
ಸಮಾಜದಲ್ಲಿ ನಡೆಯುವ ಅಂಕುಡೊಂಕುಗಳನ್ನು ಓರೆ ಕೋರೆಗಳನ್ನು ಭ್ರಷ್ಟಾಚಾರವನ್ನು ಸಮಾಜಮುಖಿ ಕೆಲಸಗಳನ್ನು ಬರಹಗಳ ರೂಪದಲ್ಲಿ ಸಾರ್ವಜನಿಕರ ಮುಂದಿಟ್ಟು ತಮ್ಮ ವೈಯಕ್ತಿಕ ಜೀವನಕ್ಕೂ ಸಮಯ ನೀಡದೆ ಸಾರ್ವಜನಿಕ ಜೀವನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹಗಲು ರಾತ್ರಿ ಎನ್ನದೆ ಹೊತ್ತಲ್ಲದ ಹೊತ್ತಿನಲ್ಲಿ ಊಟ ತಿಂಡಿ ನಿದ್ದೆಗಳನ್ನು ಬಿಟ್ಟು ಸುದ್ದಿಗಳ ಬೆನ್ನು ಹತ್ತಿ ಸುದ್ದಿ ಸಂಗ್ರಹಿಸಿ ಅದನ್ನು ಬರೆದು ಸಂಬಂಧಪಟ್ಟ ಅಧಿಕಾರಿಗಳ, ಸರ್ಕಾರಗಳ ,ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಪತ್ರಕರ್ತರಿಗೆ ಇಂದು ಕೆಲವು ಸಂಘ ಸಂಸ್ಥೆಗಳು ಸಾರ್ವಜನಿಕರು ಸರ್ಕಾರ ಕರೆದು ಗೌರವಿಸಿ ಸನ್ಮಾನಿಸಿ ಅಭಿನಂದಿಸುತ್ತಿದ್ದಾರೆ.
ಅದೇ ರೀತಿ ಎಲ್ಲೇ ಹೋದರು ಯಾವುದೇ ಅಧಿಕಾರಿಗಳಾಗಲಿ, ರಾಜಕಾರಣಿಗಳಾಗಲಿ ಗೌರವ ಕೊಟ್ಟು ಮಾತನಾಡಿಸುತ್ತಾರೆ. ಇದು ಒಬ್ಬ ಪ್ರಾಮಾಣಿಕ ಪತ್ರಕರ್ತನಿಗೆ ಸಿಗುವ ಗೌರವ,
ಆದರೆ ಅದೇ ಪತ್ರಕರ್ತರಿಗೆ ಸರ್ಕಾರಿ ಸೌವಲತ್ತುಗಳನ್ನು ಅಕ್ರಮವಾಗಿ ಬಳಸಿಕೊಂಡು ಒತ್ತುವರಿ ಮಾಡಿಕೊಂಡು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತಮ್ಮಲ್ಲಿರುವ ಹಣಬಲ ತೋಳ್ಬಲವನ್ನು ಬಳಸಿಕೊಂಡು ಎಲ್ಲರನ್ನೂ ಕೊಂಡುಕೊಳ್ಳುತ್ತೇವೆ ಎನ್ನುವ ಅತಿಯಾದ ಆತ್ಮವಿಶ್ವಾಸದಿಂದ ಬೀಗುವ ಕೆಲವು ಸಮಾಜಘಾತಕ ಶಕ್ತಿಗಳು ಪತ್ರಕರ್ತರ ವಿರುದ್ಧ ತಮ್ಮ ಮೇಲೆ ಸುದ್ದಿ ಬರೆಯದಂತೆ ನ್ಯಾಯಾಲಯದ ಮೆಟ್ಟಿಲು ಹತ್ತುವುದು ಹಾಗೆ ಯಾವುದೇ ಸಾಕ್ಷಿಗಳು ಇಲ್ಲದಿದ್ದರೂ ಸುಮ್ಮನೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸುವುದು ಈ ಮೂಲಕ ಆ ಪತ್ರಕರ್ತರಿಗೆ ಹೆದರಿಸುವ ಪ್ರಯತ್ನ ನಡೆಸುವುದು ಹಾಗೆ ಕರೆ ಮಾಡಿ ಜೀವ ಬೆದರಿಕೆ ಕೊಲೆ ಬೆದರಿಕೆ ಹಾಕುವುದು ಬಾಡಿಗೆ ಗುಂಡಾಗಳನ್ನು ಇಟ್ಟುಕೊಂಡು ಫಾಲೋ ಮಾಡಿಸುವುದು ಮಾಡುತ್ತಿರುವುದು ಸುಸಂಸ್ಕೃತರ ಸಮಾಜದಲ್ಲಿ ಅಸಹ್ಯ ಹುಟ್ಟಿಸುವಂತಹ ಕೆಲಸ ತಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳಿ ಎಂದು ಪತ್ರಕರ್ತರು ತಮ್ಮ ಲೇಖನಿಯಲ್ಲಿ ಬರೆದರೆ ಆ ಪತ್ರಕರ್ತರನ್ನೇ ಎದುರಿಸುವ ಪ್ರಯತ್ನ ಮಾಡುವುದು ಎಷ್ಟು ಸರಿ..?! ಸುಳ್ಳು ದೂರುಗಳನ್ನು ನೀಡುವ ಮುನ್ನ ಎಚ್ಚರ ಇರಬೇಕು ಅಲ್ಲವೇ..?! ಸುಳ್ಳು ದೂರಿನ ಪರಿಣಾಮದ ಬಗ್ಗೆ ಅರಿವಿರಬೇಕು ಅಲ್ಲವೇ..?!
ಪ್ರತಿಯೊಬ್ಬ ಪತ್ರಕರ್ತನಿಗೂ ಅವನದೇ ಆದ ಶಕ್ತಿ ಇರುತ್ತದೆ ಒಬ್ಬ ಪತ್ರಕರ್ತ ಜಾತ್ಯತೀತವಾಗಿ ಪಕ್ಷಾತೀತವಾಗಿ ಬೆಳೆದು ನಿಂತಿರುತ್ತಾನೆ ಆತನಿಗೆ ಸಮಾಜದ ಎಲ್ಲಾ ಸಮುದಾಯಗಳು ಸಂಘಟನೆಗಳು, ರಾಜಕಾರಣಿಗಳು, ಅಧಿಕಾರಿಗಳ ಬೆಂಬಲವಿರುತ್ತದೆ. ಏಕೆಂದರೆ ಯಾರು ಏನು ಎನ್ನುವ ಅರಿವು ರಾಜಕಾರಣಿಗಳಿಗೆ ,ಅಧಿಕಾರಿಗಳಿಗೆ, ಗೊತ್ತಿರುತ್ತದೆ.
ಪೊಲೀಸ್ ಇಲಾಖೆಯಲ್ಲಿ ಕೂಡ ದಕ್ಷ ಪ್ರಾಮಾಣಿಕ ನಿಷ್ಠಾವಂತ ಅಧಿಕಾರಿಗಳು ಇದ್ದಾರೆ ಅವರಿಗೆ ದೂರು ಕೊಟ್ಟವರ ಹಣೆಬರಹ ಏನು ದೂರು ಯಾರ ಮೇಲೆ ನೀಡಿದ್ದಾರೆ ಅವರು ಹೇಗೆ ಎನ್ನುವ ಅರಿವು ಇರುತ್ತದೆ. ಆದರೆ ಒಂದೊಂದು ಸಂದರ್ಭದಲ್ಲಿ ಸಮಯದ ಗೊಂಬೆಗಳಾಗಿ ಅನಿವಾರ್ಯವಾಗಿ ದೂರು ಸ್ವೀಕರಿಸುವ ಅನಿವಾರ್ಯತೆ ಸೃಷ್ಟಿ ಆಗಿರುತ್ತದೆ ಆದರೆ ಇದು ತಪ್ಪು ಇದು ಸುಳ್ಳು ಎನ್ನುವ ಅರಿವು ಕೂಡ ದೂರು ಕೊಟ್ಟವನಿಗೆ ಹೇಗೆ ಗೊತ್ತಿರುತ್ತದೆಯೋ ದೂರು ತೆಗೆದುಕೊಂಡ ಪೊಲೀಸ್ ಇಲಾಖೆಯ ಅಧಿಕಾರಿಗೂ ಕೂಡ ಗೊತ್ತಿರುತ್ತದೆ.
