
ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದು. ಇದೇ ಶನಿವಾರ 20ರಂದು ಪ್ರಮಾಣವಚನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.
ಸರ್ಕಾರ ಅಸ್ತಿತ್ವಕ್ಕೆ ಬರುವ ಬೆನ್ನಲ್ಲೇ ಮಂತ್ರಿ ಗಿರಿಗಾಗಿ ತೀವ್ರ ಲಾಭಿ ಶುರುವಾಗಿದೆ.
ಬಲ್ಲ ಮಾಹಿತಿಗಳ ಪ್ರಕಾರ ಸೊರಬದಿಂದ ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧ ಸ್ಪರ್ಧಿಸಿ 45,000 ಮತಗಳ ಅಂತರದಲ್ಲಿ ಗೆದ್ದಿರುವ ಮಧು ಬಂಗಾರಪ್ಪನವರಿಗೆ ಸಂಪುಟದಲ್ಲಿ ಖಾತೆ ನೀಡಿ ಸಚಿವರನ್ನಾಗಿ ಮಾಡಬೇಕೆಂದು ಅಕ್ಕ ಗೀತಾ ಶಿವರಾಜ್ ಕುಮಾರ್ ಪತಿ ಶಿವರಾಜ್ ಕುಮಾರ್ ಮೂಲಕ ಸಿದ್ದರಾಮಯ್ಯ ಅವರಿಗೆ ಹಾಗೂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಗೆ ಒತ್ತಡ ತರುತ್ತಿದ್ದಾರೆ ಎನ್ನಲಾಗುತ್ತಿದೆ.
ಇತ್ತ ಜಾತಿವಾರು ಲೆಕ್ಕಾಚಾರದಲ್ಲಿ ಲಿಂಗಾಯತ್ ಸಮುದಾಯದ ಸಂಗಮೇಶ್ ಅವರಿಗೆ ಮತ್ತು ಸಂಗಮೇಶ್ ಸಿದ್ದರಾಮಯ್ಯನವರ ಆಪ್ತ ಬಣದಲ್ಲಿ ಗುರುತಿಸಿಕೊಂಡವರಾಗಿರುವುದರಿಂದ ಅವರಿಗೂ ಸ್ಥಾನ ನೀಡಬೇಕು ಎಂದು ಕೂಗು ಕೇಳಿ ಬರುತ್ತಿದೆ. ಹಾಗಾದರೆ ಶಿವಮೊಗ್ಗ ಜಿಲ್ಲೆಗೆ ಎರಡು ಸ್ಥಾನ ಸಿಕ್ಕಂತಾಗುತ್ತದೆ.
ಇತ್ತ ತನ್ನ ಪ್ರಬಲ ಪ್ರತಿಸ್ಪರ್ಧಿ ಹರತಾಳು ಹಾಲಪ್ಪ ವಿರುದ್ಧ ಗೆದ್ದಿರುವ ಬೇಳೂರು ಗೋಪಾಲಕೃಷ್ಣ ಅವರಿಗೆ ಎಂ ಎಸ್ ಐ ಎಲ್ ಅಧ್ಯಕ್ಷ ಪಟ್ಟ ನೀಡಬೇಕೆನ್ನುವ ಬಯಕೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಡಿಕೆ ಶಿವಕುಮಾರ್ ಗೆ ಹೆಚ್ಚಿನ ಒಲವು ಇದೆ ಎನ್ನಲಾಗುತ್ತಿದೆ .
ಇನ್ನೋರ್ವ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಗೆ ಕೂಡ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಅಧಿಕವಾಗಿದೆ..
ಈಗಾಗಲೇ ಮೊದಲ ಹಂತದಲ್ಲಿಯೇ ಮಧು ಬಂಗಾರಪ್ಪ ಹೆಸರು ಇದೆ ಎನ್ನಲಾಗುತ್ತಿದೆ… ಉಳಿದಂತೆ ಸಂಗಮೇಶ್ ಹೆಸರು ಸೇರ್ಪಡೆಯಾದರು ಅಚ್ಚರಿಲ್ಲ…
ರಘುರಾಜ್ ಹೆಚ್.ಕೆ…9449553305…