
ಭದ್ರಾವತಿ : ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಕಳೆದುಹೋದ ಮೊಬೈಲ್ ಫೋನ್ ಗಳ ಪತ್ತೆಗಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್, ಜಿ.ಕೆ, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಜಿತೇಂದ್ರ ಕುಮಾರ್ ದಯಾಮ, ಐಪಿಎಸ್,ಭದ್ರಾವತಿ ಉಪ ವಿಭಾಗ ಮತ್ತು ಶಾಂತಿನಾಥ್, ಪೊಲೀಸ್ ವೃತ್ತ ನಿರೀಕ್ಷಕರು, ಭದ್ರಾವತಿ ನಗರ ವೃತ್ತ ರವರ ಮೇಲ್ವಿಚಾರಣೆಯಲ್ಲಿ, ರಂಗನಾಥ್ ಅಂತರಗಟ್ಟಿ, ಪೊಲೀಸ್ ಉಪ ನಿರೀಕ್ಷಕರರು, ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ರವರ ನೇತೃತ್ವದ, ಸಿಬ್ಬಂಧಿಗಳಾದ ಸಿಪಿಸಿ ಪ್ರವೀಣ್ ಕುಮಾರ್ ಮತ್ತು ರಂಗನಾಥ್ ರವರುಗಳನ್ನೊಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ತಂಡವು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಅಂದಾಜು ಮೌಲ್ಯ 2,50,000/- ರೂ ಗಳ ಒಟ್ಟು 18 ವಿವಿಧ ಕಂಪನಿಗಳ ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿ, ಇಂದು ಮೊಬೈಲ್ ಫೋನ್ ಗಳ ವಾರಸುದಾರರಿಗೆ ಹಸ್ತಾಂತರಿಸಿರುತ್ತಾರೆ.
ಸದರಿ ತಂಡದ ಉತ್ತಮವಾದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ ಕೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ....
ರಘುರಾಜ್ ಹೆಚ್.ಕೆ…9449553305…