
ಒಂದು ಸಂಬಂಧ ಕೇವಲ ಬ್ಯಾಂಕ್ ಅಥವಾ ಪ್ರವಾಸಕ್ಕೆ ಸೀಮಿತವಾಗಿಲ್ಲ ಇಲ್ಲಿ ಸೇರಿರುವ ಮಹಿಳೆಯರನ್ನ ನೋಡಿದರೆ ಇದಕ್ಕೆ ಮಿಗಿಲಾದ ಸಂಬಂದ ಎಂತದು ಗೊತ್ತಾಗುತ್ತದೆ.
ಮಾರಿಕಾಂಬ ಜಾತ್ರೆ ದಿನ ರಾತ್ರಿ ಬಿ.ವೈ ರಾಘವೇಂದ್ರ ಫೋನ್ ಮಾಡಿ ದೇವರಾಣೆ ನಿನಗೆ ಟಿಕೆಟ್ ಎಂದರು ಆದರೆ ಎರಡು ದಿನ ನಂತರ ಬಸವರಾಜ ಬೊಮ್ಮಾಯಿ ಗೆ ಟಿಕೆಟ್ ಸಿಕ್ಕಿತು. ದೇವರ ಮೇಲೆ ಆಣೆ ಮಾಡಿ ಸುಳ್ಳು ಹೇಳಿದ ರಾಘವೇಂದ್ರ ಗೆ ದೇವರೆ ನೋಡಿಕೊಳ್ಳಲಿ.
ನಮ್ಮ ಕುಟುಂಬದ ಮೇಲೆ ಯಾಕೆ ಈರೀತಿ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ.
ಪ್ರತಿ ವರ್ಷ ಓಂ ಶಕ್ತಿ ಪ್ರವಾಸ ಮಹಿಳೆಯರು ಮಾಡುತ್ತಾರೆ ಈ ಬಾರಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಹಾಗು ನಮ್ಮ ತಂದೆಯವರು ಚುನಾವಣೆಯಲ್ಲಿ ಗೆಲ್ಲಲಿ ಎಂದು ಓಂ ಶಕ್ತಿ ಬಳಿ ಕೇಳಿಕೊಳ್ಳೋಣ.
ತಂದೆಯವರು ಶಿವಮೊಗ್ಗ ಎಂ.ಪಿ ಆಗಲಿ ಎಂದು ಭಗವಂತ ನನಗೆ ಟಿಕೆಟ್ ತಪ್ಪಿಸಿದ್ದಾನೆ.
ಏ.12 ತಂದೆಯವರು ನಾಮಪತ್ರ ಸಲ್ಲಿಸುತ್ತಾರೆ ನನಗೆ ಹದಿನೈದು ಸಾವಿರ ಅಕ್ಕ ತಂಗಿಯರಿದ್ದಾರೆ ದಯಮಾಡಿ ನೀವೆಲ್ಲರೂ ಅಂದು ಬಂದು ನಮ್ಮನ್ನು ಆಶೀರ್ವಾದ ಮಾಡಿ.
ನಾನು ಏನು ತಪ್ಪು ಮಾಡಿದ್ದೇನೆ ಅಲ್ಲಿ ಒಂದು ಮನೆಯಲ್ಲಿ ಒಬ್ಬರು ಎಂ.ಪಿ ಹಾಗು ಒಬ್ಬರು ಎಂ.ಎಲ್.ಎ ಇದ್ದಾರೆ ಇರಲಿ ಪರವಾಗಿಲ್ಲ ಆದರೆ ನಾನು ಮಾಡಿರುವ ತಪ್ಪೇನು ಎಂದು ಬಿಜೆಪಿ ಪಕ್ಷಕ್ಕೆ ಹಾಗು ಯಡಿಯೂರಪ್ಪರವರಿಗೆ ಪ್ರಶ್ನಿಸುತ್ತೇನೆ.
ನಾಮಪತ್ರ ದಿನ ನಿಮ್ಮ ಉಪಸ್ಥಿತಿ ನೋಡಿ ಎದುರಾಳಿಗಳ ಎದೆ ನಡುಗಬೇಕು.