
ತೀರ್ಥಹಳ್ಳಿ : ತಾಲೂಕಿನ ಜೆಸಿ ಆಸ್ಪತ್ರೆಯಲ್ಲಿ ಸುಮಾರು ಅರವತ್ತಮೂರು ವರ್ಷದ ಮಹಿಳೆಯೊಬ್ಬರ ಗರ್ಭಕೋಶದೊಳಗಿದ್ದ ಸಾಕಷ್ಟು ದೊಡ್ಡ ಗೆಡ್ಡೆಯೊಂದನ್ನು ಜೆ ಸಿ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ.ಅರವಿಂದ್, ಅರಿವಳಿಕೆ ತಜ್ಞ ಡಾ.ಗಣೇಶ್ ಭಟ್, ಶುಶ್ರೂಷಣಾಧಿಕಾರಿ ಗೀತಾ ಮತ್ತಿತರರಿದ್ದ ತಂಡ ಮತ್ತೊಂದು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದು ಮತ್ತೊಂದು ಸಾಧನೆ ಮಾಡಿದ್ದಾರೆ.

ಪ್ರಸ್ತುತ ಮಹಿಳೆ ಆರೋಗ್ಯವಾಗಿದ್ದು ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರ ತಂಡಕ್ಕೆ ಮಹಿಳೆಯ ಕುಟುಂಬಸ್ಥರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ದೊಡ್ಡ ದೊಡ್ಡ ವಿಶೇಷ ಸೌಕರ್ಯಗಳಿರುವ ಆಸ್ಪತ್ರೆಗಳಲ್ಲಿ ಮಾಡುವ ಅನೇಕ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಗಳನ್ನು ಜೆ ಸಿ ಆಸ್ಪತ್ರೆಯಲ್ಲೇ ಮಾಡುವುದರ ಮೂಲಕ ಮತ್ತು ಗುಣ ಮಟ್ಟದ ಚಿಕಿತ್ಸೆಯ ಮೂಲಕ ಆಸ್ಪತ್ರೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತಿರುವ ಎಲ್ಲಾ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಶ್ರಮ,ಬದ್ದತೆ ಕಾಳಜಿಗಳನ್ನು ಶ್ಲಾಘಿಸಿರುವ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ,ಕಾರ್ಯದರ್ಶಿ ಕೆ ಈಶ್ವರಪ್ಪ, ಖಜಾಂಚಿ ರಾಘವೇಂದ್ರ ಮತ್ತು ಇತರೆ ಪದಾಧಿಕಾರಿಗಳು,ಸದಸ್ಯರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ…

ರಘುರಾಜ್ ಹೆಚ್. ಕೆ…9449553305…