

ಹೀಗೆ ಈ ನ್ಯೂಸ್ ವಾರಿಯರ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಈ ಸುದ್ದಿಗೆ ವ್ಯಾಪಕವಾದ ಸ್ಪಂದನೆ ವ್ಯಕ್ತವಾಗಿದ್ದು . ರಾಜ್ಯದ ಹಲವು ಕಡೆಯಿಂದ ಕರೆ, ಮೆಸೇಜ್ ಗಳನ್ನು ಮಾಡಿ ಪತ್ರಿಕೆಯ ಬರಹಗಳಿಗೆ ಬೆಂಬಲ ನೀಡಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಂಡು ಆದಷ್ಟು ಬೇಗ ಈ ಆನ್ಲೈನ್ ಬೆಟ್ಟಿಂಗ್ ಗೇಮ್ ಗಳ ಮೇಲೆ ನಿಷೇಧ ತರಬೇಕು ಎನ್ನುವುದು ಎಲ್ಲರ ಒತ್ತಾಸೆಯಾಗಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಯತ್ನ ಪಡುತ್ತಾ ಯುವ ಸಮುದಾಯ ಈ ಆನ್ಲೈನ್ ಬೆಟ್ಟಿಂಗ್ ದಂಧೆಯಲ್ಲಿ ಮುಳುಗಿ ತಮ್ಮ ಜೀವ ಜೀವನ ಎರಡನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನೇ ಬಲಿ ಕೊಡುತ್ತಿದ್ದಾರೆ. ಕೆಲವರಂತೂ ಆತ್ಮಹತ್ಯೆಯುಂತಹ ಕಠೋರ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.
ಆದ್ದರಿಂದ ಸರ್ಕಾರ ನ್ಯಾಯಾಲಯದ ಮನವೊಲಿಸಿ ಇದರ ತೀವ್ರತೆಯ ಬಗ್ಗೆ ತಿಳಿ ಪಡಿಸಿ ಆದಷ್ಟು ಬೇಗ ಇದರ ಮೇಲೆ ನಿಯಂತ್ರಣ ತರಬೇಕು ಹಾಗೂ ರಾಜ್ಯದಲ್ಲಿ ಆನ್ಲೈನ್ ಗೇಮ್ ಬೆಟ್ಟಿಂಗ್ ದಂಧೆಯಿಂದ ಮುಕ್ತ ಮಾಡಬೇಕು… ಎನ್ನುವುದು ಪತ್ರಿಕೆಯ ಆಶಯ…
ರಘುರಾಜ್ ಹೆಚ್.ಕೆ…9449553305….