Wednesday, April 30, 2025
Google search engine
Homeಶಿವಮೊಗ್ಗಆರೋಗ್ಯರಕ್ತದಾನದ ಬಗ್ಗೆ ಜಾಗೃತಿ ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘದ ಪ್ರಯತ್ನ ಶ್ಲಾಘನೀಯ..!ವಲಯ ಅರಣ್ಯಾಧಿಕಾರಿ ಮಧುಕರ್..!

ರಕ್ತದಾನದ ಬಗ್ಗೆ ಜಾಗೃತಿ ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘದ ಪ್ರಯತ್ನ ಶ್ಲಾಘನೀಯ..!ವಲಯ ಅರಣ್ಯಾಧಿಕಾರಿ ಮಧುಕರ್..!


ರಕ್ತ ದಾನ ಶಿಬಿರಗಳನ್ನು ನಿರಂತರವಾಗಿ ಸಂಘಟಿಸುವುದು ಸುಲಭವಲ್ಲ. ಅಂತಹುದರಲ್ಲೂ ಸರ್ಕಾರಿ ನೌಕರರು,ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಕಳೆದ ಕೆಲವಾರು ವರ್ಷಗಳಿಂದ ನಿರಂತರವಾಗಿ ವರ್ಷಕ್ಕೆರಡು ಬಾರಿ ರಕ್ತದಾನ ಶಿಬಿರವನ್ನು ಸಂಘಟಿಸುವ ಮೂಲಕ ರಕ್ತದಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಮಾಜಮುಖಿ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಮೇಗರವಳ್ಳಿ ವಲಯ ಅರಣ್ಯಾಧಿಕಾರಿ ಮಧುಕರ್ ಎಸ್ ವಿ ನುಡಿದರು. ಅವರು  76 ನೇ ಸ್ವಾತಂತ್ರೋತ್ಸವದ ಸಂಭ್ರಮದ ಪ್ರಯುಕ್ತ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸ್ವತಃ ರಕ್ತದಾನ ಮಾಡಿ  ಇತರೆ ರಕ್ತದಾನಿಗಳಿಗೆ ಪ್ರಶಂಸಾ ಪತ್ರ ವಿತರಿಸಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜದಲ್ಲಿ ರಕ್ತ ದಾನದ ಬಗ್ಗೆ ಇರುವ ಹಿಂಜರಿಕೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇದು  ನಮ್ಮದೊಂದು ಪುಟ್ಟ ಪ್ರಯತ್ನ. ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣ ರಾಜ್ಯೋತ್ಸವ ಸಂದರ್ಭಗಳಲ್ಲಿ ನಡೆಸಲಾಗುವ ಈ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಸಂತಸದ ಸಂಗತಿ ಎಂದ ಸಂಘದ ಅಧ್ಯಕ್ಷ ಟಿ ವಿ ಸತೀಶ ಇದು ನಮ್ಮ ಸಂಘಟನೆಯ ನಿರಂತರ ಹನ್ನೊಂದನೆ‌ ಶಿಬಿರವಾಗಿದ್ದು ಪ್ರತಿ ವರ್ಷ  ಹೊಸ ಹೊಸ ರಕ್ತ ದಾನಿಗಳು ಸೇರ್ಪಡೆಗೊಳ್ಳುತ್ತಿರುವುದರಿಂದ‌ ನಮ್ಮ ಮುಖ್ಯ ಉದ್ದೇಶ ಈಡೇರುತ್ತಿರುವುದು ಸಂತಸ ತಂದಿದೆ. ಈ ವರ್ಷ ಅತೀ ಹೆಚ್ಚು ಪ್ರಮಾಣದಲ್ಲಿ ಏಳು ಜನ ಪ್ರಥಮ ಬಾರಿಗೆ ರಕ್ತದಾನ ಮಾಡಿದ್ದಾರೆ. ಒಮ್ಮೆ ರಕ್ತದಾನ ಮಾಡಿದವರು ಅಗತ್ಯವಿದ್ದಾಗ ರಕ್ತದಾನ ಮಾಡಲು ಮುಂದೆ ಬರುತ್ತಾರೆ. ನಮ್ಮ ಶಿಬಿರಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ರಕ್ತದಾನಿಗಳಾಗಿದ್ದಾರೆ. ಇದು ನಿಜಕ್ಕೂ ನಮಗೆ ಸಾರ್ಥಕತೆ ತಂದಿದೆ.ಇಂದೇ ರಕ್ತದಾನ ಮಾಡಬೇಕೆಂದೇನೂ ಇಲ್ಲ. ದಾನಿಗಳು ತಮಗೆ ಅನುಕೂಲವಾದ ದಿನ ಅನುಕೂಲ ಸಮಯಕ್ಕೆ‌ ರಕ್ತದಾನ ಮಾಡಬಹುದು.ಒಟ್ಟಿನಲ್ಲಿ ರಕ್ತದಾನ ಮಾಡುವುದು ಮುಖ್ಯ. ನಮ್ಮ ಈ ಕಾರ್ಯಕ್ಕೆ ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಸಂಘದ ಉಪಾಧ್ಯಕ್ಷರುಗಳಾದ ರಾಘವೇಂದ್ರ ಎಸ್ ನೇತೃತ್ವದ ಆರ್ ಡಿ ಪಿ ಆರ್ ತಂಡ, ಎಲ್ಲಪ್ಪ ವಡ್ಡರ್ ನೇತೃತ್ವದ ಅರಣ್ಯ ಇಲಾಖಾ ತಂಡ, ಜಂಟಿ ಕಾರ್ಯದರ್ಶಿ ಕೌಶಿಕ್ ಮತ್ತು ಕೃಷಿ ಇಲಾಖಾ ಉಪ ನಿರ್ದೇಶಕ ಪ್ರವೀಣ್ ನೇತೃತ್ವದ ಕೃಷಿ ಇಲಾಖಾ ತಂಡ, ಡಾ.ಅನಿಕೇತನ್ ನೇತೃತ್ವದ ಆರೋಗ್ಯ ಇಲಾಖಾ ತಂಡ.ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್,ಶಿರಸ್ತೆದಾರ್ ಕಟ್ಟೆ ಮಂಜುನಾಥ್, ಕಂದಾಯ ನಿರೀಕ್ಷಕ ಸೂರತ್ ಕುಮಾರ್, ಉಪನ್ಯಾಸಕ ನಾಗಭೂಷಣ, ಪ್ರೌಢಶಾಲಾ ಶಿಕ್ಷಕ ಕೇಶವ, ಯುವ ಮುಖಂಡ ಕಾರ್ತಿಕ್, ವಿಧ್ಯಾರ್ಥಿ ನಚಿಕೇತ್ ಶೆಟ್ಟಿ, ರೋಟರಿಯನ್ ಶಾಂತಕುಮಾರ್, ಕೃಷಿಕ ವಿಶ್ವಾಸ್ ಶೆಣೈ, ಸತೀಶ ಜಿಗಳಗೋಡು  ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು , ವಿವಿಧ ಸಮಾಜಮುಖಿ ಕಾಳಜಿಯ ಯುವಕರು,ಸಾರ್ವಜನಿಕರು ರಕ್ತದಾನ ಮಾಡಿದರು.

ಕಾರ್ಯದರ್ಶಿ ರಾಮು ಬಿ, ಖಜಾಂಚಿ ಹೆಚ್ ಸಿ ಪವಿತ್ರ, ಮಾಜಿ ಗೌರವಾಧ್ಯಕ್ಷ ಆರ್ ಎಂ ಧರ್ಮಕುಮಾರ್ ಮತ್ತಿತರರರು ಇದ್ದರು..

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...