
ಶಿವಮೊಗ್ಗ : ಬೊಮ್ಮನ ಕಟ್ಟೆ ರಸ್ತೆಯ ದೇವಂಗಿ ರತ್ನಾಕರ ಬಡಾವಣೆಯಲ್ಲಿರುವ 75ನೇ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಗಸ್ಟ್ 31ರಿಂದ ಸೆ.2ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ.
ಆರಾಧನೆಯಲ್ಲಿ ಏನೆಲ್ಲಾ ಸೇವೆಗಳು ನಡೆಯಲಿವೆ..?
ಆರಾಧನಾ ಮಹೋತ್ಸವದ ವಿವರಣೆ ನೀಡಿದ ಮಠದ ವ್ಯವಸ್ಥಾಪಕ ಧೀರೇಂದ್ರ ಆಚಾರ್ ಆಗಸ್ಟ್ 30ರಂದು ಸಂಜೆ 6ಕ್ಕೆ ಗೋಪೂಜೆ, ಲಕ್ಷ್ಮೀ ಪೂಜೆ, ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್ ಈಶ್ವರಪ್ಪರವರ ಉಪಸ್ಥಿತಿ ಇರಲಿದೆ.
ಆಗಸ್ಟ್ 31ರ ಬೆಳಗ್ಗೆ 5.30 ಕ್ಕೆ ಸುಫ್ರಭಾತದಿಂದ ಆರಂಭವಾಗುವ ಪೂರ್ವಾರಾಧನೆ ಅಷ್ಟೋತ್ತರ, ಕ್ಷೀರಾಭಿಷೇಕ, ಪಾದಪೂಜೆಯೊಂದಿಗೆ ಕನಕಾಭಿಷೇಕ ಅರ್ಚನೆ ನಡೆಸಿ ಮಹಾಮಂಗಳಾರತಿ ತೀರ್ಥಪ್ರಸಾಧ ವಿನಿಯೋಗ ಮಾಡುವ ಮೂಲಕ ಕೊನೆಯಾಗುತ್ತದೆ.
ಸೆ.1(ದ್ವಿತೀಯ) ಗುರುರಾಜರ ಮಧ್ಯಾರಾಧನೆ ಹಾಗು ಸೆ.2 ಶ್ರೀ ಗುರುರಾಜರ ಉತ್ತರಾಧನೆ ನಡೆಯಲಿದ್ದು ಅಂದು ಬೆಳಗ್ಗೆ 9ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ತಿಳಿಸಿದರು. ಭಕ್ತರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಗುರುರಾಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಿದರು.
ವರದಿ- ವಿನಯ್ ಕುಮಾರ್ ಹೆಚ್.ಎಮ್