
ನಾರ್ಧನ್ ಡಯಾಸಿಸ್ ಸಮಾಜದ ಹಣೆಬರಹ ಸರಿ ಇಲ್ಲದ ಹಾಗೆ ಕಾಣುತಿದ್ದು ಅದಕ್ಕೆ ಪುಷ್ಟಿ ಎಂಬಂತೆ ಬಾಸೆಲ್ ಮಿಷನ್ ಶಿಕ್ಷಣ ಇಲಾಖೆಯ ಅಧ್ಯಕ್ಷರು ಹಾಗೂ ನಾರ್ಧನ್ ಡಯಾಸಿಸ್ ಸಂಸ್ಥೆಯ ಬಿಷಪ್ ರು ಆಗಿರುವ ಮಾರ್ಟಿನ್ ಬೋರಗಾವಿ ಅವರ ವಿರುದ್ಧ ಆರೋಪದ ಪತ್ರ ಬರೆದು ಪತ್ರಿಕೆ ವಿಳಾಸಕ್ಕೆ ಬಂದಿದ್ದು ನಾರ್ಧನ್ ಡಯಾಸಿಸ್ ಸಂಸ್ಥೆ ಜೊತೆಗೆ ಅದರ ಅಂಗ ಸಂಸ್ಥೆಯಾದ ಬಾಸೆಲ್ ಮಿಷನ್ ಹೈಯರ್ ಎಜುಕೇಶನ್ ವಿಷಯವಾಗಿ ಬಿಷಪ್ ಮಾರ್ಟಿನ್ ಬೋರಗಾವಿ ಅವರ ಹತ್ತಿರ ಸಂಬಂಧಿಗಳಾದ ವಿಜ್ಜಣ್ಣ, ಮೈಲಿ ವಿಲ್ಸನ್ ಹಾಗೂ ಪ್ರಾಪರ್ಟಿ ಮ್ಯಾನೇಜರ್ ವಿಜಯರಾಜ್ ಕನಕರಾಜ್ ಅವರ ಮೇಲೆ ಅಧಿಕಾರದ ದುರುಪಯೋಗದ ಜೊತೆ ನಿವೃತ್ತಿ ಹಂಚಿನಲ್ಲಿರುವ ಕೆಲ ಸಿಬ್ಬಂದಿಗಳಿಗೆ ಹಣದ ವಿಷಯದಲ್ಲಿ ಮಾನಸಿಕ ಹಿಂಸೆ ನೀಡುತ್ತಿರುವ ವಿಷಯ ಪತ್ರದಲ್ಲಿ ಉಲ್ಲೇಖವಾಗಿದೆ.
ಪತ್ರದ ವಿಷಯವಾಗಿ ಕೊಂಚ ತಾಳ್ಮೆಯಿಂದ ಚರ್ಚಿಸಬೇಕಾದ ಅವಶ್ಯಕತೆಯಿದ್ದು ಸತ್ಯಾಸತ್ಯತೆ ಹೊರಬರಬೇಕಾದರೆ ಶಿಕ್ಷಣ ಇಲಾಖೆಯಿಂದ ತನಿಖೆ ಆಗಲೇ ಬೇಕಾಗಿದೆ. ಒಂದು ವೇಳೆ ಪತ್ರದಲ್ಲಿ ಉಲ್ಲೇಖವಾದ ವಿಷಯಗಳು ನಿಜ ಇದ್ದಲ್ಲಿ ಬಾಸೆಲ್ ಮಿಷನ್ ಹೈಯರ್ ಎಜುಕೇಶನಿನ್ ಅಧ್ಯಕ್ಷರು ಇದರ ಬಗ್ಗೆ ಉತ್ತರ ನೀಡಬೇಕಾಗಿದೆ. ರಾಜ್ಯದ ಪ್ರತಿಷ್ಠಿತ್ ಸಂಸ್ಥೆಯಾಗಿರುವ ನಾರ್ಧನ್ ಡಯಾಸಿಸ್ ಸಂಸ್ಥೆಯ ಬಗ್ಗೆ ಕಳಕಳಿಯಿಂದ ಗುಮಾನಿ ಸುದ್ದಿಗಳ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿಯೂ ಕೇಳಿಬಂದಿದ್ದ ಆರೋಪದ ವಿಷಯಗಳನ್ನು ನಮ್ಮ ಪತ್ರಿಕೆ ಸುದ್ದಿ ಮಾಡಿದ್ದು ಇದಕ್ಕೆ ಫಲಶ್ರುತಿ ಯಾಗಿ ಇವಾಗಾ ನಮ್ಮ ಪತ್ರಿಕೆಯ ಸುದ್ದಿ ನಿಜಾನೋ ಎಂಬಂತೆ ಪತ್ರಗಳು ಬಂದು ತಲುಪಿವೆ. ಹಾಗೆ ನೊಂದ ಸಮಾಜದ ಕೆಲ ಜನ ತಮ್ಮ ನೋವುಗಳನ್ನು ಪತ್ರದ ಮೂಲಕ ಹಂಚಿಕೊಂಡಿದ್ದು ಬಿಷಪ್ ಅಂಡ್ ಟೀಮಿನ ಮೇಲೆ ಆರೋಪಗಳ ಸುರಿಮಳೆ ಸುರಿಸಿದ್ದು ಬಿಷಪ್ ಹಣಕ್ಕೋಸ್ಕರ ನಿವೃತ್ತಿ ಹೊಂದುತ್ತಿರುವ ಸಿಬ್ಬಂದಿಗಳಿಗೆ ತಾವು ಬಿಷಪ್ ಸ್ಥಾನಕ್ಕಾಗಿ ಖರ್ಚು ಮಾಡಿರುವ ಹಾಗೂ ಸಾಲ ಮಾಡಿರುವ ಹಣದ ಬಡ್ಡಿಗೆ ಹಾಗೂ ತಮ್ಮ ತಾಯಿಯ ಅನಾರೋಗ್ಯ ಹಿನ್ನಲೆ ಆಸ್ಪತ್ರೆ ಖರ್ಚಿಗೆ ಹಣದ ಅವಶ್ಯಕತೆ ಇದ್ದು ಅದಕ್ಕೆ ತಾವುಗಳು ಇಸ್ಟಿಷ್ಟು ಹಣ ಕೊಡಬೇಕು ಅಂತ ಡಿಮ್ಯಾಂಡ್ ಮಾಡಿದ್ದಾರೆ ಅನ್ನುವ ದೂರಿನ ಜೊತೆಗೆ ತಮ್ಮ ಅಡಿಯಲ್ಲಿ ಬರುವ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ಪ್ರತಿ ತಿಂಗಳು ನನಗೆ ಹಣವನ್ನು ಕೊಡಬೇಕು ಕೊಟ್ಟರೆ ಮಾತ್ರ ನಿವು ಕೊಡುವ ನಿಮ್ಮ ಶಾಲಾ ಕಾಲೇಜುಗಳ ಕಾಗದ ಪತ್ರಗಳಿಗೆ ಸಹಿ ಮಾಡುತ್ತೇನೆ ಇಲ್ಲಾ ಅಂದರೆ ಆಗುವುದಿಲ್ಲ ಅಂತ…
ಇವೆಲ್ಲವನ್ನೂ ಗಮನಿಸುತ್ತಿರುವ ಶಾಲಾ ಕಾಲೇಜುಗಳ ಸಿಬ್ಬಂದಿಗಳು ಬಿಷಪ್ ರಬ್ಬರ್ ಸ್ಟ್ಯಾಂಪ್ ಆಗಿದ್ದಾರೆ ಅನ್ನುವ ಮಾತುಗಳು ಪತ್ರದಲ್ಲಿ ಉಲ್ಲೇಖವಾಗಿವೆ. ಇನ್ನು ಪತ್ರದಲ್ಲಿ ಸಿ ಎಸ್ ಐ ಕಾಮರ್ಸ್ ಕಾಲೇಜಿನ ಶ್ರೀಮತಿ ಬೋಣಿ ಅವರಿಗೆ ಬಿಷಪ್ ಒಂದು ಲಕ್ಷ ಹಣದ ಬೇಡಿಕೆ ಇಟ್ಟಿದ್ದು ಕಿಟಲ್ ಕಾಲೇಜಿನ ಪ್ರೊ ಜಮಖಂಡಿ ನಿವೃತ್ತಿ ಆಗುವಾಗ ಹಣ ಕೊಟ್ಟ ವಿಷಯವು ಪ್ರಸ್ತಾಪವಾಗಿದೆ.ಮತ್ತೆ ನಿವೃತ್ತ ಪ್ರಾನ್ಸುಪಾಲ್ ಡಾರ್ಲಾ ಅವರ ಬಗ್ಗೆಯೂ ಬರೆದಿದ್ದು ನಾವು ಅವರನ್ನು ಸಂಪರ್ಕಿಸಿದಾಗ ಅವರ ಹೇಳಿಕೆ ಕೋಪದಿಂದ ಕೂಡಿತ್ತು,
