ಭದ್ರಾವತಿ ತಾಲ್ಲೂಕ ತಾಲ್ಲೂಕ್ ಅಗರದಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಕುಡಿಯುವ ನೀರಲ್ಲಿ ವಿಷ..ಜನರ ಆರೋಗ್ಯದಲ್ಲಿ ಏರುಪೇರು.. ಆತಂಕಗೊಂಡ ಗ್ರಾಮಸ್ಥರು.. ಸ್ಥಳಕ್ಕೆ ಇನ್ನು ಸಂಬಂಧ ಪಟ್ಟ ಅಧಿಕಾರಿಗಳ ಭೇಟಿ ಇಲ್ಲ…
ಗ್ರಾಮದ ಜನರಲ್ಲಿ ಕುಡಿಯುವ ನೀರಿನಿಂದ ಅರೋಗ್ಯ ಏರುಪೇರು ಸುಮಾರು ದಿನಗಳಿಂದ ಕಂಡುಬಂದಿದ್ದು.. ಇದರ ಬಗ್ಗೆ ಗಂಭೀರ ವಿಚಾರಣೆ ನಡೆಸಿದಾಗ .. ಇಡೀ ಊರಿಗೆ ಬಳಕೆಯಾಗುವ ಕುಡಿಯುವ ನೀರಿನ ಟ್ಯಾಂಕ್ ಅಲ್ಲಿ ಸತ್ತ ಮತ್ತು ಕೊಳೆತ ಹಲ್ಲಿಗಳು ಹಾಗೂ ಕ್ರಿಮಿಕಿಟಗಳು ಕಂಡುಬಂದಿದ್ದು… ಟ್ಯಾಂಕ್ ಒಳಗೆ ನೋಡಿದಾಗ ಜೀವ ಜಲ್ ಎನ್ನುತ್ತದೆ.. ವರ್ಷವಾದರೂ ಟ್ಯಾಂಕ್ ಅಲ್ಲಿ ಇಳಿದು ಸ್ವಚ್ಛ ಮಾಡದ ನೀರಗಂಟಿ ಸಿಬ್ಬಂದಿ ಗಳು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ.. ಊರಿನಲ್ಲಿ ಇರುವ ಸಣ್ಣಪುಟ್ಟ ಮಕ್ಕಳು, ವೃದ್ಧರು, ಬಾಣಂತಿಯರು ಅನೇಕ ರೀತಿಯ ಜನಗಳ ಜೀವದ ಜೊತೆ ಆಟ ಆಡುತ್ತಿರುವ ಅಧಿಕಾರಿಗಳ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕು…ಟ್ಯಾಂಕ್ ಸ್ವಚ್ಛವಾಗಬೇಕು … ಇನ್ನು ಪ್ರತಿ ಮೂರು ತಿಂಗಳಿಗಾದರೂ ಟ್ಯಾಂಕನ್ನು ಸ್ವಚ್ಛಗೊಳಿಸಬೇಕು ಆ ಮೂಲಕ ಜನರ ಆರೋಗ್ಯವನ್ನು ಕಾಪಾಡಬೇಕು…
ರಘುರಾಜ್ ಹೆಚ್.ಕೆ..9449553305…