
ಭದ್ರಾವತಿ: ನಗರದ ಟ್ರಾಫಿಕ್ ಪೊಲೀಸ್ ನವರು ಚೆಕ್ ಪೋಸ್ಟ್ ನಲ್ಲಿ ಅರುಣ್ ಕುಮಾರ್ ಎನ್ನುವರ ಮಾರುತಿ ವ್ಯಾನ್ ಅನ್ನು 25.10.2023 ರಂದು ತಪಾಸಣೆ ನಡೆಸಿದ್ದಾರೆ. ಆ ಸಮಯದಲ್ಲಿ ಅವರ ಬಳಿ ಎಲ್ಲಾ ದಾಖಲೆಗಳು ಲಭ್ಯವಿದ್ದವು ಆದರೆ ಮಾರುತಿ ವ್ಯಾನ್ ಇನ್ಸೂರೆನ್ಸ್ ಲ್ಯಾಪ್ಸ್ ಆಗಿತ್ತು ಹಾಗಾಗಿ ಅವರಿಗೆ 500 ರೂ ಗಳ ದಂಡವನ್ನು ವಿಧಿಸಿದ್ದಾರೆ.
ಆದರೆ ಆ ದಂಡವನ್ನು ವಿಧಿಸುವಾಗ ಎಡವಟ್ಟು ಮಾಡಿಕೊಂಡಿದ್ದಾರೆ ಅರುಣ್ ಕುಮಾರ್ ಅವರ ಕಾರ್ ನಂಬರ್ ಹಾಕುವ ಬದಲು ಬೇರೆ ಕಾರ್ ನ್ ನಂಬರನ್ನು ನಮೂದಿಸಿದ್ದಾರೆ.

ಅರುಣ್ ಕುಮಾರ್ ಅವರ ಕಾರ್ ನಂಬರ್ CKP0006 ಎಂದು ಇದೆ ಆದರೆ ದಂಡ ವಿಧಿಸಿರುವ ನಂಬರ್ 000P ಎಂದು ಇದೆ ಹಾಗಾದರೆ ಈ ದಂಡದ ಮೊತ್ತ ಕಟ್ಟುವವರು ಯಾರು..? ಇದು ಯಾರ ನಂಬರ್..? ಉತ್ತರಸಬೇಕಾದವರು ಭದ್ರಾವತಿ ಪೊಲೀಸ್ ನವರು ಅರುಣ್ ಕುಮಾರ್ ಅವರು ಸಾಕಷ್ಟು ಮನವಿ ಮಾಡಿದ್ದರು ಕೂಡ ಅವರ ಕಾರನ್ನು ಬಿಡದೆ ದಂಡ ವಿಧಿಸಿದ್ದಾರೆ. ಎಲ್ಲರಿಗೂ ಇದೇ ಕ್ರಮ ಅನುಸರಿಸುತ್ತಾರ..? ದಂಡ ವಿಧಿಸುವಾಗ ಕೂಡ ಎಡವಟ್ಟು ಮಾಡಿಕೊಂಡಿದ್ದಾರೆ.
ರಘುರಾಜ್ ಹೆಚ್. ಕೆ 9449553305.