
ತೀರ್ಥಹಳ್ಳಿ : ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಒಂದು ವಾರದಲ್ಲಿ ಮೂರು ಪ್ರಕರಣಗಳು ಬೆಳಕಿಗೆ ಕೇವಲಮದುವೆಗೆ 13 ದಿನ ಇರುವ ವೇಳೆಯಲ್ಲಿ ಮನೆಯ ಸ್ನಾನದ ಕೊಠಡಿ ಪಕ್ಕದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸಂಭವಿಸಿದೆ.
ಕಟ್ಟೆಹಕ್ಲು ಚೈತ್ರ (26 ವರ್ಷ ) ಮೃತಪಟ್ಟ ದುರ್ದೈವಿ. ಫೆಬ್ರವರಿ 4 ರಂದು ಚೈತ್ರ ಅವರಿಗೆ ವಿವಾಹ ನಿಗದಿ ಪಡಿಸಲಾಗಿತ್ತು. ಆದರೆ ಮನೆಯವರ ಹೇಳಿಕೆಯ ಪ್ರಕಾರ ಮಾನಸಿಕ ಸ್ಥಿತಿಯಿಂದ ಹಾಗೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ . ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ರಾತ್ರಿ
ಮದುವೆ ಬೇಡ ಎಂದು ಹೇಳಿದ್ದರಂತೆ. ನಂತರ ರಾತ್ರಿ ನೇಣಿಗೆ ಶರಣಾಗಿದ್ದಾಳೆ.
ಎಂ ಕಾಂ ಪದವಿಧರೆ ಆಗಿರುವ ಚೈತ್ರ ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೈತ್ರ ಆತ್ಮಹತ್ಯೆಗೆ ಕಾರಣವೇನು ..? ಕುಟುಂಬಸ್ಥರ ಪ್ರಕಾರ ಆಕೆಗೆ ಮಾನಸಿಕ ಸ್ಥಿತಿ ಸರಿ ಇಲ್ಲ ಎಂದಾದರೆ ಆಕೆಗೆ ಚಿಕಿತ್ಸೆ ಕೊಡುತ್ತಿದ್ದಾರಾ..? ಅಥವಾ ಮಾನಸಿಕವಾಗಿ ಆರೋಗ್ಯ ಸರಿಯಿಲ್ಲದ ಯುವತಿಗೆ ಮದುವೆ ಮಾಡಲು ಮುಂದಾಗಿದ್ದು ಏಕೆ ..?ಯುವತಿಯೇ ಮದುವೆ ಬೇಡ ಎಂದು ಹೇಳಿದ್ದರು ಮನೆಯವರು ಬಲವಂತವಾಗಿ ಮದುವೆ ಮಾಡಲು ಒಪ್ಪಿಸಿದೆ ಈಕೆಯ ಆತ್ಮಹತ್ಯೆಗೆ ಕಾರಣವಾಯಿತೇ ..?ಎನ್ನುವ ಎಲ್ಲಾ ಅಂಶಗಳು ಪೊಲೀಸ್ ತನಿಖೆಯಿಂದ ಹೊರಬರಬೇಕಾಗಿದೆ.