Wednesday, April 30, 2025
Google search engine
Homeಶಿವಮೊಗ್ಗPolice news : ಅಭಯ್ ಗೆ "ಭಯ" ಹುಟ್ಟಿಸಿದ ಪೊಲೀಸ್ ಇಲಾಖೆ.? ಕಾನೂನು ಸುವ್ಯವಸ್ಥೆಯಲ್ಲಿ "ಕೈ"...

Police news : ಅಭಯ್ ಗೆ “ಭಯ” ಹುಟ್ಟಿಸಿದ ಪೊಲೀಸ್ ಇಲಾಖೆ.? ಕಾನೂನು ಸುವ್ಯವಸ್ಥೆಯಲ್ಲಿ “ಕೈ” ಹಸ್ತಕ್ಷೇಪ..? ಮೌನ ಮುರಿದ ಬಿಜೆಪಿ..!

ಶಿವಮೊಗ್ಗ: ರಾಗಿಗುಡ್ಡ ಶಾಂತಿನಗರ ಗಲಭೆ ಪ್ರಕರಣದಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಸೇರಿದಂತೆ ಮೂರು ಜನ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳನ್ನು ಕರ್ತವ್ಯ ಲೋಪದಡಿ ಅಮಾನತುಗೊಳಿಸಲಾಗಿದೆ.

ಯಾಕೆ ಈ ಶಿಕ್ಷೆ..?

ಅಭಯ್ ಪ್ರಕಾಶ್ ಪೊಲೀಸ್ ಇಲಾಖೆಯಲ್ಲಿರುವ ಕೆಲವೇ ಕೆಲವು ದಕ್ಷ ಅಧಿಕಾರಿಗಳಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು ಏಕೆಂದರೆ ಹಲವು ಪ್ರಕರಣಗಳಲ್ಲಿ ತಮ್ಮ ಜಾಣ್ಮೆ ಬುದ್ಧಿವಂತಿಕೆ ಸಂಯಮ ಬಳಸಿಕೊಂಡು ತಮ್ಮಲ್ಲಿರುವ ಅಗಾಧವಾದ ತಂತ್ರಜ್ಞಾನವನ್ನು ಬಳಸಿಕೊಂಡು ಆರೋಪಿಗಳನ್ನು ಹಿಡಿದಿದ್ದಾರೆ. ಕೇವಲ ಠಾಣೆಯಲ್ಲಿ ಕೂತು ಕೆಲಸ ಮಾಡದೆ ಹಿರಿಯ ಅಧಿಕಾರಿಗಳು ವಹಿಸಿದ ಕೆಲಸವನ್ನು ಸಮರ್ಪಕವಾಗಿ ಮಾಡುವ ಕೆಲವೇ ಕೆಲವು ಅಧಿಕಾರಿಗಳಲ್ಲಿ ಅಭಯ್ ಒಬ್ಬರು ಅಭಯ್ ಮೇಲು ಸಾಕಷ್ಟು ಆರೋಪಗಳಿವೆ ಆದರೆ ಆರೋಪ ಬಂದ ಮಾತ್ರಕ್ಕೆ ಅವೆಲ್ಲವೂ ಸತ್ಯವಲ್ಲ ಅಭಯ್ ಇಲಾಖೆಗೆ ಒಂದು ಆಸ್ತಿ ಎನ್ನುವುದು ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ.

ಹಲವು ಕ್ಲಿಷ್ಟಕರ ಪ್ರಕರಣಗಳನ್ನು ಬೆನ್ನತ್ತಿ ಹೋಗಿ ಹಿಡಿಯುವಲ್ಲಿ ಅಭಯ್ ಪ್ರಕಾಶ್ ಯಶಸ್ವಿಯಾಗಿದ್ದಾರೆ. ಗಾಂಜಾದ ಅಮಲಿನಲ್ಲಿ ತೇಲಾಡುತ್ತಿದ್ದ ಕೆಲವು ಕಿಡಿಗೇಡಿಗಳನ್ನು ಹಿಡಿದು ಹೆಡೆಮುರಿ ಕಟ್ಟುವಲ್ಲು ಅಭಯ್ ಯಶಸ್ವಿಯಾಗಿದ್ದಾರೆ.

