Wednesday, April 30, 2025
Google search engine
Homeಶಿವಮೊಗ್ಗಹರತಾಳು ಹಾಲಪ್ಪ ನಿಯತ್ತಿಲ್ಲದ ನಾಯಿ ಬೇಳೂರು ಗೋಪಾಲಕೃಷ್ಣ..!

ಹರತಾಳು ಹಾಲಪ್ಪ ನಿಯತ್ತಿಲ್ಲದ ನಾಯಿ ಬೇಳೂರು ಗೋಪಾಲಕೃಷ್ಣ..!

ಶಿವಮೊಗ್ಗ : ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು  ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಗೆ ಕಾನೂನುಬಾಹಿರವಾಗಿ ನೀಡಿದ 240 ಎಕರೆ ಜಮೀನಿನನಲ್ಲಿ 230 ಎಕರೆ ವಾಪಸ್ ಪಡೆಯಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವುದಾಗಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೈಲೀಡ್ ನಲ್ಲಿ ಗೆದ್ದೇ ಗೆಲ್ತಾರೆ:

ಜಿದ್ದಾಜಿದ್ದಿ ಚುನಾವಣೆ ನಡೆಯುತ್ತಿದೆ. ನೂರಕ್ಕೆ ನೂರು ಗೀತಾ ಶಿವರಾಜ್ ಕುಮಾರ್ ಗೆಲ್ಲೋದು ಖಚಿತ.
ಕೆಜೆಪಿಗೆ ಹೋಗಿಲ್ಲ ಎಂಬ ಒಂದೇ ಕಾರಣಕ್ಕೆ ಈಶ್ವರಪ್ಪರನ್ನು ದೂರ ಇಡಲಾಗಿದೆ. ಹಿಂದುತ್ವದ ಬಿಜೆಪಿ ಕಟ್ಟಾ ಅಭಿಮಾನಿ ಈಶ್ವರಪ್ಪ ಈಗ ಅಪ್ಪ ಮಕ್ಕಳ ಹಿಂದೆ ಬಿದ್ದಿದ್ದಾರೆ.

ಮಧು ಬಂಗಾರಪ್ಪ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಬೈಂದೂರಿನಲ್ಲೂ ಅತ್ಯಂತ ಹೆಚ್ಚಿನ ಬೆಂಬಲ ಇದೆ. ಹಿಂದೆ ರಾಘವೇಂದ್ರ 75 ಸಾವಿರ ಮತಗಳ ಲೀಡ್ ಪಡೆದಿದ್ದರು. ಈಗ ಕಾಂಗ್ರೆಸ್ ಆ ಲೀಡ್ ಪಡೆಯಲಿದೆ.

ಅಪ್ಪ ಮಕ್ಕಳು ಆಸ್ತಿ ಮಾಡಿದ್ದೇ ಸಾಧನೆ. 18 ವರ್ಷವಾದರೂ ಹೈವೇ ಸಂಪೂರ್ಣ ಆಗಿಲ್ಲ‌. ತಮ್ಮ ಮಾಲೀಕತ್ವದ ಕಾಲೇಜಿಗೆ ಬಂದು ಹೋಗಲಷ್ಟೇ ಹೈವೇ ಮಾಡಿದ್ದಾರೆ. ಬಸ್ ನಿಲ್ದಾಣಗಳ ನಿರ್ಮಾಣ ಬಿಟ್ಟರೆ ಮತ್ತೇನಾಗಿದೆ. ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದು ಬಿಟ್ಟರೆ ಅದರ ಅಕ್ಕಪಕ್ಕದಲ್ಲೇ ಬೇನಾಮಿ ಆಸ್ತಿ ಮಾಡಿದ್ದಾರೆ.

ಸಾಯಿ ಗಾರ್ಮೆಂಟ್ಸ್ ಗೆ 240 ಎಕರೆ ಜಾಗ ನೀಡುವಲ್ಲಿ ಸಂಸದರ ಕೈವಾಡವಿದೆ. ಬೇನಾಮಿ ಶಂಕೆ :

ಬಂಗಾರಪ್ಪ ಕೊಟ್ಟ ಯೋಜನೆಗಳನ್ನು ಮುಂದಿಟ್ಟುಕೊಂಡು ನಾವೂ ಮತ ಕೇಳುತ್ತಿದ್ದೇವೆ. ಹೈಲೀಡ್ ನಮ್ಮದೇ.