ನಾನು ನರಕದಿಂದ ರಿಟೈರ್ಡ್ ಆಗಿ ಬಂದಿದ್ದೇನೆ ನನಗೂ ಆ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂಬ ನೋವಿನ ಮಾತು ಹೇಳತೀರದಾಗಿತ್ತು. ಇನ್ನು ಡಾರ್ಲಾ ನಿವೃತ್ತಿ ರಿಲೀವಿಂಗ್ ಪತ್ರ ಪಡೆಯಲು ಹರಸಾಹಸದ ಜೊತೆ ಮಾನಸಿಕ ಹಿಂಸೆ ಅನುಭವಿಸಿ ಬಿಷಪ್ ಮೈಲಿ ವಿಲ್ಸನ್ ಮೂಲಕ ಹಣ ಪಡೆದು ಕೊಟ್ಟಿದ್ದಾರೆ ಅಂತ. ಯಾರು ವಿಲ್ಸನ್ ಮೈಲಿ?ಸಂಸ್ಥೆಯ ಡಿ ಎಡ್ ಕಾಲೇಜಿನ ಕಟ್ಟಡದ ಒಂದು ಕೊಠಡಿಯನ್ನ ಶಿಕ್ಷಕರ ಸಂಘದ ಕಚೇರಿ ಮಾಡಿಕೊಂಡಿರುವ ಮೈಲಿ ಸಾಹೇಬರ ಆಟಾಟೋಪಕ್ಕೆ ಬ್ರೇಕ್ ಇಲ್ವಾ? ಪತ್ರದಲ್ಲಿ ಪ್ರಸ್ತಾಪಿಸಿರುವ ಹಾಗೆ ವಿಲ್ಸನ್ ಮೈಲಿ ಸ್ಮಾರ್ಟ್ ಆಗಿ ಹಣದ ಡೀಲ್ ಮಾಡುವ ವಿಧಾನ ಮಾತ್ರ ಸ್ಮಾರ್ಟ್ ಆಗಿಯೇ ಇದೆ. ಇನ್ನು ಬಲ್ಲ ಮೂಲಗಳ ಪ್ರಕಾರ ಟ್ರಸ್ಟಿ ಜಾನ್ ಕುರಿ ಹಾಗೂ ಬೈಲಿಯವರನ್ನ ಬಿಶೋಪ್ ಅಂಡ್ ಟೀಮ್ ಸಂಸ್ಥೆಯಿಂದ ನಿದಾನವಾಗಿ ಆಟಕ್ಕುಂಟು ಆದರೆ ಲೆಕ್ಕಕ್ಕೆ ತೆಗೆದುಕೊಳ್ಳದೆ ಹಾಗೆ ಮಾಡುತ್ತಿದ್ದಾರೆ ಕಾರಣ ಕುರಿ ಸಾಹೇಬರು ಬಾಸೆಲ್ ಮಿಷನ್ ಇಂಗ್ಲಿಷ್ ಮೀಡಿಯಂ ಶಾಲೆಯ ಖಾತೆಯ ಹೆಸರಲ್ಲಿ ಐದು ಕೋಟಿ ಹಣ ಎಫ್ ಡಿ ಇಟ್ಟಿದ್ದೆ ಕಾರಣ ಅಂತ.
ಬಿಷಪ್ ಅಂಡ್ ಟೀಮ್ ಜಿದ್ದಿಗೆ ಬಿದ್ದವರ ಹಾಗೆ ಕುರಿ ಅವರ ಮಾತನ್ನು ಕೇಳದೆ ಕಸವನ್ನು ಕ್ಲಾಸಿನಲ್ಲೇ ಕೊಳೆಯುವ ಹಾಗೆ ಮಾಡಿದ್ದು ಸಂಗತಿ ಇದೆ ಅಂತ. ಜಾನ್ ಕುರಿ ಸಾಹೇಬರ್ ಸಹಿ ನಕಲು ಮಾಡಿ ಬ್ಯಾಂಕಿನಿಂದ ಬಿಷಪ್ ಅಂಡ್ ಟೀಮ್ ಹಣ ತಗೊಂಡಿದ್ದು ಈ ಹಿಂದೆ ಅನಾಮದೇಯ ಪತ್ರದ ಮೂಲಕ ವೈರಲ್ ಆಗಿತ್ತು.
