
ಶಿವಮೊಗ್ಗ : ಹಾವೇರಿ ಗದಗ ಭಾಗದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಲುವಾಗಿ ಟಿಕೆಟ್ ಆಕಾಂಕ್ಷಿಯಾದ ಕೆ.ಈ ಕಾಂತೇಶ್ ಬಿರುಸಿನ ಕ್ಷೇತ್ರ ಪ್ರವಾಸದಲ್ಲಿದ್ದಾರೆ.
ಈ ಬಗ್ಗೆ ಇಂದು ಬೊಮ್ಮನ ಕಟ್ಟೆ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಜನರು ಪಕ್ಷದ ಕಾರ್ಯಕರ್ತರು ಕಾಂತೇಶ್ ಈ ಬಾರಿ ಸ್ಪರ್ಧೆ ಮಾಡಲಿ ಎಂದು ಬಯಸಿದ್ದಾರೆ. ಆ ಕ್ಷೇತ್ರದ ಎಲ್ಲಾ ಸಮುದಾಯದ ಮಠಾಧಿಶರುಗಳು ಕಾಂತೇಶ್ ಗೆ ಆಶೀರ್ವಾದ ಮಾಡಿದ್ದಾರೆ. ಹಾಗೆಯೇ ಕೆಲವರು ಕೂಡ ಲೋಕಸಭೆಗೆ ಸ್ಪರ್ಧೆ ಮಾಡಲು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದರಲ್ಲಿ ಕಾಂತೇಶ್ ಕೂಡ ಒಬ್ಬ ಆಕಾಂಕ್ಷಿ ಅಷ್ಟೆ ಅವರೇನು ಸ್ಪೆಷಲ್ ಅಲ್ಲ. ಹೈಕಮಾಂಡ್ ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.
ಸಂಭ್ರಮದ ಖರ್ಚನ್ನು ಲೆಕ್ಕ ಹಾಕೋದು ಕಾಂಗ್ರೆಸ್ ನ ಮುಟ್ಠಾಳತನ.

ಮನೆಯ ಮಗನೊಬ್ಬ ಫಸ್ಟ್ ರ್ಯಾಂಕ್ ಬಂದಾಗ ತಂದೆ ಮಗನಿಗೆ ಸಿಹಿ ತಿನಿಸುತ್ತಾನೆ ಆಗ ಸಿಹಿ ಖರ್ಚಿನ ಬಗ್ಗೆ ಲೆಕ್ಕ ಹಾಕೋದು ಮುಟ್ಠಾಳತನ ಇದ್ದಂತೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಇಸ್ರೋ ಚಂದ್ರಯಾನದ – 3 ಯಶಸ್ಸಿನಿಂದ ಭಾರತದ ಕೀರ್ತಿ ಉನ್ನತ ಸ್ಥಾನಕ್ಕೆ ಹೋಗಿದೆ. ಭಾರತೀಯ ಸಂಸ್ಕೃತಿ, ಧರ್ಮವು ವಿಶ್ವದ ಗಮನ ಸೆಳೆಯುತ್ತಿರವುದು ಒಂದೆಡೆಯಾದರೆ ವಿಜ್ಙಾನ ಮತ್ತೊಂದೆಡೆ ವಿಶ್ವದ ಗಮನ ಸೆಳೆಯುವಂತೆ ಮಾಡಿದೆ.
ಚಂದ್ರಯಾನದ-3 ಉಡಾವಣೆಗೆ ಸುಮಾರು 615 ಕೋಟಿ ವೆಚ್ಚವಾಗಿದೆ. ವಿಕ್ರಮ್ ಚಂದ್ರನ ಮೇಲೆ ಕಾಲಿಟ್ಟ ಯಶಸ್ಸನ್ನು ಭಾರತೀಯರು ವಿಶ್ವದೆಲ್ಲೆಡೆ ಸಂಭ್ರಮಿಸಿದ್ದಾರೆ. ಪ್ರಧಾನಿ ಮೋದಿಯವರು ವಿಜ್ಙಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿದ್ದಾರೆ ಕಾಂಗ್ರೆಸ್ ಪಕ್ಷ ಸಿಹಿ ಹಂಚುವ ಸಮಯದಲ್ಲಿ ಖರ್ಚಿನ ಬಗ್ಗೆ ಮಾತನಾಡಿ ಮುಟ್ಠಾಳತನ ಪ್ರದರ್ಶಿಸಿದೆ ಎಂದರು.
ವರದಿ: ವಿನಯ್ ಕುಮಾರ್ ಹೆಚ್.ಎಮ್