ಶಿವಮೊಗ್ಗ : ಕಾಂಗ್ರೆಸ್ ಪಕ್ಷ ಅವರ ಹಣೆಬರಹಕ್ಕೆ ಬಿಜೆಪಿಯ ಒಬ್ಬ ಶಾಸಕರನ್ನು ತೆಗೆದುಕೊಳ್ಳಲು ಆಗಲಿಲ್ಲ. ಬರೆದಿಟ್ಟುಕೊಳ್ಳಿ ಲೋಕಸಭಾ ಚುನಾವಣೆಯ ಸಮಯದಲ್ಲಿ ರಾಜ್ಯದಲ್ಲಿ ಈ ಸರ್ಕಾರ ಇರೋಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೆ.ಎಸ್ ಈಶ್ವರಪ್ಪರವರು ಡಿ.ಕೆ ಶಿವಕುಮಾರ್ ರವರು ನಮ್ಮ ಪಕ್ಷದ ನಾಯಕರ ವಿರುದ್ಧ ಬಹಳ ಕೀಳಾಗಿ ಮಾತನಾಡುತ್ತಿದ್ದಾರೆ.
ಈ ಹಿಂದೆ ಅವರ ಸರ್ಕಾರ ಇದ್ದಾಗ ಆಡಳಿತ ವೈಖರಿಯ ಅಸಮಾಧಾನದಿಂದ 17ಜನ ಶಾಸಕರು ರಾಜಿನಾಮೆ ನೀಡಿ ಹೊರಬಂದಿದ್ದರು ಇದು ಡಿಕೆಶಿ ನೆನಪು ಮಾಡಿಕೊಳ್ಳಬೇಕು. ಈಗಿನ ಸರ್ಕಾರದಲ್ಲಿರುವ ಶಾಸಕರು ಕೂಡ ಅಸಮಾಧಾನದಲ್ಲಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಅಸಮಾಧಾನ ಇದ್ದ ಮೇಲೆ ನೀವು ಅಧಿಕಾರದಲ್ಲಿ ಯಾಕೆ ಇರುತ್ತೀರಿ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆಯವರೇ ನೋಡ್ತಾ ಇರಿ.
ಸಚಿವ ಪ್ರಿಯಾಂಕ್ ಖರ್ಗೆಯವರು ಬಿ.ಎಲ್ ಸಂತೋಷ್ ರವರಿಗೆ ಸರ್ಕಾರ ಮುಟ್ಟಿ ನೋಡಿ ಎಂದು ಹೇಳಿದ್ದಾರೆ. ನೋಡುತ್ತಾ ಇರಿ ಪ್ರಿಯಾಂಕ್ ಖರ್ಗೆ ಲೋಕಸಭಾ ಚುನಾವಣೆ ವೇಳೆ ನಿಮ್ಮ ಸರ್ಕಾರ ಏನಾಗಿರುತ್ತೆ ಎಂದು ತಿಳಿಸಿದರು.ರಾಜ್ಯದಲ್ಲಿ ಆಪರೇಷನ್ ಕಮಲ ನೂರಕ್ಕೆ ನೂರರಷ್ಟು ಆಗುತ್ತೆ ಈ ಸರ್ಕಾರ ಬೀಳುತ್ತೆ ಎಂದರು.
ವರದಿ – ವಿನಯ್ ಕುಮಾರ್ ಹೆಚ್.ಎಮ್