ ಗೌಡ .ಮಾಳುಾರು ಮತ್ತು ಆಗುಂಬೆ ಸಬ್ ಇನ್ಸ್ ಪೆಕ್ಟರ್ ರವರುಗಳು ತಮ್ಮ ಇಲಾಖೆಗೆ ಹೆಚ್ಚಿನ ಹೊರೆಯಾದರೂ ಸಾರ್ವಜನಿಕರ ಹಿತದೃಷ್ಟಿಯಿಂದ ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟದ ದಂದೆಯ ಮೇಲೆ ಕಡಿವಾಣ ಹಾಕಬೇಕಿದೆ .ಅತಿ ಮುಖ್ಯವಾಗಿ ಮದ್ಯ ಅಂಗಡಿಗಳು ತಡರಾತ್ರಿ ವ್ಯಾಪಾರ ಮಾಡುತ್ತಿರುವುದು ಅಕ್ರಮವಾಗಿ ಹಿಂಭಾಗದಲ್ಲಿ ಬಾರ್ ನಂತೆ ಮಾಂಸಾಹಾರಿ ಹೋಟೆಲ್ ಗಳು ಪ್ರಾರಂಭಿಸಿಕೊಂಡು ನಿರಂತರ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಗಮನ ಹರಿಸಬೇಕಿದೆ .ಬಾಳುಗೋಡು ರಮೇಶನ ಸಾವಿನ ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಯಾವ ಕ್ರಮವನ್ನು ಜರುಗಿಸುತ್ತಾರೆಂದು ಕಾದು ನೋಡುವ .ಇಂದು ಹೊದಲ ಬಾಳುಗೋಡಿನಲ್ಲಿ ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಸೇರಿ ಪ್ರತಿಭಟನೆಗೆ ಮುಂದಾಗಿದ್ದರು .ಇನ್ಸ್ ಪೆಕ್ಟರ್ ಅಶ್ವಥ್ ಗೌಡ ರವರ ಪಾರದರ್ಶಕ ಮತ್ತು ಪ್ರಾಮಾಣಿಕ ತನಿಖೆಯ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ನಿಲ್ಲಿಸಿದರು .ಇನ್ನಾದರೂ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಲಿ .ಮತ್ತೊಂದು ವಿಶೇಷ ಹೊದಲ ಬಾಳುಗೋಡು ವಿಶ್ವಾಸ್ ಕೋಳಿ ಫಾರಂ ಹತ್ತಿರ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧದ ಬಗ್ಗೆ ದೊಡ್ಡದೊಂದು ಫಲಕವನ್ನು ಹಾಕಿದ್ದಾರೆ .ಆದರ ಕೆಳಗಡೆಯೇ ಅಕ್ರಮ ಮದ್ಯ ಮಾರಾಟದ ದಂದೆ ನಡೆದು ಈಗಾಗಲೇ ಕೆಲವರು ಪ್ರಾಣ ಬಿಟ್ಟಿದ್ದಾರೆ .ಅದರಲ್ಲೂ ರಮೇಶ್ ನ ಸಾವಿನ ಘಟನೆಯು ಸಹ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಿದ ಹಾಕಿದ ಪ್ರಚಾರ ಫಲಕದ ಕೆಳಗಡೆ ನಡೆದಿತ್ತು ಎಂಬುದು ದುರಂತ ….

ಲೇಖನ ಲಿಯೋ ಅರೋಜ…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Latest news
ಗಾಲಿ ಜನಾರ್ದನ ರೆಡ್ಡಿ ಕ್ಷೇತ್ರ‌ ಗಂಗಾವತಿ ಗೆ ಬೈ ಎಲೆಕ್ಷನ್..! ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ..! Big news :ಮಾಜಿ ಡಿಸಿಎಂ ಈಶ್ವರಪ್ಪ ನವರಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ..! ಕಾರಣವೇನು..?! ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆ ಜ... Shivamogga breaking:ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು..! Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..!