
ಶಿವಮೊಗ್ಗ: ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಮೆಟ್ರೋ ಸಮೂಹ ಸಂಸ್ಥೆಗಳ ವತಿಯಿಂದ ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಡಯಾಬಿಟಿಸ್ ವೆಲ್ ನೆಸ್ ಸೆಂಟರ್ ನ ಉದ್ಘಾಟನಾ ಸಮಾರಂಭವು ಯಶಸ್ವಿಯಾಗಿ ನೆರವೇರಿತು.
ವಿಶೇಷವೆಂದರೆ ರೋಗಿಗಳಿಂದಲೇ ಸಮಾರಂಭವನ್ನು ಉದ್ಘಾಟಿಸಲಾಯಿತು ಇವರಿಗೆ ಶಿವಮೊಗ್ಗ ಶಾಸಕರಾದ ಚನ್ನಬಸಪ್ಪ ಚೆನ್ನಿ ಅವರು ಸಾಥ್ ನೀಡಿದರು.
ಸಮಾರಂಭದಲ್ಲಿ ಶಿವಮೊಗ್ಗದ ಶಾಸಕರಾದ ಎಸ್. ಎನ್ ಚೆನ್ನಬಸಪ್ಪ ಮತ್ತು ಜಿಲ್ಲಾ ಆರೋಗ್ಯಧಿಕಾರಿಗಳಾದ ಡಾ. ರಾಜೇಶ್ ಸುರಗಿಹಳ್ಳಿ, ಮೆಟ್ರೋ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಪಿ. ಲಕ್ಷ್ಮೀನಾರಾಯಣ ಆಚಾರ್, ಸಿ. ಇ . ಓ ಆದ ಡಾ. ತೇಜಸ್ವಿ ಮತ್ತು ವೈದ್ಯಕೀಯ ನಿರ್ದೇಶಕರಾದ ಡಾ. ಪೃಥ್ವಿ ಬಿ. ಸಿ ಹಾಗೂ ಮೆಟ್ರೋ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆಸ್ಪತ್ರೆಯ ನಿರ್ದೇಶಕರಾದ ಡಾಕ್ಟರ್ ಪೃಥ್ವಿಯವರು ಮಾತನಾಡಿ ಡಯಾಬಿಟಿಸ್ ರೋಗಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಡಯಾಬಿಟಿಸ್ ರೋಗಿಗಳಿಗೆ ಅವರ ರೋಗದ ತೀವ್ರತೆ ಯಾವ ಪ್ರಮಾಣದಲ್ಲಿದೆ ಎನ್ನುವುದನ್ನು ಪತ್ತೆ ಹಚ್ಚುವ ಯಂತ್ರ ಇದಾಗಿದ್ದು ಇದರ ಆಧಾರದ ಮೇಲೆ ರೋಗಿಗಳು ಯಾವ ಪಾದರಕ್ಷೆಗಳನ್ನು ಧರಿಸಬೇಕು ಎನ್ನುವ ನಿರ್ಧಾರವನ್ನು ಕೂಡ ಮಾಡಿ ನಂತರ ಅವರಿಗೆ ಆ ಪಾದರಕ್ಷೆಗಳನ್ನು ಕೂಡ ನೀಡುವ ದೃಷ್ಟಿಯಿಂದ ವಿಶೇಷವಾಗಿ ವಿನೂತನವಾಗಿ ಡಯಾಬಿಟಿಸ್ ಪೇಷಂಟ್ ಗಳಿಗೆ ಗೋಸ್ಕರ ನೇ ಈ ಯಂತ್ರವನ್ನು ತರಿಸಲಾಗಿದ್ದು ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಡಾಕ್ಟರ್ ಪೃಥ್ವಿಯವರು ತಿಳಿಸಿದರು.