
ತೀರ್ಥಹಳ್ಳಿ: ತಾಲೂಕಿನ ಮೇಗರವಳ್ಳಿಯ ನಾಲುರೂ ಸಮೀಪ ಕೋಕೂಡು ಶಿವಳ್ಳಿ ಹತ್ತಿರ 16 ವರ್ಷದ ಬಾಲಕಿಯ ಮೇಲೆ 5 ಜನರಿಂದ ನಿರಂತರವಾಗಿ ಎರಡು ವರ್ಷಗಳಿಂದ ಅತ್ಯಾಚಾರ ನಡೆಯುತ್ತಿದ್ದು ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಸ್ವತಃ ಚಿಕ್ಕಪ್ಪ ಹಾಗೂ ರಕ್ತ ಸಂಬಂಧಿಗಳೇ ಈ ಅತ್ಯಾಚಾರದಲ್ಲಿ ಭಾಗಿಯಾಗಿರುವುದು ದುರಂತದ ಸಂಗತಿ.
ಏನಿದು ಪ್ರಕರಣ:
ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಸಮೀಪ ನಾಲೂರು ಹತ್ತಿರ ಕೋಕೂಡು ಶಿವಳ್ಳಿ ಎಂಬ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿರುವ ದಂಪತಿಗಳಿಗೆ ಮೂರು ಜನ ಹೆಣ್ಣು ಮಕ್ಕಳು ಆ ಮೂರು ಜನರಲ್ಲಿ ಕೊನೆಯವಳು ಈ ಬಾಲಕಿ ವಿದ್ಯಾಭ್ಯಾಸ ಮಾಡಿ ಬಿಟ್ಟು ಮನೆಯಲ್ಲಿದ್ದಾಳೆ. ಈಕೆಯ ಮೇಲೆ ಕಳೆದ ಎರಡು ವರ್ಷಗಳಿಂದ ಅಂದರೆ ಈಕೆ 14 ವರ್ಷವಿದ್ದಾಗ ಈಕೆಯ ಸ್ವತಃ ಚಿಕ್ಕಪ್ಪ ಹಾಗೂ ರಕ್ತ ಸಂಬಂಧಿಗಳು ಸುಮಾರು 5 ಜನರು ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ. ಮನೆಯ ಸಮೀಪದ ಕಾಡಿನಲ್ಲಿ ಈ ಕೃತ್ಯವನ್ನು ಎಸಗಿದ್ದು ಇತ್ತೀಚಿಗೆ ಈ ಬಾಲಕಿಗೆ ದೈಹಿಕ ಬದಲಾವಣೆಗಳು ಆದಾಗ ನಿನ್ನೆ ಸಮೀಪದ ಆಸ್ಪತ್ರೆಯಲ್ಲಿ ತೋರಿಸಿದಾಗ ಬಾಲಕಿ ಗರ್ಭಿಣಿ ಎನ್ನುವುದು ಪೋಷಕರಿಗೆ ಗೊತ್ತಾಗುತ್ತದೆ ಆಗ ಈ ಪ್ರಕರಣ ಬೈಯಲಿಗೆ ಬರುತ್ತದೆ.
ಹೆದರಿಸಿ ಬೆದರಿಸಿ ಅತ್ಯಾಚಾರ ಮಾಡಿರುವ ಪಾಪಿ ಚಿಕ್ಕಪ್ಪ ಹಾಗೂ ಈ ಸೋದರ ಸಂಬಂಧಿಗಳಿಗೆ ಘನ ನ್ಯಾಯಾಲಯ ಕಠಿಣ ಶಿಕ್ಷೆ ನೀಡಬೇಕು. ಇದು ಒಂದು ಎಚ್ಚರಿಕೆಯ ಗಂಟೆಯಾಗಬೇಕು ಇನ್ನು ಮುಂದೆ ಈತರದ ಪ್ರಕರಣಗಳು ಮರುಕಳಿಸಬಾರದು.