
ಶಿವಮೊಗ್ಗದ ನಟೋರಿಯಸ್ ರೌಡಿ ಹಂದಿ ಅಣ್ಣಿಯನ್ನು ಕೆಲವೇ ತಿಂಗಳುಗಳ ಹಿಂದೆ ಶಿವಮೊಗ್ಗದ ವಿನೋಬಾ ನಗರ ಪೊಲೀಸ್ ಠಾಣೆಯ ಪಕ್ಕದಲ್ಲಿಯೇ ನಡು ರಸ್ತೆಯಲ್ಲಿ ಹಾಡು ಹಗಲೇ ಓಡಾಡಿಸಿಕೊಂಡು ಕೊಲೆ ಮಾಡಿದ್ದರು.
ಈ ಕೊಲೆ ಪೊಲೀಸ್ ಇಲಾಖೆಯಲ್ಲಿ ತೀವ್ರ ಸಂಚಲನವನ್ನು ಉಂಟು ಮಾಡಿತ್ತು ಪೊಲೀಸ್ ಠಾಣೆಯ ಪಕ್ಕದಲ್ಲಿಯೇ ಒಬ್ಬ ನಟೋರಿಯಸ್ ಕಿಲ್ಲರ್ ಅನ್ನು ಕೊಲೆ ಮಾಡುತ್ತಾರೆಂದರೆ ಆ ಪೊಲೀಸ್ ಠಾಣೆಯ ಠಾಣಾಧಿಕಾರಿಯ ಮೇಲೆ ಎಷ್ಟು ಭಯವಿದೆ ರೌಡಿಗಳಿಗೆ ಎನ್ನುವುದು ಈ ಘಟನೆಯಿಂದ ಅರಿವಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳು ಚಿಕ್ಕಮಂಗಳೂರಿನ ರಕ್ಷಣಾಧಿಕಾರಿಯ ಮುಂದೆ ಶರಣಾಗಿದ್ದರು ನಂತರ ಅವರನ್ನು ಶಿವಮೊಗ್ಗಕ್ಕೆ ಕರೆತರಲಾಗಿತ್ತು ಹಂದಿ ಹಣ್ಣಿಯ ಕೊಲೆ ಕೇಸಿನಲ್ಲಿ ಬಂದಿತ ಆರೋಪಿಗಳ ಮೇಲೆ ಕೇಸ್ ದಾಖಲಿಸಿ, ಜೈಲಿಗೆ ಕಳಿಸಲಾಗಿತ್ತು.
ನಂತರ ಇತ್ತೀಚಿಗೆ ಬೇಲ್ ಮೇಲೆ ಹೊರಬಂದ ಆರೋಪಿಗಳಾದ ಹರಿಹರ ಮೂಲದ ಮಧು ಮತ್ತು ಆಂಜನೇಯ ಎಂಬ ಯುವಕರ ಮೇಲೆ ಶಿವಮೊಗ್ಗ ಹೊನ್ನಾಳಿಯ ಮಧ್ಯ ಚೀಲೂರು ಸಮೀಪ ಗೋವಿನ ಕೋವಿ ಹತ್ತಿರ ದಾಳಿ ಮಾಡಲಾಗಿತ್ತು. ಈ ದಾಳಿಯಲ್ಲಿ ಆಂಜನೇಯ ಸ್ಥಳದಲ್ಲೇ ಮೃತಪಟ್ಟಿದ್ದರೆ ಮಧುವನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಮಧು ಸ್ಥಿತಿ ಗಂಭೀರವಾಗಿತ್ತು. ಈಗ ಮಧು ಸಾವಿನಿಂದ ಬಚಾವಾಗಿದ್ದಾನೆ…
ನಂತರ ಈ ಪ್ರಕರಣದ ಬೆನ್ನೆತ್ತಿದ ದಾವಣಗೆರೆ ಪೊಲೀಸರು ಆರೋಪಿಗಳನ್ನು ಹಿಡಿಯುವ ಮೊದಲು ಟಿವಿ ರಿಪೋರ್ಟರ್ ಒಬ್ಬರ ಸಹಾಯದಿಂದ ಆಂಜನೇಯನ ಮೇಲೆ ದಾಳಿ ಮಾಡಿದ್ದ ತಂಡ ಶಿಗ್ಗಾಂವಿಯಲ್ಲಿ ಸೆರೆಂಡರ್ ಆಗಿದೆ. ಸುನೀಲ್ ಅಲಿಯಾಸ್ ತಮಿಳ್ ಸುನೀಲ್, ಅಭಿಲಾಷ್, ವೆಂಕಟೇಶ್ ಮತ್ತು ಪವನ್ ಎಂಬವರು ಸೆರೆಂಡರ್ ಆಗಿದ್ದಾರೆ . ಇವರುಗಳನ್ನು ತನಿಖೆಗೆ ಒಳಪಡಿಸಿ ಇವರುಗಳ ಜೊತೆಗೆ ಇವರಿಗೆ ಸಹಕರಿಸಿದ ಆರೋಪದ ಮೇಲೆ ಟಿವಿ ರಿಪೋರ್ಟರ್ ಅನ್ನು ಕೂಡ ಕೇಸ್ ದಾಖಲಿಸಿ ಜೈಲಿಗೆ ಕಳಿಸಿದ ಪೊಲೀಸರು…
