

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ಜನ ಸಚಿವರ ಜೊತೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಉಳಿದ ಸಚಿವರ ಸಂಪುಟ ಸೇರ್ಪಡೆ ಬಗ್ಗೆ ತೀವ್ರ ಕುತೂಹಲ ಎಲ್ಲರನ್ನೂ ಕೆರಳಿಸಿತ್ತು
ಈ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟ ಫೈನಲ್ ಮಾಡಲು ತಮ್ಮ ತಮ್ಮ ಬೆಂಬಲಿಗರ ಪಟ್ಟಿ ಹಿಡಿದುಕೊಂಡು ದೆಹಲಿಗೆ ತೆರಳಿದ್ದರು.
ಸುದೀರ್ಘ ಮೂರು ದಿನದ ಚರ್ಚೆಗಳ ನಂತರ ಇಂದು ಕಾಂಗ್ರೆಸ್ ಪಟ್ಟಿ ಪ್ರಕಟಿಸಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಅಂತ್ಯವಾಗಿದೆ.
ಹಿರಿಯ ನಾಯಕರನ್ನು ಸಂಪುಟದಿಂದ ಕೈ ಬಿಡುವುದು, ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವುದು ಸೇರಿ ಕೆಲವು ಸಮಸ್ಯೆಗಳ ಬಗ್ಗೆ ವೇಣುಗೋಪಾಲ್, ಸುರ್ಜೇವಾಲ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗಿದೆ. ಈ ನಿರ್ಣಯದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಕೆಲವು ಸಲಹೆಗಳನ್ನು ನೀಡಿದ್ದಾರೆ. ಮಹತ್ವದ ಸಭೆಗಳ ನಡುವೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಇಂದು ಪ್ರತ್ಯೇಕವಾಗಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಈ ಎಲ್ಲಾ ಬೆಳವಣಿಗೆಗಳ ಬಳಿಕ 24 ಹೆಸರುಗಳನ್ನು ಅಂತಿಮಗೊಳಿಸಿದ್ದು .
ನಾಳೆ ಬೆಳಗ್ಗೆ 11:45 ಕ್ಕೆ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶನಿವಾರ ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿ:
ದಿನೇಶ್ ಗುಂಡೂರಾವ್,
ಕೃಷ್ಣ ಬೈರೇಗೌಡ,
ಈಶ್ವರ್ ಖಂಡ್ರೆ,
ರಹೀಂ ಖಾನ್,
ಸಂತೋಷ್ ಲಾಡ್,
ಕೆ ಎನ್ ರಾಜಣ್ಣ,
ಪಿರಿಯಾಪಟ್ಟಣ ವೆಂಕಟೇಶ್,
ಎಚ್. ಸಿ. ಮಹದೇವಪ್ಪ,
ಬೈರತಿ ಸುರೇಶ್, ಸಿ.
ಪುಟ್ಟರಂಗಶೆಟ್ಟಿ,
ಶಿವರಾಜ್ ತಂಗಡಗಿ,
ಆರ್.ಬಿ. ತಿಮ್ಮಾಪುರ,
ಬಿ ನಾಗೇಂದ್ರ,
ಲಕ್ಷ್ಮೀ ಹೆಬ್ಬಾಳ್ಕರ್,
ಮಧು ಬಂಗಾರಪ್ಪ,
ಡಿ ಸುಧಾಕರ್,
ಚೆಲುವರಾಯ ಸ್ವಾಮಿ,
ಮಂಕಾಳ ವೈದ್ಯ,
ಶಿವಾನಂದ ಪಾಟೀಲ್
,ಎಂಸಿ ಸುಧಾಕರ್,
ಹೆಚ್.ಕೆ. ಪಾಟೀಲ್,
ಶರಣಪ್ರಕಾಶ ಪಾಟೀಲ್,
ಎಸ್ ಎಸ್ ಮಲ್ಲಿಕಾರ್ಜುನ,
ಶರಣಬಸಪ್ಪ ದರ್ಶನಾಪುರ ….
ಜಾತಿ ಲೆಕ್ಕಾಚಾರ , ರಾಜಕೀಯ ಲೆಕ್ಕಾಚಾರ ಹಿರಿಯ, ಕಿರಿಯ ಶಾಸಕರ ಲೆಕ್ಕಾಚಾರ ಹಾಗೂ ಮುಂಬರುವ ಲೋಕಸಭೆಯ ಚುನಾವಣೆಯ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎರಡೂ ಬಣಗಳನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಲಾಗಿದೆ ಈ ಪಟ್ಟಿಯಲ್ಲಿ …
ಪಟ್ಟಿ ಪ್ರಕಟವಾದ ಬೆನ್ನಲ್ಲೇ ಬಿ,ಕೆ ಹರಿಪ್ರಸಾದ್ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ ..
ರಾಜ್ಯ ಕಾಂಗ್ರೆಸ್ ನಲ್ಲಿ ತಣ್ಣಗೆ ಭಿನ್ನಮತ ಭುಗಿಲೆದ್ದಿದೆ… ರಾಜ್ಯ ಮತ್ತು ಕೇಂದ್ರ ಕಾಂಗ್ರೆಸ್ ನಾಯಕರು ಇದನ್ನು ಹೇಗೆ ಸರಿಪಡಿಸುತ್ತಾರೆ ಕಾದು ನೋಡಬೇಕು…
ರಘುರಾಜ್ ಹೆಚ್.ಕೆ…9449553305….