
ಭೂತಾನ್ ಅಡಿಕೆಗೆ ಭಾರತದಲ್ಲಿ ಮಾರುಕಟ್ಟೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟ ಪರಿಣಾಮ ಇಂದು ಅಡಿಕೆ ಕ್ವಿಂಟಾಲ್ ಗೆ 20 ಸಾವಿರ ರೂ ಕುಸಿದಿದೆ ಎಂದು ಕಾಂಗ್ರೆಸ್ ಮುಖಂಡರು ಹಾಗೂ ಮಲೆನಾಡು ಅಡಿಕೆ ಬೆಳೆಗಾರರ ಅಧ್ಯಯನ ಸಮಿತಿಯ ಸಂಚಾಲಕ ರಮೇಶ್ ಹೆಗ್ಡೆ ಆರೋಪಿಸಿದ್ದು.
ಅವರು ಇಂದು ಶಿವಮೊಗ್ಗದಲ್ಲಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ 10 ಲಕ್ಷ ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆ ಆಗುತ್ತೆ. ಶೇ. 80 ರಷ್ಟು ಬೆಳೆ ಕರ್ನಾಟಕದ ಅಡಿಕೆ ಉತ್ಪಾದನೆಯಿಂದ ಪೂರೈಸಲಾಗುತ್ತಿದೆ. 13 ಸಾವಿರ ಮೆಟ್ರಿಕ್ ಟನ್ ಭೂತಾನ್ ನಿಂದ ಪ್ರತಿ ವರ್ಷ ಆಮದಿಗೆ ಅವಕಾಶ ಕಲ್ಪಿಸಲಾಗಿದೆ. ಈ ನಿರ್ಧಾರ ಬಿಜೆಪಿಯ ಕೇಂದ್ರ ಗೃಹಸಚಿವರು ಕಲ್ಪಿಸಿಕೊಟ್ಟ ಕಾರಣ ರಾಜ್ಯದ ಅಡಿಕೆಗೆ ಬೆಲೆ ಕುಸಿಯುವಂತಾಗಿದೆ. ಯಾವ ಪುರುಷಾರ್ಥಕ್ಕೆ ಅಡಿಕೆ ಆಮದು ಮಾಡಿಕೊಳ್ಳಬೇಕಿತ್ತು ಎಂದು ಆರೋಪಿಸಿದರು.
59 ಸಾವಿರ ರೂ ಅಡಿಕೆ ಬೆಲೆ ಇಂದು 39 ಸಾವಿರ ರೂ ಕ್ವಿಂಟಾಲ್ ಗೆ ಕುಸಿದಿದೆ. ಇದಕ್ಕೆ ಭೂತಾನ್ ಅಡಿಕೆ ಆಮದು ಕಾರಣವಾಗಿದೆ. ಮಿಜುರೋಂ ಮಣಿಪುರಂ ಮೂಲಕ ಅಡಿಕೆ ಕಳ್ಳಸಾಗಾಣಿಕೆ ಆಗುತ್ತಿದೆ. ಮಿಜುರೋಂ ಕಾಂಗ್ರೆಸ್ ನಾಯಕರು ಮೋದಿ ಪತ್ರ ಬರೆದು ತಡೆಯಲು ಕೋರಿದ್ದರು. ಆದರೆ ಉತ್ತರ ಭಾರತ ಅದರಲ್ಲೂ ಗುಜರಾತ್, ರಾಜಸ್ಥಾನ್ ಮೊದಲಾದ ರಾಜ್ಯಗಳ ಗುಟ್ಕಾ ಮಾರಾಟಗಾರರ ಬೆಂಬಲಕ್ಜೆ ನಿಂತ ಬಿಜೆಪಿ ಸರ್ಕಾರ ಕಳ್ಳ ಮಾಲುಗಳನ್ನ ತಡೆಯಲು ವಿಫಲವಾಗಿದೆ ಎಂದರು.
ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ರಾಜೀನಾಮೆ ಕೊಡಬೇಕು:
ಇಂಡೋನೇಷಿಯಾದ ಕಳಪೆ ಗುಣಮಟ್ಟದ ಅಡಿಕೆಯನ್ನ ಶ್ರೀಲಂಕಾದಿಂದ ಭಾರತಕ್ಕೆ ಲಗ್ಗೆ ಇಡುತ್ತಿವೆ. ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ಎಲೆಚುಕ್ಕಿ ರೋಗ ಬಂದಿರುವ 25 ಸಾವಿರ ಹೆಕ್ಟೇರ್ ಜಮೀನಿನಲ್ಲಿ ಅಡಿಕೆ ಬೆಳೆ ಎಲೆಚುಕ್ಕಿ ರೋಗ ಕಾಣಿಸುತ್ತಿದೆ ಎಲ್ಲೂ ಪ್ರವಾಸ ಮಾಡ್ತಿಲ್ಲ. ಅವರು ರಾಜೀನಾಮೆ ಕೊಡಬೇಕು ಎಂದರು.
ಕರ್ನಾಟಕ ರಾಜ್ಯದ 23 ಜಿಲ್ಲೆಯಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. 10 ಜಿಲ್ಲೆ ಅಡಿಕೆ ಅವಲಂಬಿತ ಜಿಲ್ಲೆಗಳು ಅಡಿಕೆ ಕಾರ್ಯಪಡೆಯ ಅಧ್ಯಕ್ಷರಾದ ಗೃಹ ಸಚಿವರು ಭೂತಾನ್ ನಿಂದ ಬರುವ ಅಡಿಕೆ ಭಾರತಕ್ಕೆ ಬರುತ್ತಿದೆ ಎಂದಾಗ ಮಾರುಕಟ್ಟೆಯ ಮೇಲೆ ಪರಿಣಾಮ ಬೀರೊಲ್ಲವೆಂದಿದ್ದರು. ಆದರೆ ಈಗ 20 ಸಾವಿರ ರೂ ಕ್ವಿಂಟಾಲ್ ಗೆ ಕಡಿಮೆ ಆಗಿದೆ. ಯಾರು ಜವಬ್ದಾರರು ಇದಕ್ಕೆ ಎಂದರು.
ಸಂಸದ ರಾಘವೇಂದ್ರರಿಗೆ ಸವಾಲು ಹಾಕಿದ ರಮೇಶ್ ಹೆಗ್ಡೆ:
ಸಂಸದರು ಶಿವಮೊಗ್ಗ ಜಿಲ್ಲೆಯಿಂದ ಪ್ರತಿನಿಧಿಸುತ್ತಾರೆ. ಆದರೆ ಒಮ್ಮೆಯೂ ಅಡಿಕೆ ಸಮಸ್ಯೆಯ ಬಗ್ಗೆ ಒಮ್ಮೆಯೂ ಮಾತನಾಡಲಿಲ್ಲ. ನಿಜವಾಗಿಯೂ ಶಿವಮೊಗ್ಗದ ಜನತೆಯ ಜೊತೆ ಸಂಸದರು ಇದ್ದರೆ ಅಡಿಕೆ ಬೆಳೆಗಾರರ ಬಗ್ಗೆ ಸಂಸತ್ ನಲ್ಲಿ ಮಾತನಾಡಬೇಕೆಂದು ಸವಾಲು ಎಸೆದರು. ಇದರ ಜೊತೆಗೆ ಅಡಿಕೆಬೆಳೆಗಾರರು ಹೆಚ್ಚಿರುವ ಶಿವಮೊಗ್ಗದಲ್ಲಿ ಸಂಶೋಧನ ಕೇಂದ್ರ ಆರಂಭಿಸಲಿ ಎಂದು ಒತ್ತಾಯಿಸಿದರು.…
ಇಲ್ಲಿಯತನಕ ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ರಕ್ಷಣೆಗೆ ನಿಲ್ಲುತ್ತಿಲ್ಲ…
ಇದೀಗ ಸುಪ್ರೀಂ ಕೋರ್ಟ್ ನಲ್ಲಿ ಅಡಿಕೆ ಬೆಳೆಗಾರರ ಭವಿಷ್ಯ ನಿಂತಿದು ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಪರವಾಗಿ ನಿಲ್ಲುವ ಮೂಲಕ ರೈತರ ಹಿತ ಕಾಪಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ನಿರಂತರ ಹೋರಾಟಕ್ಕೆ ನಿಲ್ಲಬೇಕಾಗುತ್ತದೆ ಎಚ್ಚರ ಎಂದು ರಮೇಶ್ ಹೆಗ್ಡೆ ಆಗ್ರಹಿಸಿದರು….