
ತೀರ್ಥಹಳ್ಳಿ : ತಾಲೂಕಿನ ಮೇಲಿನ ಕುರುವಳ್ಳಿಯಲ್ಲಿ ನಿರಂತರವಾಗಿ ಅಕ್ರಮವಾಗಿ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾಗಲಿ, ತೀರ್ಥಹಳ್ಳಿಯ ಪೊಲೀಸ್ ಇಲಾಖೆಯ ಅಧಿಕಾರಿಗಳಾಗಲಿ ಕಂಡು ಕಾಣದಂತೆ ಕೇಳಿಸಿಕೊಂಡು ಕೇಳದಂತೆ ಮೌನವಾಗಿ ಇರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಕೆಲವು ಭ್ರಷ್ಟ ಅಧಿಕಾರಿಗಳ ಪಾಲುದಾರಿಕೆ ಈ ಗಣಿಗಾರಿಕೆಯಲ್ಲಿ ಇದಿಯಾ ಎನ್ನುವ ಅನುಮಾನ ಹುಟ್ಟಿದೆ..?! ಏಕೆಂದರೆ ಪತ್ರಿಕೆ ನಿರಂತರವಾಗಿ ಈ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ವರದಿ ಪ್ರಕಟಿಸುತ್ತಿದ್ದು ಸಾಕ್ಷಿ ಸಮೇತ ವರದಿ ನೀಡಿದ್ದರೂ ಕೂಡ ಇಲ್ಲಿಯವರೆಗೂ ಅಂತ ಕ್ರಮವೇನು ಕೈಗೊಂಡಿಲ್ಲ…
ವರದಿ ಬಂದಾಗ ಮೇಲಿನ ಅಧಿಕಾರಿಗಳಿಗೆ ವಿಷಯ ತಿಳಿಸಿದಾಗ ಮೇಲಿನ ಅಧಿಕಾರಿಗಳಾದ ಎಸ್ ಬಿ ಅವರು ನಿರ್ದೇಶನ ನೀಡಿದಾಗ ಒಂದಷ್ಟು ಆ ಕಡೆ ಹೋಗಿಬಂದು ಹೆದರಿಸಿ ,ಬೆದರಿಸಿ ಬರುವುದು ಬಿಟ್ಟರೆ ಉಳಿದಂತೆ ಯಾವುದೂ ನಿಂತಿಲ್ಲ. ನಿರಂತರವಾಗಿ ರಾತ್ರಿ ಮತ್ತು ಬೆಳಗಿನ ಜಾವ ಸ್ಪೋಟಕ ಬಳಸಿ ಅಕ್ರಮ ಕಲ್ಲುಗಾಣಿಗಾರಿಕೆ ನಡೆಸುತ್ತಿದ್ದಾರೆ.
ಇದರ ಸದ್ದು ತೀರ್ಥಹಳ್ಳಿಯ ಪಟ್ಟಣದ ತುಂಬಾ ಕೇಳಿಸುತ್ತದೆ ಕಲ್ಲುಗಣಿಗಾರಿಕೆಯ ಸಮೀಪ ವಾಸಿಸುವ ಮನೆಗಳ ಹತ್ತಿರ ಕೇಳಿ ವಿಚಾರಿಸಿದರೂ ಕೂಡ ಹೇಳುತ್ತಾರೆ.. ಆದರೂ ಪಾಪ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ದಕ್ಷ ಅಧಿಕಾರಿಗಳಿಗೆ ಹಾಗೂ ತೀರ್ಥಹಳ್ಳಿಯ ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಯಾಕೋ ಕೇಳಿಸುತ್ತಿಲ್ಲ..
ಶಿವಮೊಗ್ಗದಲ್ಲಿ ದಕ್ಷ ಪ್ರಾಮಾಣಿಕ ಖಡಕ್ ಅಧಿಕಾರಿ ಮಿಥುನ್ ಕುಮಾರ್ ಜಿ ಕೆ ಅವರು ಇದ್ದರೂ ಕೂಡ ಏಕೋ ತೀರ್ಥಹಳ್ಳಿಯ ಅಕ್ರಮ ಕಲ್ಲು ಗಣಿಗಾರಿಕೆ ಇಲ್ಲಿವರೆಗೂ ನಿಯಂತ್ರಣಕ್ಕೆ ಬರುತ್ತಿಲ್ಲ..
ಎಸ್ಪಿ ಮಿಥುನ್ ಕುಮಾರ್ ಶಿವಮೊಗ್ಗಕ್ಕೆ ಬಂದು ಚಾರ್ಜ್ ತೆಗೆದುಕೊಂಡ ನಂತರ ಇಲ್ಲಿಯವರೆಗೂ ಹಲವು ಅಕ್ರಮಗಳನ್ನು ತಡೆಗಟ್ಟಿದ್ದಾರೆ. ಆದರೆ ತೀರ್ಥಹಳ್ಳಿಯ ಮೇಲಿನ ಕುರುವಳ್ಳಿಯಲ್ಲಿ ಮಾತ್ರ ಈ ಅಕ್ರಮ ಕಲ್ಲು ಗಣಿಗಾರಿಕೆ ಅದರಲ್ಲೂ ಸ್ಪೋಟಕ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಇಲ್ಲಿಯವರೆಗೂ ತಡೆಗಟ್ಟಲು ಆಗುತ್ತಿಲ್ಲ…
ಸ್ಪೋಟಕ ಬಳಸದೆ ತೀರ್ಥಹಳ್ಳಿ ಕುರುವಳ್ಳಿ ಬಂಡೆಯಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಸಾಧ್ಯವಿಲ್ಲ ಅದೆಲ್ಲ ಕಟ್ಟುಕಥೆ…
ಇನ್ನು ಮುಂದಾದರೂ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲುತ್ತಾ ಕಾದುನೋಡಬೇಕು…. ಪತ್ರಿಕೆ ಮಾತ್ರ ನಿರಂತರವಾಗಿ ವರದಿ ಪ್ರಕಟಿಸುತ್ತಲೇ ಇರುತ್ತದೆ …
ರಘುರಾಜ್ ಹೆಚ್.ಕೆ…9449553305…