ಪತ್ರಿಕಾ ಪ್ರಪಂಚದಲ್ಲಿ ಇವೆಲ್ಲಾ ಮಾಮೂಲು ನೈಜ ಬರಹಗಾರರಿಗೆ ಹೆದರಿಕೆ ಬೆದರಿಕೆ ಗಳಲ್ಲ ಸಾಮಾನ್ಯ ಸಂಗತಿಗಳು ಒಬ್ಬ ಪತ್ರಕರ್ತನಿಗೆ ಹೆದರಿಕೆ ಬೆದರಿಕೆ ಕೇಸ್ ಗಳು ದಾಖಲಾಗುತ್ತಿದ್ದಾವೆ ಎಂದರೆ ಆತನ ಬರಹ ತಲುಪುತ್ತಿದೆ ಎಂದು ಅರ್ಥ.
ಒಂದಲ್ಲ ಒಂದು ದಿನ ಮಾಡಿದ ತಪ್ಪಿಗೆ ಪಶ್ಚಾತಾಪ ಪಡುವ ಅನಿವಾರ್ಯತೆ ಸುಳ್ಳು ಮೊಕದ್ದಮೆಗಳನ್ನು ಸೃಷ್ಟಿಸುವವರಿಗೆ ಬರುತ್ತದೆ ನೆನಪಿರಲಿ ತಾವೇ ಗಾಜಿನ ಮನೆಯಲ್ಲಿ ಇದ್ದು ಬೇರೆಯವರಿಗೆ ಕಲ್ಲು ಹೊಡೆದರೆ ತಮ್ಮ ಸ್ಥಿತಿ ಏನಾಗುತ್ತದೆ ಎನ್ನುವ ಅರಿವಿರಲಿ ಒಬ್ಬ ಪತ್ರಕರ್ತ, ಒಬ್ಬ ವಕೀಲ, ಒಬ್ಬ ಪೊಲೀಸ್, ವಿರುದ್ಧ ಹೋಗುವ ಮುನ್ನ ಸಾಕಷ್ಟು ಸಲ ಚಿಂತಿಸಬೇಕು ಏಕೆಂದರೆ ಸಮಾಜದಲ್ಲಿ ಈ ಮೂರು ವ್ಯಕ್ತಿಗಳು ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುತ್ತಾರೆ.
ಅವರಿಗೆ ವಿನಾಕಾರಣ ತೊಂದರೆ ನೀಡಲು ಬಂದರೆ ತೊಂದರೆ ನೀಡಲು ಬಂದವರ ಇತಿಹಾಸ ಹಾಗೂ ಅವರು ಮಾಡಿಟ್ಟಿರುವ , ಮಾಡುತ್ತಿರುವ ಅಕ್ರಮಗಳ ಬಗ್ಗೆ ಸಾಲು ಸಾಲಾಗಿ ಒಂದೊಂದೇ ಹೊರಬರುತ್ತವೆ ನೆನಪಿರಲಿ,
ಇದನ್ನು ಯಾರಿಗೂ ಹೆದರಿಸುವುದಕ್ಕೋಸ್ಕರವನಾಗಲಿ ಬೆದರಿಸೋದುಕ್ಕೋಸ್ಕರನಾಗಲಿ ಬರೆಯುತ್ತಿರುವುದಲ್ಲ ಬದಲಾಗಿ ನಾವು ಇನ್ನೊಬ್ಬರ ಬಗ್ಗೆ ಮಾತನಾಡುವಾಗ ದೂರು ನೀಡುವಾಗ ನಾವೆಷ್ಟು ಸರಿ ಇದ್ದೇವೆ ಎನ್ನುವ ಅರಿವು ಇರಬೇಕು ಎನ್ನುವುದಕ್ಕಾಗಿ ಅಷ್ಟೇ. ಯಾರನ್ನು ಹೆದರಿಸಿ ಬೆದರಿಸಿ ಸರಿ ಮಾಡುತ್ತೇವೆ ಎಂದರೆ ಅದು ಆಗದ ಮಾತು ಅವರಿಗೂ ಕೂಡ ಅವರದೇ ಆದ ಸಾಮರ್ಥ್ಯವಿರುತ್ತದೆ ನೆನಪಿರಲಿ…
ಇದೆಲ್ಲಾ ಏಕೆ ಯಾವ ವಿಷಯಕ್ಕೆ ಬರೆದಿರುವಂತಹ ಮನಸ್ಸಿನ ಅನಿಸಿಕೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ವಿಸ್ತಾರವಾಗಿ ಬರೆಯುತ್ತೇನೆ..
ರಘುರಾಜ್ ಹೆಚ್.ಕೆ.9449553305.