
ಶಿವಮೊಗ್ಗ : ಅವಳಿ ಪಾತಕಿಗಳಾದ ನಟೋರಿಯಸ್ ಕ್ರಿಮಿನಲ್ ಹಿನ್ನಲೆ ವುಳ್ಳ ನವಲೆ ಆನಂದ ಮತ್ತು ಕೊಕ್ರೆ ಶಾಮ್ ರ ಸಹಚರ ಎನ್ನಲಾಗುವ ಹೊಸನಗರ ತಾಲೂಕಿನ ಕಡೂಸೂರು ವಾಸಿಯಾದ ನವೀನ 38 ವರ್ಷ ಈತನಿಗೆ ಎರಡು ದಿನದ ಹಿಂದೆ ಕೋಣಂದೂರಿನ ಬಿಲ್ಲೇಶ್ವರ ಮತ್ತು ಶಂಕ್ರಳ್ಳಿ ಸಮೀಪ ಎಂಪಿಎಂ ಮರದ ತುಂಡುಗಳನ್ನು ತುಂಬುತ್ತಿದ್ದ ಲಾರಿ ಇನ್ನಷ್ಟು ಮರ ತುಂಬುವ ಆತುರದಲ್ಲಿ ಮುಂದೆ ಹೋದಾಗ ಯಾವುದೇ ಮುನ್ಸೂಚನೆ ಇಲ್ಲದೆ ನಿಲ್ಲಿಸಿದಾಗ ಹಿಂದೆ ಸ್ಕೂಟಿಯಲ್ಲಿ ಬರುತ್ತಿದ್ದ ನವೀನ್ ಬ್ರೇಕ್ ಹಾಕಿದಾಗ ಮರದ ತುಂಡು ತಾಗಿ ಕೆಳಗೆ ಬಿದ್ದಿದ್ದಾನೆ ಎನ್ನುವುದು ಸ್ಥಳೀಯರ ಹೇಳಿಕೆ ಹೋಗುತ್ತಿದ್ದ ಲಾರಿ ತನ್ನ ಆಚಾತುರ್ಯದಿಂದ ರಸ್ತೆ ಮಧ್ಯೆ ಈತನಿಗೆ ಆಕ್ಸಿಡೆಂಟ್ ಆಗಿದೆ ಎನ್ನುವುದು ಪೊಲೀಸರಿಗೆ ನವೀನ್ ಕಡೆಯವರು ನೀಡಿದ ದೂರು.
ಈ ದೂರಿನ ಮೇಲೆ ತನಿಖೆ ಕೈಗೊಂಡ ದಕ್ಷ ಪ್ರಾಮಾಣಿಕ ಅಧಿಕಾರಿಯಾದ ಪ್ರವೀಣ್ ಅವರು ಒಂದಷ್ಟು ಮಾಹಿತಿ ಕಲೆ ಹಾಕುತ್ತಿದ್ದು ಪ್ರಾಥಮಿಕ ಹಂತದಲ್ಲಿ ಈತ ರೌಡಿಶೀಟರ್ ಆಗಿದ್ದು ಈಗ ನಾಲ್ಕು ವರ್ಷಗಳ ಹಿಂದಿನಿಂದ ಯಾವುದೇ ಪ್ರಕರಣಗಳು ಈತನ ಮೇಲೆ ಇಲ್ಲ ನೆಮ್ಮದಿಯ ಜೀವನ ನಡೆಸಿಕೊಂಡು ತಾಯಿ ಜೊತೆ ಇದ್ದ ಆದರೆ ಈತನಿಗೆ ಈ ಆಕ್ಸಿಡೆಂಟ್ ಆಗಿರುವ ರೀತಿಯನ್ನು ಮೇಲ್ನೋಟಕ್ಕೆ ನೋಡಿದಾಗ ಇದು ಈತನ ಮೇಲೆ ಈತನ ಎದುರಾಳಿ ಗ್ಯಾಂಗ್ ಕೊಲೆ ಮಾಡಲು ಪ್ರಯತ್ನಿಸಿರಬಹುದಾ ಎನ್ನುವ ಅನುಮಾನ ಹುಟ್ಟಿಸಿದೆ.
ಏಕೆಂದರೆ ಈತ ರೌಡಿಸಂ ಬಿಟ್ಟಿರಬಹುದು ಆದರೆ ಹಳೆ ದ್ವೇಷ ಇಟ್ಟುಕೊಂಡು ಹಲ್ಲೆ ನಡೆಸಲು ಪ್ರಯತ್ನಿಸರಬಹುದು ಎನ್ನುವ ಅನುಮಾನ ಕಾಡುತ್ತಿದೆ.
ಭಯಾನಕ ರೀತಿಯಲ್ಲಿ ಈತನ ಕತ್ತು ಸೀಳಿಕೊಂಡು ಹೋಗಿರುವುದೇ ಇದಕ್ಕೆ ಪ್ರಮುಖ ಕಾರಣ ವೈದ್ಯರ ಪ್ರಕಾರ ಈತನಿಗೆ ಮುಂದೆ ಧ್ವನಿ ಬರುವುದೇ ಕಷ್ಟ ಇನ್ನೆರಡು ಮೂರು ದಿನದಲ್ಲಿ ಈತ ಬರವಣಿಗೆಯ ಮೂಲಕ ಏನಾದರೂ ಮಾಹಿತಿ ನೀಡಿದರೆ ಪೊಲೀಸರಿಗೆ ಸ್ಪಷ್ಟವಾಗಿ ಈ ಪ್ರಕರಣದ ಹಿನ್ನೆಲೆ ಗೊತ್ತಾಗುತ್ತದೆ.
ಧ್ವನಿ ಪೆಟ್ಟಿಗೆಯ ಒಡೆದು ಹೋಗಿರಲು ಕಾರಣ ಏನಿರಬಹುದು..?
ಲಾರಿಯ ಹಿಂಬದಿಯ ಜೈನಿನ ಕೊಂಡಿ ಈತನ ಕೊರಳಿಗೆ ಸಿಕ್ಕಿರುವುದರಿಂದ ಈ ರೀತಿ ಆಗಲು ಕಾರಣ ಎನ್ನುತ್ತಾರೆ ವೈದ್ಯರು.
ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಾರಿಯ ಡ್ರೈವರ್ ಕುಮಾರ್ ಧಾರವಾಡದ ವಾಸಿ ಹಾಗೂ ಕಾಂತರಾಜ್ ಹಾಸನದ ವಾಸಿ ಕಂಟ್ರಾಕ್ಟರ್ ಇವರನ್ನು ಪೊಲೀಸರು ಬಂಧಿಸಿ ಕೇಸ್ ದಾಖಲಿಸಿದ್ದಾರೆ.
ಆದರೆ ಕುತೂಹಲ ಕೆರಳಿಸಿರುವ ಈ ಪ್ರಕರಣ ಸ್ಪಷ್ಟವಾಗಿ ಆಕ್ಸಿಡೆಂಟ್ ಅ ಅಥವಾ ಹಲ್ಲೆ ನಾ ಎಂದು ಗೊತ್ತಾಗಬೇಕಾದರೆ ನವೀನ್ ಮಾಹಿತಿಯ ಮೇರೆಗೆ ಹಾಗೂ ಪೊಲೀಸರ ತನಿಖೆಯ ಮೇರೆಗೆ ಎಲ್ಲವೂ ಸ್ಪಷ್ಟವಾಗಿ ತಿಳಿಯಲಿದೆ…
ರಘುರಾಜ್ ಹೆಚ್.ಕೆ.9449553305.
..