Tuesday, April 29, 2025
Google search engine
Homeರಾಜ್ಯ‘ಮೈ ಹೀರೋ’ ಮೂರನೇ ಹಂತದ ಚಿತ್ರೀಕರಣ ಮುಕ್ತಾಯ ..!

‘ಮೈ ಹೀರೋ’ ಮೂರನೇ ಹಂತದ ಚಿತ್ರೀಕರಣ ಮುಕ್ತಾಯ ..!


ಬೆಂಗಳೂರು : ಎ.ವ್ಹಿ ಸ್ಟುಡಿಯೋಸ್ ಅಡಿಯಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಅವಿನಾಶ್ ವಿಜಯಕುಮಾರ್ ನಿರ್ಮಿಸುತ್ತಿರುವ ಬಹುಭಾಷೆಗಳ ‘ಮೈ ಹೀರೋ ಚಲನಚಿತ್ರದ ಮೂರನೇ ಹಂತದ ಚಿತ್ರೀಕರಣ ಅಮೇರಿಕಾದಲ್ಲಿ ಮುಕ್ತಾಯಗೊಂಡಿತು. ಸ್ಯಾನ್ ಪ್ರಾನ್ಸಿಸ್ಕೋ, ಲಾಸ್ ಏಂಜಲಿಸ್, ಸ್ಯಾನ್ ಹೋಸೆ ,ಬಿಗ್‌ಸರ್ ಇನ್ನೂ ಮುಂತಾದ ಸ್ಥಳಗಳಲ್ಲಿ ಸುಮಾರು ಹದಿನೈದು ದಿನಗಳ ಕಾಲ “ಮೈ ಹೀರೋ” ಸಿನಿಮಾದ ಚಿತ್ರೀಕರಣ ಚಿತ್ರತಂಡ ಯಶಸ್ವಿಗೊಳಿಸಿದ್ದಾರೆ.
ಮೊದಲ ಹಂತದಲ್ಲಿ ಮೂಡಗೆರೆ, ಚಿಕ್ಕಮಗಳೂರು, ದೇವರಮನೆ ಬೆಟ್ಟಗುಡ್ಡ ಸೌಂದರ್ಯದ ನಡುವೆ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿದ್ದ ತಂಡ ಚಿತ್ರಕತೆಯ ಸನ್ನಿವೇಶಕ್ಕೆ ಸಂಬಂಧಪಟ್ಟ ದೃಶ್ಯಗಳಿಗಾಗಿ ಮಧ್ಯಪ್ರದೇಶದಲ್ಲಿರುವ ಮಹೇಶ್ವರ್, ಇಂದೋರ್, ಮಾಂಡೋ, ಉಜೈನ್, ಪಾತಾಲ್ ಪಾನಿ, ಹಾಗೂ ಹಲವಾರು ಐತಿಹಾಸಿಕ ಸ್ಥಳಗಳಲ್ಲಿ ಸುಮಾರು ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಸಿತ್ತು.

