
ಶಿವಮೊಗ್ಗ ಸೈಬರ್ ಕ್ರೈಂನಲ್ಲಿ ವಿಭಾಗದಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ರೆಹಮಾನ್ ಇಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದು 1 ಲಕ್ಷ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ವಾಸುದೇವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಮಟ್ಕಾ ದಂದೆ ನಡೆಸುವ ಸಲುವಾಗಿ ರೂ.1,20,000 ಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ರೆಹಮಾನ್ ಮನೆಯ ಹತ್ತಿರ ಆರ್‌ಎಂಎಲ್ ನಗರ ರಫೀಕ್ ಎಂಬ ಮಟ್ಕಾ ಬಿಡರ್ ಬಳಿ ರೂ. 1,20,000 ಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗುತ್ತಿದೆ.
ಇದರ ಬಾಪ್ತಾಗಿ ರೂ. 1 ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.