
ಶಿವಮೊಗ್ಗ : ಜಿಲ್ಲಾ ಅಲ್ಪಸಂಖ್ಯಾತರ ಸಭೆಯಲ್ಲಿ ಮಾಜಿ ಸಚಿವ ಹಾಲಿ ಶಾಸಕರಾದ ಈಶ್ವರಪ್ಪ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ಸರಿ ತಪ್ಪುಗಳ ಚರ್ಚೆ ನಡೆಯುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಮುಸ್ಲಿಮರ ಬಗ್ಗೆ ಕೆಂಡ ಕಾರುತ್ತಿದ್ದ ಮಾಜಿ ಸಚಿವ ಈಶ್ವರಪ್ಪ ಎಲ್ಲೋ ಒಂದು ಕಡೆ ಮೃದು ಧೋರಣೆ, ತಾಳಿದರಾ..?! ಅಥವಾ ಸಹಜವಾಗಿ ಇವೆಲ್ಲ ಶಿವಮೊಗ್ಗ ನಗರಕ್ಕೆ ಬೇಡ ಎನ್ನುವ ರೀತಿಯಲ್ಲಿ ಮಾತನಾಡಿದರಾ..?! ಎನ್ನುವ ಚರ್ಚೆಗಳು ಶುರುವಾಗಿದೆ.
ಏನಿದೆ ಈಶ್ವರಪ್ಪ ಮಾತನಾಡಿರುವ ವಿಡಿಯೋದಲ್ಲಿ…
ಶಿವಮೊಗ್ಗದ ಮುಸಲ್ಮಾನರು ಗಲಾಟೆ ಮಾಡೋರಲ್ಲ ನನಗೆ ನೂರಕ್ಕೆ ನೂರು ಗೊತ್ತು. ಹಿಂದೂಗಳಲ್ಲಿಯು ಕೆಲ ತಲೆಹರಟೆಗಳಿದ್ದಾರೆ. ನಾನು ಇಲ್ಲ ಅನ್ನಲ್ಲ. ಮುಸ್ಲಿಂರಲ್ಲಿಯೂ ತಲೆಹರಟೆಗಳಿದ್ದಾರೆ. ಅವರೊಂದು ನಾಲ್ಕು ಜನ ಇವರೊಂದು ನಾಲ್ಕು ಜನ ಸೇರ್ಕೊಂಡು ತಲೆಹರಟೆ ಕೆಲಸ ಮಾಡಿದಾಗ ಗಲಾಟೆ ಶುರುವಾಗುತ್ತದೆ’
‘ಅವರೊಂದು ನಾಲ್ಕು ಜನ ಇವರೊಂದು ನಾಲ್ಕು ಜನ ಸೇರ್ಕೊಂಡು ತಲೆಹರಟೆ ಕೆಲಸ ಮಾಡಿದಾಗ ಗಲಾಟೆ ಶುರುವಾಗುತ್ತದೆ. ಇಲ್ಲಾಂದ್ರೆ ತಣ್ಣಗೆ ಇರುತ್ತದೆ. ನಾನು ತಪ್ಪು ಮಾಡಿದ್ರೆ ಇಲ್ಲಿಯೇ ಸಭೆಯಲ್ಲಿ ಹೇಳಿ, ಸಮಾಜದಲ್ಲಿ ಅಣ್ಣ ತಮ್ಮಂದಿರಂತೆ ಇರುತ್ತೇವೆ. ನಾನ್ಯಾವ ವಿಚಾರಕ್ಕೆ ಗಲಾಟೆ ಮಾಡುತ್ತೇನೆ ಎಂದು ಉದಾಹರಣೆಗೆ ಕೊಡುತ್ತೇನೆ. ಶಿವಪ್ಪನಾಯಕ ಸರ್ಕಲ್ನಲ್ಲಿ SDPI ನವರು ಒಂದು ಸಮ್ಮೇಳನ ಮಾಡಿದ್ದರು. ಆ ಸಮ್ಮೇಳನದಲ್ಲಿ ಯಾವನೋ ಒಬ್ಬ ಭಾರತ ವಿರೋಧಿ ಘೋಷಣೆ ಕೂಗುತ್ತಾನೆ. ಅದನ್ನು ಕೇಳಿ ಸುಮ್ಮನಿರುತ್ತಾರಾ ಯಾರಾದ್ರೂ?’ ಎಂದು ಮರುಪ್ರಶ್ನೆ ಮಾಡಿದರು.
ಎಲ್ಲಾ ಮುಸಲ್ಮಾನರ ಬಗ್ಗೆ ನಾವು ಹೇಳೋದಿಲ್ಲ, ಗೂಂಡಾಗಿರಿ ಮಾಡಿ ತೊಂದರೆ ಕೊಡುವವರ ಬಗ್ಗೆ ನಾನು ಖಂಡಿಸ್ತೀನಿ’ ಎಂದಿದ್ದಾರೆ.
ನಾನು ಬಾಯಿ ಬಿಟ್ಟು ಹೇಳುತ್ತೇನೆ ನೀವು ಸುಮ್ಮನಿರ್ತೀರಿ. ಆದರೆ ನಾನು ಸುಮ್ಮನಿರಲಿಲ್ಲ. ಅದೇ ದಿನ ವಾಪಸ್ ಹೋಗುವಾಗ ಗಾಜನೂರು ಹತ್ತಿರ ತಲವಾರ್ ಬೀಸಿದರು. ಆದರೆ ಅವರು ಶಿವಮೊಗ್ಗದವರಲ್ಲ. ಇದಕ್ಕೆಲ್ಲಾ ಶಿವಮೊಗ್ಗ ಮುಸಲ್ಮಾನರು ಕಾರಣನಾ?’
