
ರಾಹುಲ್ ಗಾಂಧಿಯ ಸಲಹೆ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರದಲ್ಲಿ ಗೊಂದಲ ಉಂಟಾಗಿದೆ ಕೋಲಾರದಿಂದ ಸ್ಪರ್ಧಿಸುವುದಾ ಅಥವಾ ವರುಣಾದಿಂದ ಸ್ಪರ್ಧಿಸಿದರೆ ಒಳ್ಳೆಯದಾ ಎನ್ನುವ ಚಿಂತನೆಗಳು ನಡೆಯಲು ಶುರುವಾಗಿದೆ.
ನಿರಂತರವಾಗಿ ಈ ವಿಷಯವಾಗಿ ಚರ್ಚೆಗಳು ಶುರುವಾಗಿದ್ದು ಸಿದ್ದು ಆಪ್ತರ ಸಲಹೆ ಏನೆಂದರೆ ರಾಜಕೀಯ ಪಡಸಾಲೆಯಲ್ಲಿ ಪಲಾಯನವಾದದ ಆರೋಪ ಸಿದ್ದುಗೆ ಮುಂದಿನ ದಿನಗಳಲ್ಲಿ ಬರಬಹುದು ಹಾಗೂ ಈಗಾಗಲೇ ಕೋಲಾರದಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿರುವುದರಿಂದ ಅಲ್ಲಿ ಸ್ಪರ್ಧೆ ಮಾಡಲು ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ ಆದ್ದರಿಂದ ಕೋಲಾರ ಜೊತೆಗೆ ವರುಣಾ ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡುವುದೇ ಒಳ್ಳೆಯದು ಎನ್ನುವ ಸಲಹೆಯನ್ನು ಆಪ್ತರು ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ..
ಕೊನೆಯ ಹಂತದಲ್ಲಿ ರಿಸ್ಕ್ ಬೇಡ ಎನ್ನುವುದು ಆಪ್ತರ ಸಲಹೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಸಲಹೆ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ…

ರಘುರಾಜ್ ಹೆಚ್.ಕೆ… 9449553305…
.