
ಮೈಸೂರು : ಶಿವಮೊಗ್ಗದ ಪತ್ರಕರ್ತರು ಹಾಗೂ ಛಾಯಾಗ್ರಾಹಕರಾದ ಕೆ ನಾಗರಾಜ್ ಶೈಣೈ ಅವರಿಗೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವಾರ್ಷಿಕ ದತ್ತಿ ಪ್ರಶಸ್ತಿ ಮಿಂಚು ಶ್ರೀನಿವಾಸ್ ಪ್ರಶಸ್ತಿ ಯನ್ನು ಮೈಸೂರಿನ ರಾಜೇಂದ್ರ ಕಲಾ ಮಂದಿರದಲ್ಲಿ ಮಾ,18 ರ ಶನಿವಾರ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಲಾಗಿದೆ…
ಪ್ರಶಸ್ತಿಯು 5 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಗೌರವಾಧಾರಗಳನ್ನು ಒಳಗೊಂಡಿದೆ.
ಈ ಶುಭ ಸಂದರ್ಭದಲ್ಲಿ,
ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿಯನ್ನು
ಆರ್.ಎನ್.ಸಿದ್ಧಲಿಂಗ ಸ್ವಾಮಿ, ಹಿರಿಯ ಪತ್ರಕರ್ತ, ಚಾಮರಾಜನಗರ ಜಿಲ್ಲೆ ಇವರಿಗೆ,
ಎಂ.ನಾಗೇಂದ್ರರಾವ್ ಪ್ರಶಸ್ತಿಯನ್ನು
ಡಾ.ಉಳ್ಳಿಯಡ ಎಂ. ಪೂವಯ್ಯ, ಸಂಪಾದಕರು, ಬ್ರಹ್ಮಗಿರಿ ಕೊಡವ ಪತ್ರಿಕೆ, ಮಡಿಕೇರಿ. ಇವರಿಗೆ ನೀಡಲಾಯಿತು.
ಉಳಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪಡೆದವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ನಿವೃತ್ತ ಹೈಕೋರ್ಟ್ ನ್ಯಾಯದೀಶ ನಾಗಮೋಹನದಾಸ್ ಹಿರಿಯರಿಗೆ ಗೌರವ ,ಪ್ರತಿಭೆಗಳಿಗೆ ಪುರಸ್ಕಾರ ನೀಡುವುದೇ ಸಮಾಜದ ಒಳ್ಳೆಯ ಗುಣ.
ಪ್ರಶಸ್ತಿಗಳ ಪಡೆದವರ ಜವಾಬ್ದಾರಿ ಹೆಚ್ಚಿದೆ ಅವರು ಮಾರ್ಗದರ್ಶಕರಾಗಲಿ,ಮತ್ತಷ್ಟು ಸಮಾಜ ಮುಖಿಯಾಗಲಿ ಎಂದು ಹಾರೈಸಿದರು.
ಸಂವಿಧಾನದ ಓದು ಅವರ ಕಾರ್ಯಕ್ಷಮತೆ ಯನ್ನು ಹೆಚ್ವಿಸುತ್ತದೆ.ಸಂವಿಧಾನದ ಬಗ್ಗೆ ಅಪಸ್ವರ ಸಲ್ಲದು.ಅಪವಾಖ್ಯನ ಮಾಡಬಾರದು. ಸಂವಿಧಾನದ
ಮೂಲತತ್ವಗಳನ್ನು ತಿದ್ದಲು ಸಾದ್ಯವಿಲ್ಲ ಎಂಬುದನ್ನು ಮನಗಾಣಬೇಕು ಎಂದರು.ನ್ಯಾಯಂಗ, ಶಾಸಕಾಂಗ,ಕಾರ್ಯಾಂಗಗಳು ಆಡಳಿತ ಸರ್ಕಾರದ ಕೈ ಗೊಂಬೆಗಳಾಗಿರುವುದು ದುರಂತ ಎಂದರು.
ಈ ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ರಾಜ್ಯಾದ್ಯಕ್ಷ ಶಿವನಾಂದ ತಗಡೂರು, ಜಿಲ್ಲಾ ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು…

ರಘುರಾಜ್ ಹೆಚ್.ಕೆ…9449553305…


1 comment
**men balance pro**
MEN Balance Pro is a high-quality dietary supplement developed with research-informed support to help men maintain healthy prostate function.