‘ಶಿವಮೊಗ್ಗದ ಹರ್ಷನನ್ನು ರಾತ್ರಿ ಬಂದು ಯಾರೋ ಹೊಡೆದೋದ್ರು. ಸುಮ್ಮಸಮ್ಮನೆ ನಮ್ಮ ನಿಮ್ಮ ಮಕ್ಕಳನ್ನ ಹೊಡೆದ್ರೆ ಸುಮ್ಮನಿರೋದಕ್ಕಾಗುತ್ತಾ? ಖಂಡಿಸಬೇಕಾ ಬೇಡವಾ? ನಾನಂತು ಖಂಡಿಸ್ತೇನೆ. ಇಂಥ ಕೆಲಸವನ್ನು ಬಿಜೆಪಿಯಲ್ಲಿ ಬಹಳ ಜನ ಮಾಡಲ್ಲ. ಆ ಪ್ರಶ್ನೆ ಬೇರೆ. ಆದರೆ ನನಗೆ ತಡೆದುಕೊಳ್ಳಲಾಗಲ್ಲ. ಕೆಟ್ಟದನ್ನು ಎಂದೂ ಕೂಡ ನಾನು ಬಿಡೋದಿಲ್ಲ’ ಎಂದು ಮಾತನಾಡಿದ್ದಾರೆ.
ಈಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಚರ್ಚೆಗೆ ಕಾರಣವಾಗಿದೆ ಚುನಾವಣೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು ಎಲ್ಲೋ ಒಂದು ಕಡೆ ಮಾಜಿ ಸಚಿವ ಈಶ್ವರಪ್ಪನವರಿಗೆ ಟಿಕೆಟ್ ಕನ್ಫರ್ಮ್ ಎನ್ನಲಾಗುತ್ತಿದೆ ಇನ್ನೊಂದು ಕಡೆ ಟಿಕೆಟ್ ಸಿಗುವುದು ಡೌಟ್ ಅನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯವನ್ನು ಪ್ರಬಲವಾಗಿ ವಿರೋಧ ಕಟ್ಟಿಕೊಂಡಿರುವ ಈಶ್ವರಪ್ಪನವರಿಗೆ ಹಾಲಿ ಎಂಎಲ್ಸಿ ಆಯನೂರು ಮಂಜುನಾಥ್ ಹಾಕಿಕೊಂಡಿರುವ ಫ್ಲೆಕ್ಸ್ ಗಳು ಬ್ಯಾನರ್ಗಳು ಹಾಗೂ ಅವರೇ ಖುದ್ದಾಗಿ ಹೇಳಿರುವ ಹೇಳಿಕೆಗಳಲ್ಲಿ ಶಿವಮೊಗ್ಗದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳನ್ನು ನಿಯಂತ್ರಿಸಬೇಕು ಶಿವಮೊಗ್ಗ ಶಾಂತಿಯುತವಾಗಿ ಇರಬೇಕು ಆ ನಿಟ್ಟಿನಲ್ಲಿ ನನಗೆ ಬೆಂಬಲ ನೀಡಿ ಎನ್ನುವ ಮಾತುಗಳನ್ನಾಡಿರುವುದು ಎಲ್ಲೋ ಒಂದು ಕಡೆ ಸಚಿವ ಈಶ್ವರಪ್ಪನವರ ನಿದ್ದೆಗೆಡಿಸಿದೆ.
ಆ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಮೃದು ಧೋರಣೆ ತಾಳಿರಬಹುದಾ ಅಥವಾ ಈ ಸಭೆ ನಡೆಸಿ ಹೇಳಿಕೆ ನೀಡುವ ಮೂಲಕ ನಾನು ಕೂಡ ಶಿವಮೊಗ್ಗದ ಸರ್ವಾಂಗಣಿ ಅಭಿವೃದ್ಧಿಯ ಜೊತೆಗೆ ಶಿವಮೊಗ್ಗದಲ್ಲಿ ಯಾವುದೇ ರೀತಿಯ ಗಲಭೆಗಳು ಆಗದಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿದ್ದೇನೆ ಎನ್ನುವ ಭರವಸೆಯನ್ನು ನೀಡುವ ಪ್ರಯತ್ನ ನಾ..?! ಎನ್ನುವ ಚರ್ಚೆಗಳು ಶುರುವಾಗಿದೆ.
ಚರ್ಚೆಗಳು ಏನೇ ಇರಲಿ ಮಾಜಿ ಸಚಿವ ಈಶ್ವರಪ್ಪ ಆಡಿರುವ ಮಾತುಗಳಲ್ಲಿ ಕೆಲವೊಂದು ಸತ್ಯ ಇದೆ, ಎನ್ನಬಹುದು ಯಾವುದೋ ನಾಲ್ಕು ಜನ ಮಾಡುವ ಕೆಲಸಗಳಿಗೆ ಇಡೀ ಜಿಲ್ಲೆಯ ಜನತೆಗೆ ಸಮಸ್ಯೆ ಆಗುವುದು ಎಷ್ಟು ಸರಿ..?! ಆ ನಾಲ್ಕು ಜನ ಯಾರು ಆ ನಾಲ್ಕು ಜನರನ್ನು ಸದೆಬಡಿಯಬೇಕು ಆಗ ಮಾತ್ರ ಶಿವಮೊಗ್ಗದಲ್ಲಿ ಶಾಂತಿ ನೆಲೆಸಲು ಸಾಧ್ಯ….

ರಘುರಾಜ್ ಹೆಚ್. ಕೆ…9449553305…