
ಶಿವಮೊಗ್ಗ: ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರುಕ್ಸರ್ ಅಂಜುಂ ಎಂಬ ಲೇಡಿ ಡಾಕ್ಟರ್ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿದೆ.
ಯಾರು ಈ ಲೇಡಿ ಡಾಕ್ಟರ್..?!
ಮದರಿಪಾಳ್ಯದ ನಿವಾಸಿ ಸಮೀವುಲ್ಲಾ ನವರ ದೊಡ್ಡ ಮಗಳಾದ ರುಕ್ಸರ್ ಅಂಜುಂ ಬಿಎಎಂಎಸ್ ವ್ಯಾಸಂಗ ಮಾಡಿದ್ದು ಶಿವಮೊಗ್ಗ ನಂಜಪ್ಪ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಪ್ರತಿ ದಿನ ಮನೆಯಿಂದ ಆಸ್ಪತ್ರೆಗೆ ಓಡಾಡಿಕೊಂಡಿದ್ದರು. ಪ್ರತಿ ದಿನದಂತೆ ದಿನಾಂಕ 29/03/2024 ರಂದು ಬೆಳಿಗ್ಗೆ 09:00 ಗಂಟೆಗೆ ಆಸ್ಪತ್ರೆಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯಿಂದ ಹೋಗಿದ್ದರು. ನಂತರ ಸಂಜೆ 05:00 ಗಂಟೆಯಾದರು ಮನೆಗೆ ಬಾರದೇ ಇದ್ದಾಗ ಹಳೇಮಂಡ್ಲಿಯಲ್ಲಿರುವ ಅವರ ತಂಗಿಯ ಮನೆಯಾದ ಪೌಜಿಯಾ ಬಾನುರವರ ಮನೆಗೆ ಹೋಗಿ ವಿಚಾರಿಸಿದಾಗ ರುಕ್ಸಾರ್ ಅಂಜುಂ ರವರು ನಮ್ಮ ಮನೆಯ ಹತ್ತಿರ ಬೈಕ್ ನಿಲ್ಲಿಸಿ ನಾನು ಬರುತ್ತೇನೆ ಎಂದು ಹೇಳಿಕೆ ಬೈಕ್ ಕೀಯನ್ನು ಕೊಟ್ಟು ಹೋಗಿರುತ್ತಾರೆ ಎಂದು ತಿಳಿಸುತ್ತಾರೆ.
ನಂತರ ತಂದೆ ಸಮಿಉಲ್ಲಾ ಅವರು ರುಕ್ಸಾರ್ ಬಾನು ರವರ ಪೋನ್ ನಂಬರ್ ಗೆ ಕರೆ ಮಾಡಿದಾಗ 9972678792, 7019652455 ಆಗಿದ್ದು ಸ್ವಿಚ್ ಆಫ್ ಎಂದು ಬರುತ್ತದೆ.
ನಂತರ ಸಂಬಂಧಿಕರ ಮನೆಯಲ್ಲಿ ಸ್ನೇಹಿತರ ಮನೆಯಲ್ಲಿ ವಿಚಾರಿಸಿದರೂ ಕೂಡ ಇಲ್ಲಿಯವರೆಗೂ ಸುಳಿವು ಕಂಡುಬಂದಿಲ್ಲ ಆದ್ದರಿಂದ ದೊಡ್ಡಪೇಟೆ ಠಾಣೆಗೆ ದೂರು ನೀಡಿರುವ ತಂದೆ ಸಮೀವುಲ್ಲಾ ಅವರು ತನ್ನ ಮಗಳ ಚಹರೆ ಹಾಗೂ ಹಾಕಿಕೊಂಡಿರುವ ವಸ್ತ್ರದ ಸಂಪೂರ್ಣ ಮಾಹಿತಿ ನೀಡಿ ಮಗಳನ್ನು ಹುಡುಕಿ ಕೊಡಿ ಎಂದು ದೂರು ನೀಡಿದ್ದಾರೆ.
ಲೇಡಿ ಡಾಕ್ಟರ್ ಹೋಗಿದ್ದಾದರೂ ಎಲ್ಲಿಗೆ..?
ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಲೇಡಿ ಡಾಕ್ಟರ್ ಹೋಗಿದ್ದಾದರೂ ಎಲ್ಲಿಗೆ ಎನ್ನುವ ಪ್ರಶ್ನೆ ಸಹಜವಾಗಿಯೇ ಡಾಕ್ಟರ ಸಂಬಂಧಿಕರು ಸ್ನೇಹಿತರು ಹಾಗೂ ಅವರ ಜೊತೆ ಕಾರ್ಯನಿರ್ವಹಿಸುತ್ತಿದ್ದ ವೈದ್ಯರಲ್ಲಿ ಆತಂಕಕ್ಕೆ ಇಡು ಮಾಡಿದೆ. ಹಾಗೆ ಹೋಗಿದ್ದಾದರೂ ಎಲ್ಲಿಗೆ ಹಾಗೂ ಏತಕ್ಕೆ ಹೋದರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು ಏಕೆ ಇದರ ಹಿಂದೆ ಯಾರಾದರೂ ಅವರಿಗೆ ವೈಯಕ್ತಿಕವಾಗಿ ಹಿಂಸೆ ನೀಡಿದ್ದಾರಾ ಎಲ್ಲಾ ಮಾಹಿತಿಗಳು ಅವರ ಸಿಕ್ಕ ನಂತರ ಗೊತ್ತಾಗುತ್ತದೆ ಅಲ್ಲದೇ ಅವರ ಸಂಬಂಧಿಕರು ಸ್ನೇಹಿತರು ಅವರ ಜೊತೆ ಕಾರ್ಯನಿರ್ವಹಿಸುತ್ತಿದ್ದರನ್ನು ಸಂಪೂರ್ಣವಾಗಿ ವಿಚಾರಿಸಿದಾಗ ಸತ್ಯ ಹೊರ ಬರಬಹುದು.
ಲೇಡಿ ಡಾಕ್ಟರ್ ನಾಪತ್ತೆಯ ಸುತ್ತ ಅನುಮಾನಗಳ ಹುತ್ತಾ..?! ಏರ್ಪಟ್ಟಿದ್ದು ಪೊಲೀಸರ ಸಮಗ್ರ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ.