ಚುನಾವಣೆ ಇನ್ನೇನು ಹತ್ತಿರದಲ್ಲಿದೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಆಕಾಂಕ್ಷಿಗಳು ಟಿಕೆಟ್ ಕಾಗಿ ಬಕಪಕ್ಷಿಗಳ ತರ ಕಾಯುತ್ತಾ ನಿಂತಿದ್ದಾರೆ. ಈಗಾಗಲೇ ಜೆಡಿಎಸ್ ತನ್ನ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಸಂಭಾವ್ಯ ಪಟ್ಟಿ ಎಲ್ಲೆಡೆ ವೈರಲ್ ಆಗುತ್ತಿದೆ.
ಇದರ ಮಧ್ಯೆ ಆಡಳಿತ ಪಕ್ಷ ಬಿಜೆಪಿ ಮಾತ್ರ ತನ್ನ ಟಿಕೆಟ್ ಹಂಚಿಕೆ ವಿಚಾರವನ್ನು ಗೌಪ್ಯವಾಗಿ ಇಟ್ಟಿದೆ. ಮಾಜಿ ಮುಖ್ಯಮಂತ್ರಿ ರಾಜಾಹುಲಿ ಎಂದೇ ಖ್ಯಾತಿ ಪಡೆದಿರುವ ಬಿ ಎಸ್ ಯಡಿಯೂರಪ್ಪ ಹೇಳಿಕೆಯ ಪ್ರಕಾರ ನೋಡುವುದಾದರೆ ಈ ಸಲ ಚುನಾವಣೆಯಲ್ಲಿ ಹಲವು ಹೊಸ ಮುಖಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಹಾಲಿ ಶಾಸಕರುಗಳಿಗೆ ಬಿಜೆಪಿ ಹೈಕಮಾಂಡ್ ಕೋಕ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ ಹಲವು ಶಾಸಕರು ವಿವಿಧ ಹಗರಣಗಳಲ್ಲಿ ಸಿಲುಕಿಕೊಂಡು ತಮ್ಮ ವರ್ಚಸ್ಸನ್ನು ಕಳೆದುಕೊಂಡಿದ್ದಾರೆ.
ಹಾಲಿ ಸಚಿವರಾದ ಗೋವಿಂದ ಕಾರಜೋಳ್, ಮಾಜಿ ಸಚಿವರಾದ ಹಾಲಿ ಶಾಸಕರಾದ ಕೆ ಎಸ್ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಮಾಡಾಳ್ ವಿರುಪಾಕ್ಷಪ್ಪ ಹೀಗೆ ಹಲವು ಹೆಸರುಗಳು ಮುಂಚೂಣಿಯಲ್ಲಿವೆ.
ಆದರೆ ಎಲ್ಲವೂ ಬಿಜೆಪಿ ಹೈಕಮಾಂಡ್ ಅಂದುಕೊಂಡಂತೆ ನಡೆಯುವುದಿಲ್ಲ ಏಕೆಂದರೆ ಸ್ಥಳೀಯವಾಗಿ ಬಲಿಷ್ಠ ವಾಗಿರುವ ನಾಯಕರನ್ನು ಕಡೆಗಣಿಸಿದರೆ ಪಕ್ಷಕ್ಕೆ ಡ್ಯಾಮೇಜ್ ಎನ್ನುವ ಅರಿವು ಕೂಡ ಅವರಿಗೆ ಇದೆ.
