ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರ ಸರ್ವಪಕ್ಷ ನಿಯೋಗವು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಭೇಟಿ ಮಾಡಿತು.

ಹಣ ಬಿಡುಗಡೆಗೆ ಮನವಿ.

ಈ ಬಾರಿ ನಾಡ ಹಬ್ಬ ದಸರಾ ಹಬ್ಬವನ್ನು ಶಿವಮೊಗ್ಗ ನಗರದಲ್ಲಿ ಅದ್ದೂರಿಯಾಗಿ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದಿಂದ1.5 ಕೋಟಿ ಹಣ ಮಂಜೂರು ಮಾಡುವಂತೆ ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರ ಸರ್ವ ಪಕ್ಷಗಳ ನಿಯೋಗವು ಶಾಸಕರಾದ ಚನ್ನಬಸಪ್ಪ ನೇತೃತ್ವದಲ್ಲಿ ಇಂದು ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ ದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ ಸಲ್ಲಿಸಿದರು.
ಕಳೆದ ಬಾರಿ ಶಿವಮೊಗ್ಗ ನಗರದ ದಸರಾ ಉತ್ಸವಕ್ಕೆ ರಾಜ್ಯ ಸರ್ಕಾರ 1ಕೋಟಿ ಮಂಜೂರು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕೂಡ ಹಲವು ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ ಯಶಸ್ವಿಗೊಳಿಸಲಾಗಿತ್ತು. ಈ ಭಾರಿ ಅದ್ದೂರಿಯ ದಸರಾ ನಡೆಸುವ ಸಲುವಾಗಿ ಇನ್ನೂ ಹೆಚ್ಚಿನ ಹಣ ಮಂಜೂರಿಗೆ ಪಾಲಿಕೆ ಸರ್ವಪಕ್ಷಗಳ ನಿಯೋಗ ಮುಖ್ಯಮಂತ್ರಿಗಳ ಭೇಟಿಗೆ ತೆರಳಿದ್ದರು.
ಏನಂದ್ರು ಸಿ.ಎಮ್ ಸಿದ್ಧರಾಮಯ್ಯ.

ಶಾಸಕರ ಹಾಗು ಪಾಲಿಕೆ ಸದಸ್ಯರ ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ದಸರಾ ಕಾರ್ಯಕ್ರಮಗಳ ಪಟ್ಟಿಯನ್ನು ಪರಿಶೀಲಿಸಿ ಹಣ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್ ಚನ್ನಬಸಪ್ಪ, ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರ ನಾಯ್ಕ, ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, , ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೀಶ್, ನಾಗರಾಜ ಕಂಕಾರಿ,ಸುವರ್ಣ ಶಂಕರ್,ಭಾನುಮತಿ ವಿನೋದ್ , ಧೀರರಾಜ್ ಹೊನ್ನವಿಲೆ, ವಿಶ್ವಾಸ್ , ಎಸ್ ಜಿ ರಾಜು, ಆರ್.ಸಿ. ನಾಯ್ಕ್, ಹಾಗೂ ಪ್ರಮುಖರಾದ ಶಂಕರ ನಾಯ್ಕ, ಕೆ ರಂಗನಾಥ್ ಇನ್ನಿತರರಿದ್ದರು.
ವರದಿ – ವಿನಯ್ ಕುಮಾರ್ ಹೆಚ್.ಎಮ್