
ಇಂದು ರಾಜ ಭವನದಲ್ಲಿ ರಾಜ್ಯಪಾಲರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ 24 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದರು.
ಇದೀಗ ಪ್ರಮಾಣ ವಚನದ ಬೆನ್ನಲ್ಲೇ ಅವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು ಆ ವಿವರ ಕೆಳಗಿನಂತಿದೆ:
ಸಿದ್ದರಾಮಯ್ಯ -ಹಣಕಾಸು, ಡಿ,ಪಿ,ಎ, ಆರ್ ಮತ್ತು ಗುಪ್ತಚರ ಇಲಾಖೆ
ಡಿ.ಕೆ.ಶಿವಕುಮಾರ್ -ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ
ಡಾ.ಜಿ.ಪರಮೇಶ್ವರ್ -ಗೃಹ ಸಚಿವ
ಹೆಚ್.ಕೆ.ಪಾಟೀಲ್ -ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ
ಕೆಚ್.ಮುನಿಯಪ್ಪ -ಆಹಾರ ಮತ್ತು ನಾಗರಿಕ ಖಾತೆ
ಕೆ.ಜೆ.ಜಾರ್ಜ್ -ಇಂಧನ ಖಾತೆ
ಎಂ.ಬಿ.ಪಾಟೀಲ್ -ಐಟಿ, ಬಿಟಿ
ರಾಮಲಿಂಗಾ ರೆಡ್ಡಿ -ಸಾರಿಗೆ
ಸತೀಶ್ ಜಾರಕಿಹೊಳಿ -ಲೋಕಪಯೋಗಿ
ಪ್ರಿಯಾಂಕ್ ಖರ್ಗೆ-ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್
ಜಮೀರ್ ಅಹ್ಮದ್ ಖಾನ್-ವಸತಿ, ವಕ್ಫ್ ಅಂಡ್ ಅಲ್ಪಸಂಖ್ಯಾತ
ಕೃಷ್ಣ ಬೈರೇಗೌಡ -ಕಂದಾಯ
ದಿನೇಶ್ ಗಂಡೂರಾವ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಚಲುವರಾಯಸ್ವಾಮಿ -ಕೃಷಿ
ಕೆ.ವೆಂಕಟೇಶ್ -ಪಶುಸಂಗೋಪನೆ
ಹೆಚ್.ಸಿ.ಮಹಾದೇವಪ್ಪ -ಸಮಾಜ ಕಲ್ಯಾಣ ಇಲಾಖೆ
ಈಶ್ವರ್ ಖಂಡ್ರೆ-ಅರಣ್ಯ ಮತ್ತು ಪರಿಸರ
ಕೆ.ಎನ್.ರಾಜಣ್ಣ-ಸಹಕಾರ
ಶರಣಪ್ಪ ಬಸಪ್ಪ ದರ್ಶಾನಾಪುರ್ -ಸಣ್ಣ ಕೈಗಾರಿಗೆ
ಶಿವನಾಂದ್ ಪಾಟೀಲ್ -ಜವಳಿ ಮತ್ತು ಸಕ್ಕರೆ ಖಾತೆ
ಆರ್ಬಿ ತಿಮ್ಮಾಪುರ್ -ಅಬಕಾರಿ ಮತ್ತು ಮುಜರಾಯಿ
ಎಸ್.ಎಸ್.ಮಲ್ಲಿಕಾರ್ಜುನ್ -ಗಣಿ ಮತ್ತು ಭೂವಿಜ್ಞಾನ
ಶಿವರಾಜ್ ತಂಡಗಡಿ -ಹಿಂದೂಳಿದ ವರ್ಗಗಳ ಕಲ್ಯಾಣ
ಶರಣ್ ಪ್ರಕಾಶ್ ಪಾಟೀಲ್ -ಉನ್ನತ ಶಿಕ್ಷಣ
ಮಂಕಾಳ್ ವೈದ್ಯ-ಮೀನುಗಾರಿಕೆ ಮತ್ತು ಬಂದರು
ಲಕ್ಷ್ಮೀ ಹೆಬ್ಬಾಳ್ಕರ್ -ಮಹಿಳೆ ಮತ್ತು ಮಕ್ಕಳ ಕಲ್ಯಾಣ
ರಹೀಂ ಖಾನ್ -ಪೌರಾಡಳಿತ
ಡಿ.ಸುಧಾಕರ್ -ಮೂಲಸೌಕರ್ಯ
ಸಂತೋಷ್ ಲಾಡ್- ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ
ಎನ್.ಎಸ್.ಬೊಸೆರಾಜು -ಪ್ರವಾಸೋದ್ಯಮ ಮತ್ತು ವಿಜ್ಞಾನ ಮತ್ತು ಟೆಕ್ನಾಲಜಿ
ಭೈರತಿ ಸುರೇಶ್- ನಗರಾಭಿವೃದ್ಧಿ
ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಎಂ.ಸಿ.ಸುಧಾಕರ್-ವೈದ್ಯಕೀಯ
ಬಿ.ನಾಗೇಂದ್ರ -ಯುವಜನ ಸೇವೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ…

ನೂತನ ಸಚಿವರಿಗೆ ಪ್ರಮಾಣವಚನ ಹಾಗೂ ಖಾತೆ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿರುವ ಲಕ್ಷ್ಮಣ್ ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಸಚಿವ ಸ್ಥಾನ ನೀಡದಿರುವುದರಿಂದ ಪ್ರಭಾವಿ ಲಿಂಗಾಯತ ಸಮುದಾಯ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದೆ..
ಮುಂದುವರಿದು ಹಿರಿಯ ಶಾಸಕರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ಸಿಗದೇ ಇರುವುದು ಕೂಡ ಅಸಮಾಧಾನಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರು ಈ ಸಮಯದಲ್ಲಿ ಸಚಿವ ಸಂಪುಟ ಖಾತೆ ಹಂಚಿಕೆ ಇಂಥ ಸಮಯದಲ್ಲಿ ಅಸಮಾಧಾನ ಗೊಳ್ಳುವುದು ಸಹಜ…. ಆದರೆ ಇದು ಹೀಗೆ ಮುಂದುವರೆದುಕೊಂಡು ಹೋಗಬಾರದು ಒಂದು ಹಂತಕ್ಕೆ ಅಸಮಾಧಾನ ಶಮನಗೊಂಡರೆ ಒಳಿತು ಸರ್ಕಾರ ನಡೆಸುವುದಕ್ಕೆ ಸಹಕಾರಿಯಾಗುತ್ತದೆ…
ರಘುರಾಜ್ ಹೆಚ್.ಕೆ…9449553305…