ಜೂನ್ 4 ರಿಂದ ಕುಟುಂಬ ರಾಜಕಾರಣ ಕೊನೆಗೊಳಿಸ್ತೀವಿ ಅಂತ ಬಿಜೆಪಿಯ ಶಾಸಕ ಯತ್ನಾಳ್ ಹೇಳಿದ್ದಾರೆ. ಈಶ್ವರಪ್ಪ ಕೂಡ ಹೇಳುತ್ತಿದ್ದಾರೆ. ಅಂದರೆ, ರಾಘವೇಂದ್ರ ಸೇರಿದಂತೆ ಯಾರೂ ಬಿಜೆಪಿಯಿಂದ ಗೆಲ್ಲೋದಿಲ್ಲ.

ಕಾಂಗ್ರೆಸ್ ಅಧಿಕಾರದಲ್ಲಿದೆ. ನಮ್ಮ ಅಭ್ಯರ್ಥಿ ಗೆಲ್ಲೋದು ಖಚಿತ. ಕಾಂಗ್ರೆಸ್ ಪಕ್ಷ ಮೇಲುಗೈ ವಾತಾವರಣವಿದೆ. ಮೋದಿ, ಶಾ ಹಿಂದಿನ ಚುನಾವಣೆಯಲ್ಲೂ ಬಂದಿದ್ರು. ಬಂದ ಕಡೆ ಗೆದ್ದಿಲ್ಲ. ಈಗಲೂ ಗೆಲ್ಲೋಲ್ಲ.

ಏತ ನೀರಾವರಿ ಕಾಂಗ್ರೆಸ್ ನೀಡಿದ್ದು. ಸಂಸದರು ಸುಳ್ಳು ಹೇಳ್ತಿದ್ದಾರೆ. ಶಿಕಾರಿಪುರ ಬಿಟ್ಟರೆ ಮತ್ಯಾವ ತಾಲ್ಲೂಕಲ್ಲೂ ಸಾಧನೆ ಆಗಿಲ್ಲ. ಬಸ್ ನಿಲ್ದಾಣಗಳ ಸೃಷ್ಟಿ ಅಷ್ಟೇ. ಅದಕ್ಕೆ ಅವರು ಬಸ್ ಸ್ಟ್ಯಾಂಡ್ ರಾಘು.

ಕಲ್ಲು ಹೊಡೆದ ಕಡೆ ಯಡಿಯೂರಪ್ಪರ ಆಸ್ತಿ ಇದೆ. ಇಡಿ , ಐಟಿ ಕಣ್ಮುಚ್ಚಿ ಕುಳಿತಿದೆ. ಚುನಾವಣಾ ಬಾಂಡ್ ಹೆಸರಲ್ಲಿ ಗೋಮಾಂಸ ಮಾರಾಟಗಾರರಿಂದಲೂ ಹಣ ಪಡೆದಿದ್ದಾರೆ. ಸಾಯಿ ಗಾರ್ಮೆಂಟ್ಸ್ ನಲ್ಲಿ ಸಂಸದರ ಪಾತ್ರವೂ ಇದೆ ಎನ್ನುವ ಶಂಕೆ ಇದೆ.

ಸಂಸತ್ ನಲ್ಲಿ ಧ್ವನಿ ಎತ್ತಲೇ ಇಲ್ಲ ಈ ಸಂಸದರು. ಪ್ರವಾಹ, ಬರ ಪರಿಹಾರದಲ್ಲಿ ಹಣ ಕೊಡಿಸಲಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಮೇಲೆ ಚಪ್ಪಡಿ ಎಳೆದಿದ್ದಾರೆ ಸಂಸದರು, ಬಿಜೆಪಿ ಶಾಸಕರು.

