
ದಾವಣಗೆರೆ: ನಗರದ ಕು|| ನೇಹಾ ಚನ್ನಗಿರಿ ಅವರು, ಅಪ್ಸ್ ಮಾಡೆಲ್ ಮ್ಯಾನೇಜ್‌ಮೆಂಟ್ ವತಿಯಿಯಿಂದ ಚಿಕ್ಕಮಗಳೂರಿನಲ್ಲಿ ನಿನ್ನೆ ನಡೆದ ಮಿಸ್ಟರ್, ಮಿಸಸ್, ಮಿಸ್ ಟೀನ್ ಮಲ್ನಾಡು 2023ರ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಭಾಗವಹಿಸಿ, ಮೀಸ್ ಟೀನ್ ಮಲ್ನಾಡ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ನಗರಕ್ಕೆ ಕೀರ್ತಿ ತಂದಿದ್ದಾರೆ.
ನಗರದ ರಂಜಿತ್ ಮಾಲ್ ಗಾಂಧಿ ಕಾಮರ್ಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎ ವಿದ್ಯಾರ್ಥಿಯಾಗಿ ಓದುತ್ತಿರುವ, ಇವರು ನಗರದ ಹೆಸರಾಂತ ಚನ್ನಗಿರಿ ಮನೆತನದವರಾದ ಶ್ರೀಮತಿ ರಶ್ಮಿ ಮತ್ತು ಭರತ್ ಎಸ್ ಚನ್ನಗಿರಿ ಅವರ ಪುತ್ರಿಯಾಗಿದ್ದು, ಶ್ರೀಮತಿ ದೇವಲೀಲಾ ಮತ್ತು ಚನ್ನಗಿರಿ ಸತ್ಯಾನಾರಾಯಣ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಮತ್ತು ಗೋವಿಂದರಾಜ್ ಗುಪ್ತ ಇವರ ಮೊಮ್ಮಗಳು.
ಚನ್ನಗಿರಿ ಕುಟುಂಬ ಕುಮಾರಿ ನೇಹಾ ಗೆ ಪ್ರಶಂಸೆ ಹಾಗೂ ಅಭಿನಂದನೆ ಸಲ್ಲಿಸಿದೆ.