ಆದರೆ ಪೊಲೀಸರಿಗೆ ಈ ಪ್ರಕರಣದಲ್ಲಿ ಅನುಮಾನ ಹೆಚ್ಚಾಗಿದೆ. ತನಿಖೆಯಲ್ಲಿ ನಿಜವಾದ ಆರೋಪಿಗಳು ಬೇರೆಯವರೇ ಇದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಂಡ ಪೊಲೀಸ್ ಮೂಲಗಳು ತೀವ್ರ ತನಿಖೆಗೆ ಮುಂದಾಗಿದೆ. ಈ ನಡುವೆ ಮಹತ್ವದ ಬೆಳವಣಿಗೆ ಒಂದರಲ್ಲಿ ಇಬ್ಬರು ಪ್ರಮುಖ ಆರೋಪಿಗಳನ್ನು ಹಿಡಿದಿದ್ದಾರೆ ದಾವಣಗೆರೆ ಪೊಲೀಸರು ಅಂತರಾಜ್ಯದಲ್ಲಿ ಎಂದು ಸುಳ್ಳು ಸುದ್ದಿ ಒಂದು ಎಲ್ಲೆಡೆ ಹಬ್ಬುತ್ತಿತ್ತು ಇದು ಪೊಲೀಸ್ ಇಲಾಖೆಯ ತನಿಖೆಗೆ ತೀವ್ರತರವಾದ ಹಿನ್ನಡೆಯಾಗಿತ್ತು.
ಈ ಸುದ್ದಿಯ ವಿಚಾರವಾಗಿ ನ್ಯೂಸ್ ವಾರಿಯರ್ಸ್ ಜೊತೆ ಮಾತನಾಡಿದ ದಾವಣಗೆರೆ ಎಸ್ ಪಿ ಸಿ,ಬಿ ರಿಷ್ಯಂತ್ ಇದೊಂದು ಸುಳ್ಳು ಸುದ್ದಿ ಆಗಿದೆ ಇತರ ಸುಳ್ಳು ಸುದ್ದಿ ವೈರಲ್ ಆಗುವುದರಿಂದ ಪೊಲೀಸರ ತನಿಖೆಗೆ ಹಿನ್ನಡೆಯಾಗುತ್ತದೆ. ದಯವಿಟ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ನಿಜವಾದ ಮಾಹಿತಿ ತಿಳಿದುಕೊಂಡು ಸುದ್ದಿ ಪ್ರಕಟಿಸಿದರೆ ಒಳಿತು ಎಂದು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿರುವ ಹಂದಿ ಹಣ್ಣಿ ಮರ್ಡರ್ ಕೇಸಿನ ಯುವಕರ ಮೇಲಿನ ಹಲ್ಲೆಯ ಪ್ರಕರಣದ ಬಗ್ಗೆ ಪ್ರಮುಖ ಆರೋಪಿಗಳ ಬಂಧನ ಆಗುವವರೆಗೂ ಯಾವುದನ್ನು ನಿಖರವಾಗಿ ಹೇಳುವಂತಿಲ್ಲ.
ದಾವಣಗೆರೆ ಜಿಲ್ಲಾ ಪೊಲೀಸರು ಜಿಲ್ಲಾ ರಕ್ಷಣಾಧಿಕಾರಿ ಸಿ ಬಿ ರಿಷ್ಯಂತ್ ನಿರ್ದೇಶನದ ಮೇರೆಗೆ ಸಮಗ್ರವಾಗಿ ತನಿಖೆ ನಡೆಸುತ್ತಿದ್ದು ವಿವಿಧ ಹಂತಗಳಲ್ಲಿ ತನಿಖೆ ಮುಂದುವರಿಸಿದ್ದು ಈ ಪ್ರಕರಣದ ಮಾಸ್ಟರ್ ಮೈಂಡ್ ಹಾಗೂ ಪ್ರಮುಖ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ…

ರಘುರಾಜ್ ಹೆಚ್.ಕೆ..9449553305….