
ಶಿವಮೊಗ್ಗ : ಶಿವಮೊಗ್ಗ ತಾಲ್ಲೂಕಿನ ತಹಶೀಲ್ದಾರ್ ಎನ್.ಜೆ ನಾಗರಾಜ್ ವಿರುದ್ಧ ನಡೆದ ಲೋಕಾಯುಕ್ತ ರೇಡ್ ನಲ್ಲಿ ಅಕ್ರಮ ಆಸ್ತಿ ಸಂಪಾದನೆ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಲೋಕಾಯುಕ್ತ ವರದಿ ಆಧಾರದ ಶಿವಮೊಗ್ಗ ತಾಲೂಕಿನ ತಹಶಿಲ್ದಾರ್ ಎನ್.ಜೆ ನಾಗರಾಜ್ ರವರನ್ನು ಅಮಾನತ್ತು ಪಡಿಸಿದೆ.
ಪ್ರಕರಣದ ಹಿನ್ನಲೆ
ಎನ್ ಜೆ ನಾಗರಾಜ್ ಈಹಿಂದೆ ತಹಶೀಲ್ದಾರ್ ಗ್ರೇಡ್- 1ಆಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಆ ಸಮಯದಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆಯಾಗಿದೆ ಎಂಬ ಮಾಹಿತಿ ಆಧಾರ ಮೇರೆಗೆ ಇವರ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ದಿನಾಂಕ 23-4-2023 ಘನ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ದಾವಣಗೆರೆ ಇವರಿಂದ ಅಗತ್ಯವಾದ ಶೋಧನಾ ವಾರೆಂಟ್ ಪಡೆದು ದಿನಾಂಕ 24-4-2023ರಂದು ಶಿಕಾರಿಪುರದ ಚನ್ನಕೇಶವ ನಗರದಲ್ಲಿರುವ ನಾಗರಾಜ್ ರವರು ವಾಸವಿರುವ ಮನೆ ಆಗ ಕಾರ್ಯನಿರ್ವಹಿಸುತ್ತಿದ್ದ ಚಿತ್ರದುರ್ಗದ ಕಛೇರಿ ಹಾಗು ಅವರಿಗೆ ವಾಸ ಮಾಡಲು ನೀಡಿದ್ದ ವಸತಿ ಗೃಹದ ಮೇಲೆ ದಾಳಿ ನಡೆಸಿ ಚರ ಸ್ಥಿರಾಸ್ಥಿ ಸ್ವತ್ತು ಗಳು ಅಗತ್ಯಕ್ಕಿಂತ ಅಧಿಕ ಆಸ್ತಿಗಳಿಕೆ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಮೇಲ್ನೋಟಕ್ಕೆ ಸಾಭೀತು ಆಗಿರುವುದರಿಂದ ಆಪಾಧಿತರನ್ನು ಹಸ್ತಕ್ಷೇಪ ಸಾಕ್ಷಿ ನಾಶ ಮಾಡಬಹುದು ಎನ್ನುವ ಕಾರಣಕ್ಕಾಗಿ ಇವರನ್ನು ಸದರಿ ಸೇವೆಯಿಂದ ಅಮಾನತ್ತು ಗೊಳಿಸಿ ಆದೇಶ ನೀಡಲಾಗಿದೆ.
ಸದ್ಯ ಈಗ ಎನ್.ಜೆ ನಾಗರಾಜ್ ರವರು ಸರ್ಕಾರದ ಆದೇಶವನ್ನು ತಡೆಹಿಡಿಯಲು ಹೈಕೋರ್ಟ್ ಮೆಟ್ಟಿಲು ಏರಲಿದ್ದಾರೆ. ಹೈಕೋರ್ಟ್ ನಿಂದ ಯಾವ ಆದೇಶ ಬರಲಿದೆ ಎಂದು ಕಾದು ನೋಡಬೇಕಿದೆ.