
ಶಿವಮೊಗ್ಗ : ಇನ್ನೂ ಮಲಗಿದರೆ ಏಳುವಾಗ ಭಾರತವಿರುವುದಿಲ್ಲ. ಕರ್ನಾಟಕ ಸಂಘದಲ್ಲಿ ಆಯೋಜನೆ ಯಾಗಿದ್ದ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮದ ವೇಳೆ ತಕ್ಷಣ ಕರೆಂಟ್ ಹೋಯಿತು…

ಕಾರ್ಯಕ್ರಮ ಆರಂಭಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಪರಿಸ್ಥಿತಿ ಕೊಂಚ ಕಸಿವಿಸಿ ಮಾಡಿದ್ದರೂ ಜನ ಉಪನ್ಯಾಸ ಕೇಳಲು ಧಾವಿಸಿದರು.
ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡುವ ಮಧ್ಯಭಾಗದಲ್ಲಿ ಕರೆಂಟ್ ಕಟ್… ಪ್ರೇಕ್ಷಕರು ಕರೆಂಟ್ ಬರುತ್ತದೆ ಎಂದು ಚಕ್ರವರ್ತಿ ಸೂಲಿಬೆಲೆ ಸಹಿತ ಕಾಯುತ್ತಿದ್ದರು ಆದರೆ ಕರೆಂಟ್ ಬರಲಿಲ್ಲ.
ಕತ್ತಲೆಯಲ್ಲಿ ಶ್ರೀ ರಾಮ ನಾಮ ಜಪ
ಕರೆಂಟ್ ಗಾಗಿ ಕಾದ ಪ್ರೇಕ್ಷಕರು ಕೆಲ ನಿಮಿಷಗಳ ನಂತರ ರಾಮ ನಾಮ ಜಪವನ್ನು ಆರಂಭಿಸಿದರು ಕ್ರಮೇಣ ರಾಮ ನಾಮವು ಎಲ್ಲಾ ಸಭೀಕರ ಬಾಯಲ್ಲಿ ಬಂದು ಕಾರ್ಯಕ್ರಮದ ಉತ್ಸಾಹ ಹೆಚ್ಚು ಮಾಡಿ ಚಕ್ರವರ್ತಿ ಸೂಲಿಬೆಲೆಯ ಉತ್ಸಾಹ ಹೆಚ್ಚು ಮಾಡಿತ್ತು .
ಉಪನ್ಯಾಸ ಪೂರ್ಣಗೊಂಡ ನಂತರ ಪೂರ್ಣ ಪ್ರಮಾಣದಲ್ಲಿ ಕರೆಂಟ್ ಬಂದಾಗ ಸಭೀಕರು ಜೈ ಶ್ರೀರಾಮ್ ಹೇಳುವ ಮೂಲಕ ಎರಡನೇ ದಿನದ ಉಪನ್ಯಾಸಕ್ಕೆ ಇತಿ ಶ್ರೀ ಹೇಳಿದರು.
ವರದಿ- ವಿನಯ್ ಕುಮಾರ್ ಹೆಚ್.ಎಮ್