
ಶಿವಮೊಗ್ಗ: ದೇಶದೆಲ್ಲೆಡೆ 77ನೇ ಸ್ವಾತಂತ್ರ್ಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ .ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಗೋಸ್ಕರ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ನೆನಪು ಮಾಡಿಕೊಳ್ಳುವ ಅಮೂಲ್ಯವಾದ ಕ್ಷಣ ಇದಾಗಿದ್ದು.
ಈ ಸುಸಂದರ್ಭದಲ್ಲಿ ಸ್ವಾತಂತ್ರಕ್ಕಾಗಿ ಹೋರಾಡಿದ ಹಿರಿಯ ಚೇತನಗಳಾದ ನಗರದ ರವೀಂದ್ರ ನಗರದ ಆರನೇ ತಿರುವಿನಲ್ಲಿರುವ ಕಾಶಿನಾಥ್ ಶೆಟ್ಟಿ ಎಟಿ ಹಾಗೂ ಗಾಂಧಿನಗರದಲ್ಲಿರುವ ಮೇಜರ್ ಆರ್ ಜಿ ತೆಲಂಗ್ ಅವರುಗಳ ನಿವಾಸಕ್ಕೆ ಜಿಲ್ಲಾಧಿಕಾರಿಗಳಾದ ಡಾ/ ಸೆಲ್ವಮಣಿ ಆರ್ ,ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಭೇಟಿ ನೀಡಿ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಎಚ್ .ಜಿ. ಸತ್ಯನಾರಾಯಣ ಹಾಗೂ ತಹಶೀಲ್ದಾರ್ ಎನ್ ಜೆ. ನಾಗರಾಜ್ ಹಾಜರಿದ್ದರು…
ರಘುರಾಜ್ ಹೆಚ್.ಕೆ..9449553305….