
ಶಿವಮೊಗ್ಗ : ವಾಸವಿ ಪಬ್ಲಿಕ್ ಸ್ಕೂಲ್ ವತಿಯಿಂದ ಸೆ.12ರಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುವುದು.

ಈ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಾಸವಿ ಪಬ್ಲಿಕ್ ಸ್ಕೂಲ್ ನ ವಿಧ್ಯಾರ್ಥಿನಿ ಹಾಗು ವಾಸವಿ ಇಂಟರ್ಯಾಕ್ಟ್ ಕ್ಲಬ್ ನ ಅಧ್ಯಕ್ಷೆ ತನುಶ್ರಿ ಗಣೇಶ ಚತುರ್ಥಿಯ ಅಂಗವಾಗಿ ಕಳೆದ ಎಂಟು ವರ್ಷಗಳಿಂದ ವಾಸವಿ ಪಬ್ಲಿಕ್ ಶಾಲೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದೇವೆ.
ನಮ್ಮಲ್ಲಿ ಪಡೆದ ಗಣಪತಿ ವಿಗ್ರಹಗಳನ್ನು ವಿಸರ್ಜಿಸಲು ಶಾಲೆಯ ಆವರಣದಲ್ಲಿ ಕೃತಕ ಕೆರೆಯನ್ನು ನಿರ್ಮಿಸಿ ಕೊಡಲಾಗುವುದು ಈ ಮೂಲಕ ಪರಿಸರ ಸಂರಕ್ಷಣೆ ಹಾಗು ನದಿಯ ನೈರ್ಮಲ್ಯ ಕಾಪಾಡುವುದು ನಮ್ಮ ಧ್ಯೇಯವಾಗಿದೆ
ಸೆ.12ರಿಂದ ಸಾರ್ವಜನಿಕರು ನಮ್ಮ ವಾಸವಿ ಪಬ್ಲಿಕ್ ನಲ್ಲಿ ದೊರೆಯುವ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಖರೀದಿ ಮಾಡಬಹುದು ಎಂದರು.
ನಂತರ ಮಾತನಾಡಿದ ಶಾಲೆಯ ಕಾರ್ಯದರ್ಶಿ ಎಸ್.ಕೆ ಶೇಷಾಚಲರವರು ನಮ್ಮ ಶಾಲೆಯ ಸುತ್ತ ಮುತ್ತ 500ಕ್ಕೂ ಹೆಚ್ಚು ಮನೆಗಳಿಗೆ ವಿಧ್ಯಾರ್ಥಿಗಳು ಭೇಟಿ ಮಾಡಿ ಮನೆಯಲ್ಲಿ ಇಡಲಾಗುವ ಗಣಪತಿಗಳನ್ನು ಶಾಲೆಯಲ್ಲಿರುವ ಕೃತಕ ಕೆರೆಗಳಲ್ಲಿ ವಿಸರ್ಜನೆ ಮಾಡಲು ಮನವಿ ಮಾಡಿದ್ದಾರೆ.
ಈ ಬಾರಿ ವಿಶೇಷವಾಗಿ ನೂರು ಕುಟುಂಬಗಳು ಒಟ್ಟಾಗಿ ಒಮ್ಮೆಲೆ ನಾವು ವ್ಯವಸ್ಥೆ ಮಾಡುವ ಕೃತಕ ಕೆರೆಯಲ್ಲಿ ವಿಸರ್ಜನೆ ಮಾಡಲಿದ್ದಾರೆ.
ಗಣಪತಿಗಳನ್ನು ನದಿಯಲ್ಲಿ ವಿಸರ್ಜನೆ ಮಾಡುವುದರಿಂದ ನದಿಗೆ ಮಾರಕವಾಗುತ್ತದೆ
ನಮ್ಮ ಕೃತಕ ಕೆರೆಯಲ್ಲಿ ಸಾರ್ವಜನಿಕರು ಬಣ್ಣದ ಗಣಪತಿಗಳನ್ನು ಸಹ ವಿಸರ್ಜಿಸಬಹುದು.
ಮನೆಯಲ್ಲಿ ಇಟ್ಟಂತಹ ಗಣಪತಿಗಳನ್ನು ವಿಸರ್ಜನೆ ಮಾಡಲು ಆಗದೆ ಇರುವವರು ನಮ್ಮನ್ನು ಸಂಪರ್ಕಿಸದರೆ ನಮ್ಮ ವಿಧ್ಯಾರ್ಥಿಗಳು ಬಂದು ನಿಮ್ಮ ಪೂಜಾ ಪದ್ಧತಿಯ ನಂತರ ಗಣಪತಿ ತೆಗೆದುಕೊಂಡು ಬಂದು ಕೃತಕ ಕೆರೆಯಲ್ಲಿ ವಿಸರ್ಜನೆ ಮಾಡುತ್ತಾರೆ ಎಂದು ತಿಳಿಸಿದರು.
ಮಣ್ಣಿನ ಗಣಪತಿ ಖರೀದಿ ಮಾಡಲು ಹಾಗು ವಿಸರ್ಜನೆ ಮಾಡಲು 9916514066 ಸಂಖ್ಯೆಗೆ ಕರೆ ಮಾಡಲು ಕೋರಿದ್ದಾರೆ.
ವರದಿ – ವಿನಯ್ ಕುಮಾರ್ ಹೆಚ್.ಎಮ್