
ಶಿವಮೊಗ್ಗ : ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು.ಜಯನಗರ ಹಾಗೂ ಸಿಇಎನ್ ಪೊಲೀಸ್ ಠಾಣೆ ಹಾಗೂ ಮೆಗ್ಗಾನ್ ರಕ್ತನಿಧಿ ಶಿವಮೊಗ್ಗ ರವರ ಸಂಯುಕ್ತ ಆಶ್ರಯದಲ್ಲಿ ಸಿದ್ದೇಗೌಡ ಪಿ.ಐ ಜಯನಗರ ಠಾಣೆ ಹಾಗೂ ದೀಪಕ್ ಪಿಐ ಸಿಇಎನ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ
ರಕ್ತದಾನ ಶಿಬಿರ ಆಯೋಜಿಸಿದ್ದು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಅವರ ಕುಟಂಬದವರು ಹಾಗೂ ಸಾರ್ವಜನಿಕರು ಸೇರಿದಂತೆ ಒಟ್ಟು 23 ಜನ ರಕ್ತದಾನ ಮಾಡಿರುತ್ತಾರೆ.

ರಕ್ತದಾನ ಮಹಾದಾನ ವಾಗಿದ್ದು ಪೊಲೀಸ್ ಠಾಣೆಯಲ್ಲಿ ಈ ಶಿಬಿರ ಏರ್ಪಡಿಸಿರುವುದು ಒಂದು ಉತ್ತಮ ಬೆಳವಣಿಗೆಯಾಗಿದ್ದು ಎಲ್ಲಾ ಠಾಣೆಗಳಲ್ಲೂ ಇದು ಹೀಗೆ ಮುಂದುವರೆದರೆ ಒಳ್ಳೆಯದು.