ಸುಬ್ಬಯ್ಯ ಕಾಲೇಜಿನ ವಿದ್ಯಾರ್ಥಿಗಳ ಬಂಧನ :

ನಗರದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮನೆಯಲ್ಲೇ ಗಾಂಜಾ ಬೆಳೆಸುತ್ತಿದ್ದು ಸಾಕಷ್ಟು ವರ್ಷಗಳಿಂದ ಈ ಪ್ರಕ್ರಿಯೆ ನಡೆದುಕೊಂಡು ಬಂದಿತ್ತು ಇವರ ಪೂರ್ವ ತಯಾರಿ ಹೇಗಿತ್ತು ಎಂದರೆ ಯಾರೂ ಕೂಡ ಇವರ ಮೇಲೆ ಅನುಮಾನ ಪಡುವಂತಿರಲಿಲ್ಲ ಅಂತ ಸಮಯದಲ್ಲಿ ಅಭಯ್ ಯಾವುದೇ ಒತ್ತಡಕ್ಕೂ ಮಣೆಯದೆ ಆ ಪ್ರಕರಣವನ್ನು ಬೆನ್ನತ್ತಿ ವಿದ್ಯಾರ್ಥಿಗಳನ್ನು ಸೆರೆಹಿಡಿದಿದ್ದರು ಹಾಗೂ ನ್ಯಾಯಾಂಗ ಬಂಧನಕ್ಕೂ ಒಪ್ಪಿಸಿದ್ದರು. ಇದಕ್ಕೆ ಡಿವೈಎಸ್ಪಿ ಸುರೇಶ್ ಎಸ್‌ಪಿ ಮಿಥುನ್ ಕುಮಾರ್ ಅವರು ಸಾಥ್ ನೀಡಿದ್ದರು.

ರಾಗಿಗುಡ್ಡದ ಪ್ರಕರಣಕ್ಕೆ ಬರೋಣ..!

ರಾಗಿಗುಡ್ಡ ಶಾಂತಿನಗರದಲ್ಲಿ ಕಳೆದ ಒಂದನೇ ತಾರೀಕು ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟವನ್ನು ನಡೆಸಿದರು. ಹಾಗೆ ಮುಂದುವರೆದು ಒಂದಷ್ಟು ಯುವಕರ ಮೇಲೆ ಹಲ್ಲೆಗಳನ್ನು ಮಾಡಿದ್ದರು ಹಾಗೆ ಪೊಲೀಸರನ್ನು ಬಿಟ್ಟಿಲ್ಲ ಅವರ ಮೇಲೂ ಕೂಡ ಹಲ್ಲೆ ನಡೆಸಿದರು . ಈ ಸಮಯದಲ್ಲಿ ಸಹಜವಾಗಿ ಯಾರೇ ಅಧಿಕಾರಿಗಳಿದ್ದರೂ ಕೂಡ ಏನು ಮಾಡಬೇಕು ಆ ಕೆಲಸ ಮಾಡುತ್ತಾರೆ ಅದೇ ಕೆಲಸವನ್ನು ಅಭಯ ಪ್ರಕಾಶ್ ಹಾಗೂ ಸಿಬ್ಬಂದಿಗಳು ಮಾಡಿದ್ದಾರೆ. ಕಾನೂನನ್ನು ಕೈಗೆತ್ತಿಕೊಂಡು ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸುವ ಕೆಲಸವನ್ನು ಮಾಡುತ್ತಿರುವವರಿಗೆ ಲಾಠಿ ರುಚಿ ತೋರಿಸಿದರು ಇದು ತಪ್ಪಾಯ್ತಾ..? ಅಥವಾ ಎಲ್ಲವನ್ನೂ ನೋಡಿಕೊಂಡು ಮೌನವಾಗಿ ಹೊಡೆತ ತಿಂದುಕೊಂಡು ಇರಬೇಕಾಗಿತ್ತಾ..? ಅಥವಾ ಗಲಾಟೆ ಮಾಡಿದ ಸಮುದಾಯದವರನ್ನು ಬಿಟ್ಟು ಗಲಾಟೆ ಮಾಡದೆ ಇರುವ ಸಮುದಾಯದವರನ್ನು ಬಂಧಿಸ ಬೇಕಾಗಿತ್ತಾ ..?ಅಥವಾ ಅವರ ಮೇಲೆ ಲಾಠಿ ಪ್ರಹಾರ ನಡೆಸಬೇಕಾಗಿತ್ತಾ..? ಹೀಗೆ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ರಾಜಕೀಯದ ಮಧ್ಯ ಪ್ರವೇಶ ಎಷ್ಟು ಸರಿ..?