ಮಾನ್ಯ,
ಬಿಷಪ್ ರವರೇ ನಿಮ್ಮ ವಿರುದ್ಧ ಪತ್ರದಲ್ಲಿ ಉಲ್ಲೇಖವಾಗಿರುವ ಎಲ್ಲಾ ದೂರುಗಳು ಸತ್ಯಕ್ಕೆ ದೂರ ಇದ್ದಲ್ಲಿ ಅದಕ್ಕೆ ನಿವು ಸಮಾಜದ ಜನತೆಗೆ ಉತ್ತರ ನೀಡಬೇಕಾಗಿದೆ. ಇಲ್ಲಾ ಇದು ಸತ್ಯವೇ ಆದಲ್ಲಿ ಸಮಾಜದ ಜನರು ನೀವೇ ಬಿಷಪ್ ಆಗಬೇಕೆಂದು ಹಠಕ್ಕೆ ಬಿದಿದ್ರಾ? ನಿರಂಜನ್ ಬಿಷಪ್ ರು ನಿವೃತ್ತಿ ಆಗುವ ಮುಂಚೆ ಕಾಲೇಜಿನ ಖಾತೆಯಲ್ಲಿ ಜಮಾ ಇಟ್ಟಿದ್ದ 60 ಲಕ್ಷ ರೂ. ಎಲ್ಲಿ ಹೋಯಿತು? ಪತ್ರದಲ್ಲಿ ಉಲ್ಲೆಖಿಸಿದ ಹಾಗೆ ಕೇವಲ ಮೂರು ನಾಲ್ಕು ತಿಂಗಳಲ್ಲಿ ತಾವು ಹಾಗೂ ತಮ್ನ ಟೀಮ್ ಭ್ರಷ್ಟಾಚಾರ ಮಾಡಿ ಹಣ ಪೋಲು ಮಾಡಿದ್ದೀರಿ ಎಂಬ ಆರೋಪ ಇದ್ದು ಇದರ ಬಗ್ಗೆ ನಿಮ್ಮ ವಿವರಣೆ ಅಗತ್ಯ ಇದೆ. ಪ್ರಾಪರ್ಟಿ ಮ್ಯಾನೇಜರ್ ಕನಕರಾಜ್ ಅವರ ಹಿನ್ನಲೆ ಗೊತ್ತಾ? ಯಾವ್ ಕಾರಣಕ್ಕಾಗಿ ಅವರನ್ನು ತಾವು ತಮ್ಮ ಟೀಮಿನ ಸದಸ್ಯರನ್ನಾಗಿ ನೇಮಿಸಿದ್ದು? ಇನ್ನು ಪತ್ರದಲ್ಲಿ ಬರೆದಿರುವ ವಿಷಯ ಎಷ್ಟು ಸತ್ಯವೋ ಗೊತ್ತಿಲ್ಲ ಆದರೆ ಸಮಾಜದ ಜನರು ತಮ್ಮ ಮೇಲಿದ್ದ ಒಳ್ಳೆ ಅಭಿಪ್ರಾಯ ಕಳೆದುಕೊಂಡಿದ್ದು ಕೆ ಸಿ ಡಿ ಸಂಸ್ಥೆಯ ಸಕ್ರೆಟರಿ ಸ್ಥಾನದ ಆಯ್ಕೆ ವಿಷಯದಲ್ಲಿ ಗೋಲಮಾಲ್ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆದಂತಹ ವೈರಲ್ ಸಂದೇಶ್ ಒಂದು. ಬಾಸೆಲ್ ಮಿಷನ್ ಜೂನಿಯರ್ ಕಟ್ಟಡದ ಬಳಿದ 2021 ನೇ ಇಸವಿಯಲ್ಲಿ ವಿಷಯವಾಗಿ ಅಲ್ಲಿನ ಪ್ರಾಶುಪಾಲೆ ನಿಮ್ಮ ಹತ್ತಿರದ ಸಂಬಂದಿಯು ಆಗಿರುವ ಶ್ರೀಮತಿ ಸಲೀನಾ ದಂಡಿನ ಅವರ ಕಡೆಯಿಂದ ಎಲ್ಲಾ ಖರ್ಚು ವೇಚ್ಚಗಳ ದಾಖಲೆಗಳನ್ನ ತೋರಿಸುವಿರಾ? ತಾವು ಬಿಷಪ್ ಸ್ಥಾನವನ್ನು ಅಲಂಕರಿಸಿದ ರೀತಿ ಪ್ರಶ್ನೆ ಆಗಿ ಉಳಿದಿದೆ ಬಿಷಪ್ ಚುನಾವಣೆ ಸಮಯದಲ್ಲಿ ಚುನಾವಣೆ ಅಧಿಕಾರಿಯಾಗಿದ್ದ ನಿಮ್ಮ ಹತ್ತಿರದ ಸಂಬಂದಿ ವಿಜಯ್ ದಂಡಿನ ಅವರ ಕೃಪಾ ಹಸ್ತವೇ ಕಾರಣನಾ? ಬಿಷಪ್ ಸ್ಥಾನಕ್ಕೆ ಬೇಕಾಗಿದ್ದ ಪ್ರಮಾಣ ಪತ್ರ ನಿಮ್ಮತ್ರ ಇದೆಯಾ? ಇದ್ದರು ಸಹ ಅದುಬಿಷಪ್ ಸ್ಥಾನಕ್ಕೆ ಪರಿಗಣಿಸಲ್ಪಡುತ್ತಾ? ಅದು ಯಾವ್ ಸಂಸ್ಥೆಯ ಪ್ರಮಾಣ ಪತ್ರ? ಹಾಜರಾತಿ ಮೂಲಕ ತಂದಿದ್ದಾ? ಕೆಲವು ದಿನಗಳ ಹಿಂದೆ ಬಾಸೆಲ್ ಮಿಷನ್ ಇಂಗ್ಲಿಷ್ ಮೀಡಿಯಂ ಶಾಲೆಯ ಇಬ್ಬರು ಮಹಿಳಾ ಶಿಕ್ಷಕರು ತಮ್ಮ ವಿರುದ್ದ ಹೇಳಿಕೆ ನೀಡಿ ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದ್ದರು ಈ ವಿಷಯವಾಗಿ ತಾವು ಏನನ್ನು ಹೇಳ ಬಯಸುತಿರಿ? ನಿಮ್ಮ ಸಂಬಂದಿ ಮೈಲಿ ವಿಲ್ಸನ್ ಡಿ ಎಡ್ ಕಾಲೇಜಿನ ಕಟ್ಟದಲ್ಲಿರುವ ಶಿಕ್ಷಕರ ಸಂಘದ ಕಚೇರಿ ಅಧಿಕೃತನಾ? ಇಲ್ಲಾ ಅನಧಿಕೃತನಾ? ಅನಧಿಕೃತ ಇದ್ದಲ್ಲಿ ತಾವು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲಾ? ಸಂಸ್ಥೆಯ ಏಳಿಗೆ ಬದಲು ಸಂಬಂಧವೆ ಹೆಚ್ಚಾಯಿತಾ? ಇನ್ನು ಪತ್ರದಲ್ಲಿ ಬರೆದಿರುವ ವಿಷಯದಲ್ಲೂ ನಿಮ್ಮ ಹಾಗೂ ಟೀಮಿನ ಖರ್ಚು ವೇಚ್ಚಗಳು ಸಬಾ ಪ್ರಾಂತ್ಯದಿಂದ ಜನರು ಸೇವೆಗೆ ಅಂತ ಕಾಣಿಕೆ ರೂಪದಲ್ಲಿ ಕೊಟ್ಟಿದ್ದು ಅದು ಬೇಡವಾದ ವಿಮಾನ ಪ್ರಯಾಣಕ್ಕೆ ಅಥವಾ ಸಲ್ಲದ ಕಾರ್ಯಕ್ರಮಗಳಿಗೆ ಅಲ್ಲಾ ಅಂತ ಬರೆದಿದೆ. ಸಿಬ್ಬಂದಿ ನಿವೃತ್ತಿ ಹೊಂದುವ ಮುನ್ನ ನಿಮ್ಮ ಕಚೇರಿಗೆ ಕರೆಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದೀರಾ? ಇಲ್ಲಾ ಅಂದರೆ ತನಿಖೆ ಮಾಡಿಸಿ ನಿಮ್ಮ ಗೌರವ ಕಾಪಾಡಿಕೊಳ್ಳಿ.
