
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಾಳೆ ರಾಜ್ಯ ಸಚಿವ ಸಂಪುಟ ಸಭೆ ನಿಗದಿಪಡಿಸಲಾಗಿದ್ದು. ಕಳೆದ ಕೆಲ ದಿನಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವಂತ ರಾಜ್ಯ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ(NHM) ನೌಕರರನ್ನು ಖಾಯಂ ಗೊಳಿಸೋ ನಿರ್ಧಾರದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಕಳೆದ 21 ದಿನಗಳಿಂದ ರಾಜ್ಯ ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕೆಲಸ ಮಾಡುತ್ತಿರುವಂತ ಒಳಗುತ್ತಿಗೆ ನೌಕರರು ನಗರದ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟಾವಧಿಯ ಮುಷ್ಕರ ನಡೆಸುತ್ತಿದ್ದಾರೆ. ತಮ್ಮನ್ನು ಖಾಯಂಗೊಳಿಸಬೇಕು ಎಂಬುದಾಗಿ ಒತ್ತಾಯಿಸಿ ನಡೆಸಲಾಗುತ್ತಿರುವಂತ ಪ್ರತಿಭಟನೆ ಇನ್ನೂ ಮುಂದುವರೆದಿದೆ.
ಈ ನಡುವೆ ಮಾರ್ಚ್ 8ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗಧಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಾ.8ರ ಬುಧವಾರ ಸಂಜೆ 4 ಗಂಟೆಗೆ ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆರೋಗ್ಯ ಇಲಾಖೆಯ ಎನ್ ಹೆಚ್‌ಎಂ ಗುತ್ತಿಗೆ ನೌಕರರ ಖಾಯಂ ವಿಷಯ ಕೂಡ ಪ್ರಸ್ತಾಪ ಆಗಲಿದೆ ಎನ್ನಲಾಗುತ್ತಿದೆ. ಎನ್ ಹೆಚ್‌ಎಂ ಎಂಡಿ ಕೆಲ ರಾಜ್ಯಗಳಲ್ಲಿ ಎನ್ ಹೆಚ್‌ಎಂ ಗುತ್ತಿಗೆ ನೌಕರರನ್ನು ಯಾವ ರೀತಿಯಾಗಿ ಖಾಯಂ ಗೊಳಿಸಲಾಗಿದೆ ಎಂಬುದಾಗಿ ನೀಡಿರುವಂತ ಮಾಹಿತಿಯನ್ನು ಕೂಡ ಚರ್ಚಿಸಲಾಗುತ್ತಿದೆ ಎನ್ನುವ ಮಾಹಿತಿ ಇದೆ.
NHM ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಎನ್ ,ಆರ್, ಎಚ್, ಎಮ್ NRHM ಎನ್ ಯು, ಹೆಚ್ ,ಎಂ NUHM ಕೂಡ ಕಾರ್ಯನಿರ್ವಹಿಸುತ್ತಿದೆ.
NRHM ಅಂದರೆ ನ್ಯಾಷನಲ್ ರೂರಲ್ ಹೆಲ್ತ್ ಮಿಷನ್ ರಾಷ್ಟ್ರೀಯ ಗ್ರಾಮಾಂತರ ಆರೋಗ್ಯ ಮಿಷನ್ ಮತ್ತು NUHM ಅಂದರೆ ನ್ಯಾಷನಲ್ ಅರ್ಬನ್ ಹೆಲ್ತ್ ಮಿಷನ್ ರಾಷ್ಟ್ರೀಯ ನಗರ ಆರೋಗ್ಯ ಮಿಷನ್ ಕೂಡ ಕಾರ್ಯನಿರ್ವಹಿಸುತ್ತವೆ. ಇದರ ವ್ಯಾಪ್ತಿಯಲ್ಲಿ ಬರುವ ಗುತ್ತಿಗೆ ನೌಕರರು ಕೂಡ ಈ ಸೌಕರ್ಯಕ್ಕೆ ಒಳಪಡುತ್ತಾರೆ..
ರಾಜ್ಯಾಧ್ಯಂತ ಆರೋಗ್ಯ ಇಲಾಖೆಯಲ್ಲಿ ಎನ್ ಹೆಚ್‌ಎಂ ಯೋಜನೆಯಡಿ ಒಟ್ಟು 21,542 ನೌಕರರು ಒಳಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಯಾವ ರೀತಿಯಾಗಿ ಇತರೆ ರಾಜ್ಯಗಳಲ್ಲಿ ಖಾಯಂಗೊಳಿಸಿದಂತೆ ಕರ್ನಾಟಕದಲ್ಲೂ ಖಾಯಂಗೊಳಿಸೋ ಬಗ್ಗೆಯೂ ಪ್ರಸ್ತಾಪಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ರಘುರಾಜ್ ಹೆಚ್.ಕೆ..9449553305…