ರಾಜಕೀಯ ಪಕ್ಷಗಳು ಈಗ ಎಲ್ಲ ಕಡೆ ತಮ್ಮ ಅಧಿಕಾರ ಪ್ರಭಾವವನ್ನು ಬಳಸಿಕೊಂಡು ಪೊಲೀಸ್ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡವನ್ನು ತರುತ್ತಿದ್ದಾರೆ ಇದು ಎಷ್ಟರಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆ ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳನ್ನು ಅವರಷ್ಟಕ್ಕೆ ಅವರಿಗೆ ಕೆಲಸ ಮಾಡಲು ಬಿಡಿ ಅವರ ಮೇಲೆ ವಿನಾಕಾರಣ ಒತ್ತಡ ತಂದು ಅವರ ಮನಸ್ಸಿಗೆ ಇಷ್ಟವಿಲ್ಲದ ಕೆಲಸವನ್ನು ಮಾಡಲು ಒತ್ತಡ ಹಾಕಬೇಡಿ. ಅದು ಯಾವುದೇ ಪಕ್ಷವಾದರೂ ಸರಿ ಅದು ಯಾವುದೇ ರಾಜಕೀಯ ಮುಖಂಡರಾದರು ಸರಿ ಕಾನೂನು ಸುವ್ಯವಸ್ಥೆ ಕಾಪಾಡುವಾಗ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಥವಾ ಉಳಿದ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕಾದರೆ ರಾಜಕೀಯ ಮಧ್ಯ ಬರಬಾರದು ಆಗ ಉತ್ತಮ ಸಮಾಜ ನಿರ್ಮಾಣವಾಗಲು ಅಸಾಧ್ಯ ಉತ್ತಮ ಸಮಾಜವೇ ಇಲ್ಲವೆಂದ ಮೇಲೆ ಯಾವ ಭಾಗ್ಯ ಕೊಟ್ಟರು ಏನು ಪ್ರಯೋಜನ..? ಇದೇ ವಿಷಯವಾಗಿ ಬರೆಯುವುದಾದರೆ ಸಾಕಷ್ಟು ಇದೆ ಮುಂದಿನ ದಿನಗಳಲ್ಲಿ ಅದನ್ನು ಬರೆಯೋಣ ಸಾಕ್ಷಿ ಸಮೇತ..

ಮೌನಮುರಿದ ಬಿಜೆಪಿ..!

ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್ ರಾಗಿಗುಡ್ಡದಲ್ಲಿ ಹಿಂದೂ ಮತ್ತು ಮುಸ್ಲೀಂ ಸಮುದಾಯ ಅಣ್ಣ ತಮ್ಮನವರಂತಿದ್ದ ಸ್ಥಿತಿಯನ್ನ ನಿಷೇಧಿತ ಪಿಎಫ್ಐ ಹೇಗೆ ಹದಗೆಡೆಸಿತು ಎಂಬುದನ್ನ ನೋಡಿದ್ದೇವೆ. ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ನೀಡಿತ್ತು. ಗಲಭೆ ನಡೆದಿದ್ದೇ ಹಿಂದೂಗಳ ಮನೆಗಳನ್ನ‌ ಖಾಲಿ ಮಾಡಿಸುವ ಹಿಂದಿನ ಉದ್ದೇಶದಿಂದ ರಾಗಿಗುಡ್ಡ ಶಾಂತಿನಗರದಲ್ಲಿ ಸಾಮರಸ್ಯಕ್ಕೆ ಸಾಕ್ಷಿಯಾಗಿ ಹಿಂದೂ ಸಮಾಜದವರು ಅಲ್ಲಿನ 400 ಮನೆಗಳಲ್ಲಿ 150 ಹಿಂದೂಗಳು ಮುಸ್ಲೀಂರಿಗೆ ಬಾಡಿಗೆ ಕೊಟ್ಟಿದ್ದಾರೆ. ಅದು ಹಿಂದೂಗಳ ಸಾಮರಸ್ಯದ ಮನಸ್ಸಾಗಿದೆ. ಅಲ್ಲಿ ಬಂದ ವಾಹನಗಳು, ಗುಂಪಿನಲ್ಲಿರುವ ಯುವಕರ ಬಗ್ಗೆ ಬಿಜೆಪಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದೆ. ರಾಗಿಗುಡ್ಡದ ಒಟ್ಟಾರೆ ಸಾಮರಸ್ಯ ಕದಡಲಾಗಿದೆ ಎಂದು ಆರೋಪಿಸಿದರು.

ಸಾಲು ಸಾಲು ಬಂದ್ ನಿಂದ ಪ್ರತಿಭಟನೆ ನಡೆಸಲು ಆಗಲಿಲ್ಲ ಈ ಹಿನ್ನಲೆಯಲ್ಲಿ ಅ.12 ರಂದು ರಾಗಿಗುಡ್ಡದ ಗಲಭೆಯನ್ನ ವಿರೋಧಿಸಿ  ಮಥುರಾ ಪ್ಯಾರಡೈಸ್ ಎದುರು ಪ್ರತಿಭಟನೆ ಮತ್ತು ಪ್ರತಿಭಟನೆ ಸಭೆ ನಡೆಸಲಾಗುತ್ತದೆ. ಶಾಸಕರು, ಸಂಸದರು, ಸ್ಥಳೀಯ ಮುಖಂಡರು ಮಾಜಿ ಸಚಿವರು ಭಾಗಿಯಾಗಲಿದ್ದಾರೆ.ಇತರರು ಎಂಬ ಪಟ್ಟಿಯಲ್ಲಿ ಅಮಾಯಕರ ದುರ್ಬಳಕೆ ಆಗುತ್ತಿದೆ.

ಈ. ಘಟನೆಯನ್ನ‌ ಮರೆಸುವ ಪ್ರಯತ್ನದಲ್ಲಿ ಏನೇನೋ ಆಗಿದೆ. ಕಟೌಟ್ ಗೆ ಅನುಮತಿ ಪಡೆದಿಲ್ಲ. ಪೊಲೀಸ್ ಅಧಿಕಾರಿ ಅಭಯ್ ಪ್ರಕಾಶ್ ಅಮಾನತ್ತು ಅಮಾಯಕರ ಮೇಲೆ ನಡೆದ ಗಧಾಪ್ರಹಾರ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.

ಒಟ್ಟಾರೆ ರಾಜಕೀಯ ಆಟಗಳು ಏನೇ ಇರಲಿ ಇನ್ನಾದರೂ ಅಧಿಕಾರಿಗಳು ಭ್ರಷ್ಟರಾಗಲು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಕಷ್ಟವಾಗಲು ರಾಜಕೀಯ ಮುಖಂಡರುಗಳು ರಾಜಕೀಯ ಪಕ್ಷಗಳು ಕಾರಣ ವಾಗದಿರಲಿ ಎನ್ನುವುದು ನಮ್ಮ ಹಾಗೂ ಸಾರ್ವಜನಿಕರ ಕಳಕಳಿ.

ರಘುರಾಜ್ ಹೆಚ್‌. ಕೆ.9449553305.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...