
ಶಿವಮೊಗ್ಗ : ಇಂದು ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮ ನಿಮಿತ್ತ ಜಿಲ್ಲೆಗೆ ಆಗಮಿಸಿದರು.
ಶಿವಮೊಗ್ಗದ ತಮ್ಮ ಸ್ವಗೃಹದಲ್ಲಿ ಮಾಧ್ಯಮ ಹೇಳಿಕೆ ನೀಡಿದ ಸಚಿವ ಮಧು ಬಂಗಾರಪ್ಪ ಇಸ್ರೋ ಸಾಧನೆಯನ್ನು ಮೆಚ್ಚಲೇಬೇಕು. ನಮ್ಮ ಸಮಾಜದವರು ಚಂದ್ರಯಾನ-3 ತಂಡದಲ್ಲಿ ಇದ್ದದ್ದು ಹೆಮ್ಮೆಯ ವಿಚಾರ. ನಮ್ಮ ಸಿ.ಎಮ್ ಹೋಗಿ ಅಭಿನಂದಿಸಿದ್ದಾರೆ ಹೋಗದೆ ಇದ್ದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮೋದಿಯವರು ಬಂದದ್ದು ಪ್ರಚಾರಕ್ಕಾಗಿ ಮಣಿಪುರದಲ್ಲಿ ಅಷ್ಟೊಂದು ಜನ ಸಾಯಬೇಕಾದರೆ ಅಲ್ಲಿಗೆ ಹೋಗಲಿಲ್ಲ. ರಾಕೆಟ್ ಬಿಟ್ಟ ತಕ್ಷಣ ಹೋಗುತ್ತಾರೆ ಅದು ತಪ್ಪು ಅಂತ ಹೇಳೋಲ್ಲ ಮಣಿಪುರಕ್ಕೆ ಹೋಗಿದ್ದರೆ ಸಾವು ನೋವು ಕಡಿಮೆ ಆಗುತ್ತಿತ್ತು ಪ್ರಧಾನಿ ತಂದೆ ಸ್ಥಾನದಲ್ಲಿ ಇದ್ದಂತೆ.
ಬಿಜೆಪಿ ಮುಖಂಡರು ಬ್ಯಾರಿಕೇಡ್ ಹಿಂದೆ ನಿಂತು ಮೋದಿಯವರನ್ನು ಸ್ವಾಗತಿಸಿದ್ದಾರೆ ಇದು ಅವರಿಗೆ ಸಿಕ್ಕ ಪುಣ್ಯ ಎಂದರು.
ವರದಿ – ವಿನಯ್ ಕುಮಾರ್ ಹೆಚ್.ಎಮ್