Wednesday, April 30, 2025
Google search engine
Homeಶಿವಮೊಗ್ಗನುಡಿದಂತೆ ನಡೆದ ಸಚಿವ ಮಧು ಬಂಗಾರಪ್ಪ..!

ನುಡಿದಂತೆ ನಡೆದ ಸಚಿವ ಮಧು ಬಂಗಾರಪ್ಪ..!


ಅಕ್ಟೋಬರ್ 26ರಂದು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಜನ್ಮ ದಿನಾಚರಣೆಯನ್ನು ನಗರದ ತಾವರೆಕೊಪ್ಪ ಬಿಕ್ಷುಕರ ಪುನರ್ ವಸತಿ ಕೇಂದ್ರದಲ್ಲಿ ಜಿಲ್ಲಾ ಎನ್ಎಸ್ ಯು ಐ ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ , ಮಧು ಬಂಗಾರಪ್ಪನವರು ಭಾಗವಹಿಸಿ ಕೇಕ್ ಕತ್ತರಿಸಿ ನಿರಾಶ್ರಿತರಿಗೆ ಬೆಡ್ ಶೀಟ್ ಗಳನ್ನು ವಿತರಿಸಿ ಮಾತನಾಡುತ್ತಾ, ಹಲವಾರು ಕಾರಣಗಳಿಂದ ತಮ್ಮ ಕುಟುಂಬದಿಂದ ದೂರವಾಗಿ ಭಿಕ್ಷಾಟನೆ ಮಾಡುವ ಸ್ಥಿತಿ ನಿರ್ಮಾಣವಾಗಿರುತ್ತದೆ, ನಿಮ್ಮನ್ನು ಬಿಕ್ಷಾಟನೆಯಿಂದ ಮುಕ್ತಿಗೊಳಿಸಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ನೀಡಿ ಆಹಾರ ಬಟ್ಟೆ ಮತ್ತು ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿ ನಿಮ್ಮ ಬದುಕು ರೂಪಿಸುವ ಕಾರ್ಯ ಕೇಂದ್ರ ನಿರ್ವಹಿಸುತ್ತದೆ, ಇದು ಸಾಮಾಜಿಕ ಜವಾಬ್ದಾರಿ ಕೂಡ, ಸರ್ಕಾರ ನಿಮ್ಮ ಪುನರ್ವಸತಿಗಾಗಿ ಹಾಗೂ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಸಾಕಷ್ಟು ಅನುದಾನವನ್ನು ಬಿಡುಗಡೆಗೊಳಿಸುತ್ತದೆ, ಇದರ ಸದುಪಯೋಗ ಪಡೆದು ನೀವುಗಳು ಉತ್ತಮ ನಡವಳಿಕೆ ಹೊಂದಿ ಮತ್ತೆ ನಿಮ್ಮ ಕುಟುಂಬ ಸೇರುವಂತೆ ಆಗಬೇಕು ಯಾರು ಅನಾಥರಾಗಿ ಬದುಕಬಾರದು ಯಾರು ಹಸಿವಿನಿಂದ ನರಳಬಾರದು ಎಲ್ಲರೂ ಸ್ವಂತ ಸೂರು ಹೊಂದಬೇಕು ಇದು ನಮ್ಮ ತಂದೆ ಬಂಗಾರಪ್ಪಜಿ ಅವರ ಕನಸು ಇದನ್ನು ನನಸು ಗೊಳಿಸಲು ನಾನು ಕೂಡ ಅವರ ಮಗನಾಗಿ ಪ್ರಯತ್ನಿಸುತ್ತೇನೆ ನಮ್ಮ ನಮ್ಮ ತಂದೆ ಬಂಗಾರಪ್ಪಜಿ ಇಲ್ಲದಿರಬಹುದು ಆದರೆ ಅವರ ಆದರ್ಶ ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುವ ಸೌಭಾಗ್ಯ ನನಗಿದೆ ,ಈ ದಿನ ನಮ್ಮ ತಂದೆ ಬಂಗಾರಪ್ಪಜಿ ಅವರ 90ನೇ ಜನ್ಮದಿನಾಚರಣೆ , ಎನ್ ಎಸ್ ಯು ಐ ಕಾರ್ಯಕರ್ತರು ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಕೇಕ್ ಕತ್ತರಿಸಿ ಬೆಡ್ ಶೀಟ್ ನೀಡುವುದರ ಮೂಲಕ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.


ತಾವುಗಳು ನನ್ನಲ್ಲಿ ವಿನಂತಿಸಿದಂತೆ ನಾನು ಎಸ್, ಬಂಗಾರಪ್ಪ ಪೌಂಡೇಶನ್ ಹಾಗೂ ಎಸ್,ಬಂಗಾರಪ್ಪ ಅಭಿಮಾನಿ ಬಳಗ ದಿಂದ 65 ಇಂಚಿನ ಮಿನಿ ಹೋಮ್ ಥಿಯೇಟರ್ ಟಿವಿ ಯನ್ನು ಹಾಗೂ ಎಲ್ಲ 230 ನಿರಾಶ್ರಿತರಿಗೆ ಅತ್ಯುತ್ತಮ ಪಾದರಕ್ಷೆಯನ್ನು ಕೊಡುಗೆಯಾಗಿ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು ಅದರಂತೆ ಈ ದಿನ ಎಸ್ ಬಂಗಾರಪ್ಪಜಿ ಅಭಿಮಾನಿ ಬಳಗದ ಸದಸ್ಯರು ಹಾಗೂ ಎನ್ ಎಸ್ ಯು ಐ ಕಾರ್ಯಕರ್ತರು ಕೇಂದ್ರಕ್ಕೆ ಭೇಟಿ ನೀಡಿ ಸಚಿವ ಮಧು ಬಂಗಾರಪ್ಪನವರು ಮಾತು ಕೊಟ್ಟಂತೆ 65 ಇಂಚಿನ ಮಿನಿ ಹೋಂ ಥಿಯೇಟರ್ ಟಿವಿ ಹಾಗೂ ಎಲ್ಲಾ 230 ನಿರಾಶ್ರೀತರಿಗೂ ಪಾದರಕ್ಷೆಗಳನ್ನು ಈ ದಿನ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಜಿ. ಡಿ.ಮಂಜುನಾಥ್ ಮುಕ್ತಿಯರ್ ಅಹಮದ್ ಮುಹಿಬುಲ್ಲಖಾನ್ ಟಿ.ಡಿ. ಜಿತೇಂದ್ರಗೌಡ ಮಧುಸೂದನ್, ವಿಜಯ್ ಕುಮಾರ್, ಎಂ.ಬಿ. ರವಿಕುಮಾರ್ ಜ್ಯೋತಿ ಅರಳಪ್ಪ, ಟಿ, ಮಂಜಪ್ಪ ಗಿರೀಶ್ ರವಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...