ಶಿವಮೊಗ್ಗ : ರಾಜ್ಯ ಸರ್ಕಾರ ಶಿಕ್ಷಣದ ಹೆಸರಲ್ಲಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಪರಿಷತ್ ಸದಸ್ಯ ಡಿ.ಎಸ್ ಅರುಣ್ ತಿಳಿಸಿದ್ದಾರೆ.

ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಿ.ಎಸ್ ಅರುಣ್ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಲಾ ಮಕ್ಕಳ ಪಠ್ಯದಲ್ಲಿ ಇದ್ದಂತಹ ಚಕ್ರವರ್ತಿ ಸೂಲಿಬೆಲೆ, ಡಾ.ಹೆಡಗೆವಾರ್ ಮತ್ತು ಶತಾವಧಾನಿ ಗಣೇಶ್ ರವರು ಬರೆದಿರುವಂತ ಪಠ್ಯಗಳನ್ನು ತೆಗೆದು ಹಾಕಿ ಸಂಭ್ರಮಿಸಿದ್ದಾರೆ ಈ ಮೂಲಕ ಸಿದ್ಧರಾಮಯ್ಯ ಶಿಕ್ಷಣದ ಹೆಸರಲ್ಲಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ.
ತೆಗೆದು ಹಾಕಲಾದ ಪಠ್ಯವನ್ನು ಬರೆದವರು ತಮ್ಮ ಬದುಕಿನ ಬಗ್ಗೆ ಬರೆದುಕೊಂಡಿಲ್ಲ ಬದಲಾಗಿ ದೇಶ ಭಕ್ತರ ಬಗ್ಗೆ ವಿಧ್ಯಾರ್ಥಿಗಳಿಗೆ ತಿಳಿಸಿದ್ದರು. ಇಂದಿನ ಮಕ್ಕಳಿಗೆ ಭಗತ್ ಸಿಂಗ್, ಸುಖದೇವ್,ರಾಜಗುರು, ಸಾವಿತ್ರಿ ಬಾಯಿ ಪುಲೆಯವರ ಬಗ್ಗೆ ಹೇಳಬಾರದ ಎಂದು ಕೇಳಿದ್ದಾರೆ.

ಭೂ ಕೈಲಾಸ ತೆಗೆದು ನೆಹರು ಮಗನಿಗೆ ಬರೆದ ಪತ್ರ ಎಂಬ ಪಾಠ ಸೇರಿದ್ದಾರೆ, ಡಾ.ಹೆಡಗೆವಾರ್ ಬರೆದಿರುವ ಆದರ್ಶ ಪುರುಷರು ಪಾಠ ತೆಗದು ಉರುಸ್ ಗಳಲ್ಲಿ ಭಾವೈಕ್ಯತೆ ಎಂಬ ಪಾಠ ಸೇರಿಸಿದ್ದಾರೆ ಈ ಮೂಲಕ ಒಂದು ಧರ್ಮದ ಓಲೈಕೆ ಮಾಡಿದ್ದಾರೆ.
ಪಠ್ಯ ಪರಿಷ್ಕರಣೆ ಮಾಡುವ ಮುನ್ನ ಶಿಕ್ಷಣ ತಜ್ಙರ ಸಲಹೆ ಪಡೆದುಕೊಳ್ಳ ಬೇಕು ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ನಲ್ಲಿ ಕೂತವರೇ ಶಿಕ್ಷಣ ತಜ್ಙರಂತೆ ವರ್ತಿಸಿದ್ದಾರೆ.
ಸಿದ್ಧರಾಮಯ್ಯ ಟೀಮ್ ನಲ್ಲಿ ಶಿಕ್ಷಣ ತಜ್ಙರ ಬದಲಾಗಿ ಸಾಹಿತಿಗಳ ಹೆಸರಲ್ಲಿ ಎಡ ಪಂಕ್ತಿಯ ಸಿದ್ದಾಂತ ಒಪ್ಪರುವ ಎಡ ಪಂಕ್ತೀಯರು ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆ ಮಕ್ಕಳು ಏನು ಕೊಟ್ಟರೂ ಓದುತ್ತಾರೆ ಎಂಬ ಮನೋಭಾವನೆ ಯಿಂದ ಹಾಗು ರಾಜ್ಯದ ಜನರ ಮುಗ್ದತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸರ್ಕಾರದ ಕೆಲಸವನ್ನು ಜನರ ಮುಂದೆ ಇಡುತ್ತೇವೆ ಎಂದು ತಿಳಿಸಿದರು.
ವರದಿ – ವಿನಯ್ ಕುಮಾರ್ವಹೆಚ್.ಎಮ್
