
ಶಿವಮೊಗ್ಗ: ರಾಗಿಗುಡ್ಡ ಶಾಂತಿನಗರ ಗಲಭೆ ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬನಾಗಿದ್ದ ರೋಹನ್ ರಾವ್ ಆಲಿಯಾಸ್ ರಾಯ್ ನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗಲಭೆಯಲ್ಲಿ ತೀವ್ರತರದ ಗಾಯವಾಗಿದ್ದು ನಗರದ ಮೇಗನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಹನ್ ನನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಪೊಲೀಸ್ ಇಲಾಖೆ 143.144.148.323.324.307.504.506 r/W 149 IPC ಸೆಕ್ಷನ್ ಹಾಕಿ ದೂರು ದಾಖಲಿಸಿತ್ತು.
ಘನ ನ್ಯಾಯಾಲಯ ವಿಚಾರಣೆ ನಡೆಸಿ ಗುಲ್ಬರ್ಗ ಜೈಲಿಗೆ ಕಳುಹಿಸಿದೆ.
ಇದೇ ತಿಂಗಳ 19ರಂದು ಮುಂದಿನ ವಿಚಾರಣೆ ನಡೆಯಲಿದೆ.