ಕೋಟಾ ಶ್ರೀನಿವಾಸ ಪೂಜಾರಿ ಬಳಿ 62 ಕೋಟಿ ಮೌಲ್ಯದ ಆಸ್ತಿ ಇದೆ. ಅಂಥವರು ಗಂಜಿ ಕುಡಿದು ರಾಜಕಾರಣ ಮಾಡ್ತಾರಾ?

ಸ್ವಾಭಿಮಾನ ಎಂದು ಗೆದ್ದಿದ್ರು. ಈಗ ಅದನ್ನೇ ಬಿಟ್ಟು ತಮ್ಮ ರಾಜಕೀಯ ಜೀವನ ಹಾಳು ಮಾಡಿಕೊಂಡ್ರು…

ಸಾಗರದಲ್ಲಿ ಹೈ ಲೀಡ್ ಕೊಡ್ತೀವಿ. ಒಳ್ಳೇ ಹವಾ ಇದೆ: 

ಗೀತಾ ಶಿವರಾಜ್ ಕುಮಾರ್ ಮನೆ ಇಲ್ಲೇ ಇದೆ. ಗೀತಕ್ಕನ ಮನೆಯೂ ಶಿವಮೊಗ್ಗದಲ್ಲೇ ಇದೆ. ಆ ಹರತಾಳು ಹಾಲಪ್ಪನಿಗೆ ನಾಯಿಗಿರೋ ನಿಯತ್ತೂ ಇಲ್ಲ. ಬಂಗಾರಪ್ಪನೆಯಲ್ಲಿ ದೊಡ್ಡ ನಾಯಿ ಇದ್ರೂ ಹೋಗ್ತಿದ್ದ…ಯಾರ ಮನೆ ಬೆಂಗಳೂರಲ್ಲಿಲ್ಲ…ಎಲ್ಲರದೂ ಇದೆ…

ಇವತ್ತಿನ ಸಮೀಕ್ಷೆ ಪ್ರಕಾರ, 20 ಸೀಟ್ ಮೇಲೆ ಗೆಲ್ತೀವಿ. ಮೋದಿ- ಶಾ ಅಲೆ ಇಲ್ಲವೇ ಇಲ್ಲ:

ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಗೆ 240 ಎಕರೆ ಜಾಗ ನೀಡಿರುವ ಬಹುದೊಡ್ಡ ಹಗರಣ ಬಯಲಾಗಬೇಕು. ಇದರ ಹಿಂದೆ ಪ್ರಭಾವಿಗಳಿದ್ದಾರೆ. ಕೂಡಲೇ 10 ಎಕರೆ ಜಾಗವಷ್ಟೇ ಕೊಟ್ಟು ಉಳಿದ 230 ಎಕರೆ ಜಾಗವನ್ನು ಸರ್ಕಾರ ವಾಪಸ್ ಪಡೆಯಬೇಕು. ಇದಕ್ಕಾಗಿ ಒತ್ತಾಯಿಸಿ ತೀವ್ರ ಹೋರಾಟ ಮಾಡುವವನೇ. ಇಲ್ಲದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವುದು ಖಂಡಿತ….

ರಾಮೇಶ್ವರ ಕೆಫೆ ಬಾಂಬ್ ಪ್ರಕರಣದಲ್ಲಿ  ಯಾರ ಪಾತ್ರ ಇದ್ದರೂ ಅವರನ್ನು ಗುಂಡಿಟ್ಟು ಕೊಲ್ಲಿ :

ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಪ್ರಕರಣದಲ್ಲಿ ಯಾರೇ ಇದ್ದರೂ ಕೂಡಲೇ ಅವರನ್ನು ಗುಂಡು ಹೊಡೆಯಬೇಕು. ಅವರು ಮುಸ್ಲೀಮರೇ ಇರಲಿ, ಹಿಂದೂಗಳೇ ಇರಲಿ, ಕ್ರಿಸ್ತರೇ ಇರಲಿ…ಬಾಂಬ್ ಹಾಕುವ ಪಾಪಿಷ್ಠರನ್ನು ಗುಂಡು ಹೊಡೆದೇ ಬಿಡಬೇಕು….

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...