ಆ ದೃಷ್ಟಿಯಲ್ಲಿ ನೋಡುವುದಾದರೆ ಮಾಜಿ ಸಚಿವ ಹಾಲಿ ಶಾಸಕರಾದ ಕೆ ಎಸ್ ಈಶ್ವರಪ್ಪನವರಿಗೆ ಬಿಜೆಪಿಯ ಅಲಿಖಿತ ನಿಯಮದ ಪ್ರಕಾರ ಹಾಗೂ ಭ್ರಷ್ಟಾಚಾರದ ಆರೋಪದ ನೆಪಪೋಡ್ಡಿ ಟಿಕೆಟ್ ನಿರಾಕರಿಸಿದರೆ ಸಹಜವಾಗಿ ಬಿಜೆಪಿಯ ವಿರುದ್ಧ ಸಚಿವ ಈಶ್ವರಪ್ಪ ತಿರುಗು ಬೀಳಬಹುದು. ಇಲ್ಲವೇ ತನ್ನ ಮಗ ಕೆ ಇ ಕಾಂತೇಶ್ ಕೆ ಟಿಕೆಟ್ ನೀಡಿ ಎಂದು ಕೇಳಬಹುದು. ಅದು ಸಾಧ್ಯವಾಗದಿದ್ದರೆ ಪಕ್ಷಕ್ಕೆ ಅಥವಾ ಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿಗೆ ಸಹಕರಿಸದೆ ಇರಬಹುದು. ಇದೇ ವಾತಾವರಣ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾಡಾಳ್ ವಿರೂಪಾಕ್ಷಪ್ಪ ಕ್ಷೇತ್ರದಲ್ಲೂ ಇದೆ.
ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಷಯಕ್ಕೆ ಬರುವುದಾದರೆ ಯಾವಾಗ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆದರೂ ಅಂದಿನಿಂದಲೇ ಜಗದೀಶ್ ಶೆಟ್ಟರ್ ಪಕ್ಷದಲ್ಲಿ ಮೂಲೆಗುಂಪು ಆಗುತ್ತಾ ಬರುತ್ತಿದ್ದಾರೆ ಹಾಗಾಗಿ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಸದ್ಯಕ್ಕೆ ಕುತೂಹಲವಾಗಿದೆ.
ಹೀಗೆ ಹಲವರು ಹಗರಣಗಳಿಂದ ತಮ್ಮ ವರ್ಚಸ್ಸನ್ನು ಕಳೆದುಕೊಂಡಿದ್ದರೆ, ಇನ್ನೂ ಕೆಲವರು ಬಿಜೆಪಿಯ ಅಲಿಖಿತ
ದಲಿತ ಸಮುದಾಯದ ನಾಯಕ ಗೋವಿಂದ್ ಕಾರಜೋಳ ಸ್ಥಿತಿ ಇದೆ ಆಗಿದೆ ಆದರೆ ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ಗೋವಿಂದ್ ಕಾರಜೋಳ ಪಕ್ಷಕ್ಕೆ ತಿರುಗಿ ಬೀಳುವುದು ಕಷ್ಟ ಪಕ್ಷ ಹೇಳಿದಂತೆ ಕೇಳಬಹುದು.
ಒಟ್ಟಿನಲ್ಲಿ ಈ ಸಲದ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವ ಆಸೆ ಇಟ್ಟುಕೊಂಡಿದೆ. ಆದರೆ ಭ್ರಷ್ಟಾಚಾರದ ಆರೋಪ ಬೆಲೆ ಏರಿಕೆ ಇನ್ನೂ ಹತ್ತಾರು ಆರೋಪಗಳನ್ನು ಹೋತ್ತಿರುವ ಹಾಲಿ ಸರ್ಕಾರಕ್ಕೆ ಅಷ್ಟು ಸ್ಥಾನ ಸಿಗುತ್ತಾ ಸಮೀಕ್ಷೆಗಳ ಪ್ರಕಾರ ಬಿಜೆಪಿ ಸರ್ಕಾರ ಬರುವುದೇ ಡೌಟ್ ಎನ್ನುವ ಅಂಶ ಎಲ್ಲೆಡೆ ಬಹಿರಂಗವಾಗಿದೆ ಹಾಗಾಗಿ ಬಿಜೆಪಿ ಹೈಕಮಾಂಡ್ ಒಂದಷ್ಟು ಹೊಸ ಮುಖಗಳಿಗೆ ವರ್ಚಸ್ಸು ಇರುವ ನಾಯಕರಿಗೆ ಮಣೆ ಹಾಕುವ ಸಾಧ್ಯತೆ ಇದೆ, ಇವೆಲ್ಲ ಕುತೂಹಲಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ..

ರಘುರಾಜ್ ಹೆಚ್. ಕೆ ..9449553305…