ಇಲ್ಲ ಇದು ಸತ್ಯವೇ ಆದಲ್ಲಿ ನಿವೃತ್ತಿ ನಂತರ ತಮ್ಮ ಕುಟುಂಬಕೋಸ್ಕರ ಅಂತ ಬಂದಿದ್ದ ಹಣದಲ್ಲಿ ನಿಮಗೆ ಯಾಕೆ ಪಾಲು ಕೊಡಬೇಕು? ಬಂದ ಪುಟ್ಟ ಹೋದ ಪುಟ್ಟ ಆಗಿ ಹೋದ ನಿರಂಜನ್ ಬಿಷಪ್ ರು ತಮ್ಮ ಕಣ್ಣೀರು ನೋಡಿದರೆ ಹೊರತು ಜನರ ಕಣ್ಣೀರನ್ನು ಒರೆಸಲಿಲ್ಲ ಅವರು ತುಂಬಿಸಿದ್ದ ಖಜಾನೆ ಬಲ್ಲ ಮೂಲಗಳ ಪ್ರಕಾರ ನಿಮ್ಮ ಹಾಗೂ ನಿಮ್ಮ ಟೀಮಿನ ಸದ್ಯಸ್ಯರ ಖಜಾನೆಗೆ ಸೇರುತ್ತಿದೆ. ಇದು ಎಷ್ಟು ಸಮಂಜಸ ಇದಕ್ಕೆ ನೀವೇ ಉತ್ತರ ಕೊಡಬೇಕು. ನಮಗೆ ಸಂಬಂಧವೆ ಇಲ್ಲದ ಮಿಷನರಿಗಳು ತಮ್ಮ ಬೆವರಿನ ಜೊತೆ ರಕ್ತ ಸುರಿಸಿ ಕಟ್ಟಿಹೋದ ಈ ಸಂಸ್ಥೆಗಳು ಯಾರ್ ಪಾಲು ಆಗುತ್ತೋ? ಬಲ್ಲ ಮೂಲಗಳ ಪ್ರಕಾರ ಟ್ರಸ್ಟಿ ಕುರಿ ಅವರು ಐದು ಕೋಟಿ ಎಫ್ ಡಿ ಮಾಡಿದ್ದ ಖಾತೆ ಸತ್ಯವೇ ಆದಲ್ಲಿ ತಾವು ಅದರ ಬಗ್ಗೆ ವಿವರಣೆ ನೀಡಬೇಕಾಗಿದೆ .ಹುಬ್ಬಳ್ಳಿಯ ಸೆಂಟ್ ಪೀಟರ್ಸ್ ಶಾಲೆಯ ಪರಿಸ್ಥಿತಿ ಏನಾಯಿತು? ಬಳ್ಳಾರಿಯ ವಾಡ್ಲಾ ಶಾಲೆಯ ಮುಂದಿನ ಗತಿ ಏನು? ಶಿಕ್ಷರಿಲ್ಲದೆ ಮುಚ್ಚುವ ಹಂತಕ್ಕೆ ಶಾಲೆಗಳು ಬಂದಿದ್ದು ಖೇದಕರ್. ಇನ್ನು ಬಲ್ಲ ಮೂಲಗಳ ಪ್ರಕಾರ ಕಾಲ್ ಫಾರ್ಮ್ ಆಗುವ ಮುಂಚೆನೇ ನಿಮ್ಮ ಟೀಮಿನ ಸದಸ್ಯರ ಮೇಲೆ ಸೆಟ್ಟಿಂಗ್ ಅನ್ನುವ ಆರೋಪಗಳಿದ್ದು ಇದು ಎಷ್ಟು ಸತ್ಯಾ? ಇವೆಲ್ಲವುದಕ್ಕೆ ನೀವೇ ಕಾರಣ ಅಂತ ಬಲ್ಲ ಮೂಲಗಳು ಹೇಳುತ್ತಿದ್ದು ಸಕ್ರೆಟರಿ ಆಗಲಿ, ಪ್ರಾಪರ್ಟಿ ಮ್ಯಾನೇಜರ್ ಆಗಲಿ, ಟ್ರಸ್ಟಿಗಳಾದ ಜಾನ್ ಕುರಿ, ಎಸ್ ಜಿ ಬೈಲಿ ಆಗಲಿ, ಇಲ್ಲ ಹ್ಯಾಂಡ್ಸಂ ವಿಲ್ಸನ್ ಮೈಲಿ ಆಗಲಿ ಕಾರಣವಾಗುವುದಿಲ್ಲ ಅಂತ.