
ನವುಲೆಯ ಸರ್ಕಾರಿ ನೌಕರರ ನೀಲಮ್ಮ ಜ್ಞಾನೇಶ್ವರ ಬಡಾವಣೆಯ (ಸಾನ್ವಿ ಲೇಔಟ್ ನ ದೊಡ್ಡ ನೀರಿನ ಟ್ಯಾಂಕ್ ಸಮೀಪ) ಮುಖ್ಯ ರಸ್ತೆಯಲ್ಕಿ ಕಳೆದೊಂದು ವಾರದಿಂದ ಒಳ ಚರಂಡಿಯು ಬ್ಲಾಕ್ ಆಗಿ ಕೊಚ್ಚೆ ನೀರು ರಸ್ತೆಯ ಮೇಲೇ ಹರಿಯುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ನೌಕರರ ಸಂಘ ಅಭಿವೃದ್ಧಿಪಡಿಸಿದ ಈ ಬಡಾವಣೆಯ ಯುಜಿಡಿ ಗೆ ಸೋಕ್ ಪಿಟ್ ಟ್ಯಾಂಕ್ ಇದೆಯೋ? ಅಥವಾ ಮುಂದೆ ಎಲ್ಲಿಗೆ ಇದರ ಸಂಪರ್ಕ ಕಲ್ಪಿಸಲಾಗಿದೆ ಎಂಬುದರ ಬಗ್ಗೆ ಸ್ಥಳೀಯರಿಗೆ ಯಾವ ಮಾಹಿತಿಯೂ ಇಲ್ಲವಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಲು ಬಡಾವಣೆಯ ಅಧ್ಯಕ್ಷರಾದ ಬಾಲಾಜಿ ದೇಶಪಾಂಡೆ ಆಗ್ರಹಿಸಿದ್ದಾರೆ.