ನಾಲ್ಕು ರಾಷ್ಟೀಯ ಪ್ರಶಸ್ತಿ ವಿಜೇತರಾದ ಹಿರಿಯ ನಟ ದತ್ತಣ್ಣ, ಕಿರುತೆರೆಯಲ್ಲಿ ಜನರ ಮನಸ್ಸನ್ನು ಗೆದ್ದಿರುವ ಅಂಕಿತ ಅಮರ್ ಮತ್ತು ಬಾಲಿವುಡ್‌ನ ಖ್ಯಾತ ಹಾಸ್ಯ ನಟ ಕ್ಷಿತೀಜ್ ಪವಾರ್ , ಖ್ಯಾತ ಬಹುಭಾಷಾ ನಟರಾದ ಪ್ರಕಾಶ್ ಬೆಳವಾಡಿ , ನಿರಂಜನ ದೇಶಪಾಂಡೆ, ಕಾಂತಾರ ಖ್ಯಾತಿಯ ನವೀನ್ ಬೋಂಡಲ್, ವೇದ ಖ್ಯಾತಿಯ ತನುಜ, ಡ್ರಾಮಾ ಜ್ಯೂನಿರ‍್ಸ್ ನ ವೇದಿಕ ಕುಶಾಲ, ಡಿಜಿಲಾಲಿ ರೆಜ್-ಕಲ್ಹ, ಸಿನೇಮಾ ನಿರ್ದೇಶಕರಾದ ಹರಿಹರನ್ ಬಿಪಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮನ ಗೆದ್ದಿರುವ ಸಿದ್ದು ಮಂಡ್ಯ ‘ಮೈ ಹೀರೋ ’ ಚಿತ್ರಕ್ಕೆ ಕೈ ಜೋಡಿಸಿ ಹೊಸಹುರುಪು ತಂದಿದ್ದಾರೆ. ಈ ಚಿತ್ರದಲ್ಲಿ ಎರಡು ಕನ್ನಡ, ಒಂದು ಹಿಂದಿ ಹಾಗೂ ಒಂದು ಇಂಗ್ಲೀಷ್ ಹಾಡುಗಳು ಇವೆ. ಇಂಗ್ಲೀಷ್ ಹಾಡುಗಳನ್ನು ಯುಎಸ್‌ನ ಖ್ಯಾತ ಸಂಗೀತ ನಿರ್ದೇಶಕರೆ ಸಂಯೋಜಿಸಿದ್ದಾರೆ. ಹಾಲಿವುಡ್‌ನ ಖ್ಯಾತ ತಂತ್ರಜ್ಞರು ಕೂಡ ಕೆಲಸ ಮಾಡಿರುವುದು , ಹಾಲಿವುಡ್‌ನ “ರನ್‌ಅವೇಟ್ರೈನ್” ಚಿತ್ರದಲ್ಲಿನ ಪಾತ್ರಕ್ಕಾಗಿ ಎರಿಕ್ ರಾಬರ್ಟ್ಸ್ರವರು ಅಕಾಡೆಮಿ ಪ್ರಶಸ್ತಿ ಮತ್ತು“ಸ್ಟಾರ್ ೮೦” ಮತ್ತು“ಕಿಂಗ್‌ಆಫ್ ದಿ ಜಿಪ್ಸಿ” ಚಿತ್ರದಲ್ಲಿನ ಪಾತ್ರಕ್ಕಾಗಿ ಮೂರು ಬಾರಿಗೋಲ್ಡನ್‌ಗ್ಲೋಬ್ ನಾಮಿನಿಯಾಗಿ ಆಯ್ಕೆಯಾಗಿದ್ದ ಖ್ಯಾತ ನಟ “ಎರಿಕ್ ರಾಬರ್ಟ್ಸ್” ಹಾಗೂ ಹಾಲಿವುಡ್‌ನ ಮತ್ತಷ್ಟು ಕಲಾವಿದರು ಅಭಿನಯಿಸಿರುವುದು “ಮೈ ಹೀರೋ” ಚಿತ್ರದ ವಿಶೇಷತೆ. ಈ ಚಿತ್ರದ ತಾಂತ್ರಿಕ ವರ್ಗದಲ್ಲಿ ಗಗನ್ ಬಧಾರಿಯಾ ಸಂಗೀತ , ವೀನಸ್ ನಾಗರಾಜ ಮೂರ್ತಿ ಛಾಯಾಗ್ರಹಣ, ಕಥೆ, ಚಿತ್ರಕಥೆಯನ್ನು ನಿರ್ದೇಶಕ ಹಾಗೂ ನಿರ್ಮಾಪಕ ಅವಿನಾಶ್ ವಿಜಯಕುಮಾರ್ ಹಾಗೂ ಮುತ್ತುರಾಜ್ ಟಿ, ಸಂಭಾಷಣೆ ಬರೆದಿದ್ದಾರೆ , ಪಿ ಆರ್ ಓ ಸುಧೀಂದ್ರ ವೆಂಕಟೇಶ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಸಂಕಲನ ಮುತ್ತುರಾಜ್ ಟಿ, ನಿರ್ಮಾಣ ನಿರ್ವಹಣೆ ಹರಿಹರನ್ ಬಿ.ಪಿ. ಮೊದಲಾದವರು ತಂತ್ರಜ್ಞರಲ್ಲದೆ ಹಾಲಿವುಡ್‌ನ ತಂತ್ರಜ್ಞರು ಸಹ ಚಿತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ವರದಿ:
ಡಾ.ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...