ಭದ್ರಾವತಿ ಭದ್ರಾ ಕಾಲುವೆಯಲ್ಲಿ ಈಜಿ ಬರುವ ಒಬ್ಬ ನಿಮ್ಮ ಟೀಮಿನ ಸದಸ್ಯ ಅಂತ ಬಲ್ಲ ಮೂಲಗಳು ಹೇಳಿದ್ದು ಅದರ ಜೊತೆ ಇನ್ನೊಬ್ಬರು ಹಾಸನದ ಅನೇಕಟ್ಟಣ್ಣ ತಮ್ಮಲ್ಲಿ ಇಟ್ಟು ಕೊಂಡಿದ್ದಾರೆ ಅಂತ ಹಾಗಾದರೆ ಭದ್ರಾವತಿ ಕಾಲುವೆಗೂ ಹಾಸನದ ಅನೇಕಟ್ಟಿಗೂ ನಾರ್ಧನ್ ಡಯಾಸಿಸ್ ಸಂಸ್ಥೆಗೆ ಏನು ಸಂಬಂಧ ಇದರ ಮರ್ಮವೇನು?ನಿಮ್ಮ ಅಡಿಯಲ್ಲಿ ಬರುವ ಕಾಲೇಜುಗಳ ಅಡ್ಮಿಶನ್ ಆಗುವ ವಿದ್ಯಾರ್ಥಿಗಳ ಮೂಲಕ ಬರುವ ಅಡ್ಮಿಶನ್ ಹಣದ ರಸೀದಿ ಅದೆಷ್ಟೋ ಪೋಷಕರಿಗೆ ಸಿಕ್ಕಿಲ್ಲವೆಂಬ ಗುಮಾನಿಗಳು ಇದ್ದು ಇದಕ್ಕೆ ಉತ್ತರ ನೀಡುವಿರಾ? ಶಿಕ್ಷಣ ಕ್ಷೇತ್ರಕ್ಕೆ ಸರಕಾರದಿಂದ ಕಾಲ್ ಫಾರ್ಮ್ ಮಾಡಲು ನಿಮ್ಮ ಬಳಿ ಬೈಲೋ ಅಕಸ್ಮಾತ್ ನಿಮ್ಮತ್ರ ಬೈಲೋ ಇದ್ದರು ಸಹ ಮೈನಾರಿಟಿ ಸರ್ಟಿಫಿಕೇಟ್ ಇದೆಯಾ?ಸಮಾಜದ ಬಡ ಅಭ್ಯರ್ಥಿಗಳು ಕಾಲ್ ಫಾರ್ಮ್ ಆಗುತ್ತೆ ಅನ್ನುವ ವಿಶ್ವಾಸದಲ್ಲಿದ್ದು ವಯಸ್ಸು ಮಿತಿ ಮೀರಿ ಹೋಗುವ ಆತಂಕದಲ್ಲಿದ್ದಾರೆ. ಜತನ್ನ ಅನ್ನುವವರಿಗೆ ಶಿವಮೊಗ್ಗದ ಕ್ರೈಸ್ತ ಸಮಾಜದ ಆಸ್ತಿಗೆ ಸಿಂಗಲ್ ಜಿ ಪಿ ಹೋಲ್ಡರ್ ಆಗಿ ನೇಮಿಸಿದ್ದು ಹಾಗೆ ಸಿಂಗಲ್ ಸೈನಿಂಗ ಆತೋರಿಟಿ ಕೊಟ್ಟಿದ್ದು ಎಷ್ಟು ಸರಿ?…. ಹೀಗೆ ಸಾಕಷ್ಟು ಪ್ರಶ್ನೆಗಳು ಇವೆ ಅವೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ ಪತ್ರಿಕೆ ತನಿಖಾ ವರದಿ ರೂಪದಲ್ಲಿ ಇದನ್ನು ಹೀಗೆ ಮುಂದುವರಿಸುತ್ತದೆ…. ಪತ್ರಿಕೆಗೂ ಕೂಡ ಸಾಕಷ್ಟು ಮಾಹಿತಿಗಳು ಲಭ್ಯವಾಗುತ್ತಿವೆ….
ವರದಿ: ಸಂದೀಪ್ ಬಳ್ಳಾರಿ..
ರಘುರಾಜ್ ಹೆಚ್.ಕೆ..9449553305…