
ಶಿವಮೊಗ್ಗ : ಚಂದ್ರಯಾನ-3 ಆರಂಭವಾಗಿನಿಂದ ವಿಕ್ರಮ ಚಂದ್ರನ ಮೇಲೆ ಪಾದ ಸ್ಪರ್ಶಮಾಡುವ ತನಕ ಇಡೀ ವಿಶ್ವ ಕಾತುರದಿಂದ ಕಾದು ಭಾರತದ ಕಡೆ ನಿಬ್ಬೆರಗಾಗಿ ನೋಡಿದೆ.
ಯಶಸ್ಸಿನ ಸಂಭ್ರಮ ಹಸಿರಾಗಿರುವಾಗಲೇ ಚಂದ್ರಯಾನ-3 ತಂಡದಲ್ಲಿದ್ದ ಇಸ್ರೋ ವಿಜ್ಙಾನಿ ಒಬ್ಬರು ಮಲೆನಾಡಿನಲ್ಲಿ ಇಂದು ಕಾಣಿಸಿಕೊಂಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯ ದಿ.ಗೋವಿಂದರಾಜ ಉಡುಪರ ಪುತ್ರ ಸುಬ್ರಹ್ಮಣ್ಯ ಉಡುಪರು ನಮ್ಮ ಜಿಲ್ಲೆಯ ಹೆಮ್ಮೆಯ ಇಸ್ರೋ ತಂಡದ ವಿಜ್ಙಾನಿ.
ಇಂದು ಮಾಜಿ ಗೃಹ ಸಚಿವ ಆರಗ ಜ್ಙಾನೇಂದ್ರರವರು ತವರಿಗೆ ಆಗಮಿಸಿದ್ದ ವಿಜ್ಙಾನಿ ಸುಬ್ರಹ್ಮಣ್ಯ ಉಡುಪರನ್ನು ಭೇಟಿ ಮಾಡಿ ಅಭಿನಂದಿಸಿದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಆರಗ ಜ್ಙಾನೇಂದ್ರ ಆಗಸ್ಟ್ 23ರ ನಂತರ ಇಡೀ ಪ್ರಪಂಚ ಭಾರತವನ್ನು ಬಹಳ ಬೆರಗಾಗಿ ನೋಡುತ್ತಿದೆ ಚಂದ್ರಯಾನ -3 ಯೋಜನೆಯಲ್ಲಿ ಇಸ್ರೋನ ಸುಮಾರು 500ಕ್ಕೂ ಹೆಚ್ಚು ವಿಜ್ಙಾನಿಗಳು ಕೆಲಸ ಮಾಡಿದ್ದಾರೆ. ಅವರಲ್ಲಿ ನಮ್ಮ ಜಿಲ್ಲೆಯ ನಮ್ಮ ಊರಿನವರು ಇರುವುದು ನಮ್ಮ ಹೆಮ್ಮೆ. ನಮ್ಮ ಗುರುಗಳಾದ ದಿ.ಗೋವಿಂದರಾಜ ಉಡುಪರ ಪುತ್ರ ಸುಬ್ರಹ್ಮಣ್ಯ ಉಡುಪರು ಇವರಿಂದ ಇನ್ನಷ್ಟು ಹೆಮ್ಮೆಯ ಕೆಲಸಗಳು ವಿಜ್ಙಾನ ಕ್ಷೇತ್ರದಲ್ಲಿ ಮುಂದುವರಿಯಲಿ ಎಂದು ಆಶಿಸಿದರು.
ನಂತರ ತೀರ್ಥಹಳ್ಳಿ ತಾಲೂಕಿನ ಮತ್ತೊಬ್ಬ ವಿಜ್ಙಾನಿ ಕೋಣಂದೂರು ಲಿಂಗಪ್ಪನವರ ಪುತ್ರಿ ಶಿವಾನಿಯವರಿಗೆ ಅಭಿನಂದನೆ ಸಲ್ಲಿಸಿದರು.